ನವದೆಹಲಿ: ಭಾರತದಿಂದ ಅಮೆರಿಕ ಹಾಗೂ ಕೆನಡಾಕ್ಕೆ ತೆರಳುವ ಪ್ರಯಾಣಿಕರಿಗಾಗಿ ಏರ್ ಇಂಡಿಯಾದ 75 ವಿಶೇಷ ವಿಮಾನಗಳು ಜೂ.9ರಿಂದ 30ರ ನಡುವೆ ಸಂಚರಿಸಲಿವೆ.
Advertisement
ವಂದೇ ಭಾರತ್ ಮಿಷನ್‌ನಡಿ 3ನೇ ಹಂತವಾಗಿ ಈ ವಿಶೇಷ ವಿಮಾನಗಳು ನ್ಯೂಯಾರ್ಕ್, ನೆವಾರ್ಕ್, ಶಿಕಾಗೋ, ವಾಷಿಂಗ್ಟನ್, ಸ್ಯಾನ್ ಫ್ರಾನ್ಸಿಸ್ಕೋ, ವ್ಯಾಂಕೋವರ್, ಟೊರೆಂಟೊ ಮತ್ತಿತರ ನಗರಗಳಿಗೆ ತೆರಳಲಿವೆ.
ಈ ಪ್ರದೇಶಗಳಿಗೆ ತೆರಳಲು ಬಯಸುವ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಈಗಾಗಲೇ ಹಲವು ದೇಶಗಳು ವಿಶೇಷ ವಿಮಾನಗಳ ಮೂಲಕ ತಮ್ಮ ಪ್ರಜೆಗಳನ್ನು ಕರೆಸಿಕೊಂಡಿವೆ.