Advertisement
ಹಜರತ್ (25) ಮೃತ ಕಾರ್ಮಿಕ. ಶುಕ್ರವಾರ ಬೆಳಗ್ಗೆ 8.30ರ ಸುಮಾರಿಗೆ ಅವಶೇಷಗಳಡಿ ಸಿಲುಕಿದ್ದ ಹಜರತ್‌ನನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹಜರತ್ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ. ಈ ಮಧ್ಯೆ ಹಜರತ್ ಕುಟುಂಬಸ್ಥರು ವೇಗವಾಗಿ ರಕ್ಷಣಾ ಕಾರ್ಯ ನಡೆಸುತ್ತಿಲ್ಲ. ಅಲ್ಲದೇ ಖಾಸಗಿ ವೈದ್ಯರು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
Related Articles
Advertisement
ಎಷ್ಟು ಮಂದಿ ಎಂಬ ಅಂದಾಜಿಲ್ಲ!: ಗುರು ವಾರ ಸಂಜೆ 4.30ರ ಸುಮಾರಿಗೆ ಅಗ್ನಿಶಾಮಕ ಸಿಬ್ಬಂದಿ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸಿವಿಲ್ ಡೆಫೆನ್ಸ್ ಸೇರಿ 160 ಮಂದಿ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ, ಇದುವರೆಗೂ ಕಟ್ಟಡದ ಅವಶೇಷಗಳಡಿ ಎಷ್ಟು ಮಂದಿ ಸಿಲುಕ್ಕಿದ್ದಾರೆ ಎಂಬ ಮಾಹಿತಿಯಿಲ್ಲ. ಗಾಯಗೊಂಡು ಚೇತರಿಸಿಕೊಂಡಿರುವ ಕಾರ್ಮಿಕರಿಗೂ ತಿಳಿದಿಲ್ಲ.
ಮಾಲೀಕ ತಲೆಮರೆಸಿಕೊಂಡಿ ರುವುದರಿಂದ ಸರಿಯಾದ ಲೆಕ್ಕ ಸಿಗುತ್ತಿಲ್ಲ. ಹೀಗಾಗಿ ಕಟ್ಟಡವನ್ನು ಸಂಪೂರ್ಣವಾಗಿ ನೆಲ ಸಮ ಮಾಡುವವರಿಗೆ ರಕ್ಷಣಾ ಸಿಬ್ಬಂದಿ ಪಾಳಿ ಲೆಕ್ಕದಲ್ಲಿ ರಕ್ಷಣಾ ಕಾರ್ಯ ಮುಂದುವರಿ ಸುತ್ತಾರೆ. ಅವಶೇಷಗಳಡಿ ಇತರೆ ಕಾರ್ಮಿಕರು ಸಿಲುಕಿರುವ ಶಂಕೆ ಹಿನ್ನೆಲೆಯಲ್ಲಿ ವೇಗದ ಜತೆಗೆ ಸೂಕ್ಷ್ಮವಾಗಿ ಕಾರ್ಯಾಚರಣೆ ನಡೆಯುತ್ತಿದೆ.
ಕಾರ್ಯಾಚರಣೆ ಸಂದರ್ಭದಲ್ಲಿ ವಿಕ್ಟಿಮ್ ಲೋಕೇಷನ್ ಕ್ಯಾಮೆರಾ, ಐರನ್ ಕಟರ್, ಗುಂಡಿ ಕೊರೆಯುವ ಯಂತ್ರ ಹಾಗೂ ಇತರೆ ತಂತ್ರಜ್ಞಾನ ಬಳಸಲಾಗಿದೆ. ಕೆಲವೊಮ್ಮೆ ಸುತ್ತ- ಮುತ್ತಲ ಪ್ರದೇಶವನ್ನು ನಿಶಬ್ಧದ ಮಾಡಿ, ಕಟ್ಟಡಗಳಡಿ ಯಾರಿದ್ದಿರಾ, ಯಾವ ಕಡೆಯಿದ್ದಿರಾ ಎಂದು ಕೂಗಿದಾಗ, ಅವರಿಂದ ಪ್ರತಿಕ್ರಿಯೆ ಬಂದಾಗ ಆ ಭಾಗದಲ್ಲಿ ಕಾರ್ಯಾಚರಣೆ ಮಾಡುತ್ತಿ ದ್ದೇವೆ. ಎಂದು ಅಧಿಕಾರಿ ವಿವರಿಸಿದರು.
ಖಾಸಗಿ ಆಸ್ಪತ್ರೆ ವಿರುದ್ಧ ಆರೋಪ: ರಕ್ಷಣೆಗೊಳಗಾದ 15 ಮಂದಿ ಕಾರ್ಮಿಕರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾ ಗಿದೆ. ಚಿಕಿತ್ಸಾ ವೆಚ್ಚವನ್ನು ಬಿಬಿಎಂಪಿ ಭರಿಸಲಿದೆ ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಆದರೂ ಕೆಲ ಆಸ್ಪತ್ರೆಗಳು ಪ್ರಾಥಮಿಕ ಚಿಕಿತ್ಸೆ ನೀಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಗಾಯಾ ಳುಗಳ ಪೋಷಕರಿಗೆ ಒತ್ತಾಯಿಸುತ್ತಿದ್ದಾರೆ. ಇನ್ನು ಕೆಲವೆಡೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ.
“ಒಂದು ವೇಳೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಟ್ಟಿದ್ದರೆ ನಮ್ಮ ಮಗ ಹಜರತ್ ಬದುಕುತ್ತಿದ್ದ. ವೈದ್ಯರ ನಿರ್ಲಕ್ಷ್ಯ ಹಾಗೂ ಮಂದಗತಿಯಲ್ಲಿ ರಕ್ಷಣಾ ಕಾರ್ಯ ಮಾಡಿದರಿಂದಲೇ ಮಗ ಸತ್ತಿದ್ದಾನೆ ಎಂದು ಹಜರತ್ ಪೋಷಕರು ಆರೋಪಿಸಿದ್ದಾರೆ.