Advertisement

ಚುನಾವಣೆ ಸೋಲು: ಮೇ ವಿರುದ್ಧ ಬಂಡಾಯದ ಧ್ವನಿ

02:08 PM Jun 12, 2017 | Team Udayavani |

ಲಂಡನ್‌: ಸಾರ್ವತ್ರಿಕ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ ಬ್ರಿಟನ್‌ ಪ್ರಧಾನಿ ಥೆರೇಸಾ ಮೇ ಅವರನ್ನು ಪ್ರಧಾನಿ ಹುದ್ದೆಯಿಂದ ಜಾಗ ಖಾಲಿ ಮಾಡಿಸಲು ತಯಾರಿ ನಡೆದಿದೆಯೇ? ಕನ್ಸರ್ವೇಟಿವ್‌ ಪಕ್ಷದ ನಾಯಕನಾಗಿ ಥೆರೇಸಾ ಮೇ ಅವರ ಸ್ಥಾನವನ್ನು ತುಂಬುವಂತೆ ಬೋರಿಸ್‌ ಜಾನ್ಸನ್‌ ಅವರ ಮೇಲೆ ಬ್ರಿಟನ್‌ನ ಕನಿಷ್ಠ ಐವರು ಸಂಸದರು ಒತ್ತಡ ಹೇರುತ್ತಿದ್ದಾರೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ. ಆದರೆ, ಇಲ್ಲಿನ ವಿದೇಶಾಂಗ ಸಚಿವರು ಇದನ್ನು ತಳ್ಳಿಹಾಕಿದ್ದಾರೆ. ಸಂಸತ್‌ ಮಟ್ಟದಲ್ಲೇ ಕೆಲವು ಹಿರಿಯ ಸಂಸದರು ಬೋರಿಸ್‌ ಪರ ಒಲವು ಹೊಂದಿದ್ದಾರೆ. ಬಹುಮತದ ಸರಕಾರವನ್ನು ಅಲ್ಪಮತಕ್ಕೆ ಕುಸಿಯುವಂತೆ ಮಾಡಿದ ಮೇ ಅವರ ಬಗ್ಗೆ ಅಸಮಾಧಾನ ಭುಗಿಲೇಳತೊಡಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಬಂಡಾಯದ ಧ್ವನಿಯನ್ನು ನಿರಾಕರಿಸಿರುವ ಬೋರಿಸ್‌, ಅಂಥದ್ದೇನೂ ಇಲ್ಲ. ನಾನು ಥೆರೇಸಾರಿಗೆ ಬೆಂಬಲ ನೀಡುತ್ತೇನೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next