Advertisement
ಪ್ರಶ್ನೋತ್ತರ ವೇಳೆ ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ವಿ.ಸೋಮಣ್ಣ, ತೀವ್ರ ಬರದಿಂದಾಗಿ ದನಕರುಗಳುಮೇವಿಲ್ಲದೆ ಸೊರಗಿವೆ. ಗೋಶಾಲೆಗಳಲ್ಲೂ ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ನೀಡಿಲ್ಲ. ಮೇವು ಪೂರೈಕೆ, ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಹೇಳಿದರು.
Related Articles
Advertisement
ಇದಕ್ಕೆ ದನಿಗೂಡಿಸಿದ ಸೋಮಣ್ಣ, “ಕಾಗೋಡು ತಿಮ್ಮಪ್ಪ ಅವರು ಕಾಗೋಡು ತಿಮ್ಮಪ್ಪ ಅವರಾಗಿದ್ದರೆ ಚೆನ್ನ. ಇಲ್ಲದಿದ್ದರೆ ಅವರು 10ರಲ್ಲಿ 11ನೆಯವರಾಗುತ್ತಾರೆ. ಹಿರಿಯ ಸಚಿವರಾದವರು ಹೀಗೆ ಅಧಿಕಾರಿಗಳ ರಕ್ಷಣೆಗೆ ನಿಲ್ಲುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಪವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ: ಬಳಿಕ ಪ್ರತಿಕ್ರಿಯಿಸಿದ ಕಾಗೋಡು ತಿಮ್ಮಪ್ಪ, “ನಾನೇ ಹಲವೆಡೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಗತ್ಯವಿರುವ ಕಡೆ ಗೋಶಾಲೆ ತೆರೆಯುವಂತೆಯೂ ಸೂಚಿಸಿದ್ದೇನೆ. ಸೋಮಣ್ಣ ಅವರು ಬೇಸರ ಮಾಡಿಕೊಳ್ಳುವುದು ಬೇಡ. ಅವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ನೀಡಿದರೆ ಪರಿಶೀಲಿಸಲಾಗುವುದು. ಪ್ರಾಮಾಣಿಕವಾಗಿ ಮೇವು ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಸಣ್ಣಪುಟ್ಟ ಲೋಪವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ’ ಎಂದು ಹೇಳಿದರು.
ಆಗ ಮಧ್ಯಪ್ರವೇಶಿಸಿದ ಕೆ.ಎಸ್.ಈಶ್ವರಪ್ಪ, “ನೀವು ಕ್ಷಮೆ ಕೇಳುವ ಅಗತ್ಯವಿಲ್ಲ. ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವರು ಸರಿಯಾಗಿ ಕೆಲಸ ಮಾಡುವಂತೆ ಬಿಗಿ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು. ಮುಖ್ಯಮಂತ್ರಿಗಳು, ನೀವು (ಸಚಿವಕಾಗೋಡು ತಿಮ್ಮಪ್ಪ) ಹೋಗಿ ಬಂದ ಮೇಲೆ ಗೋಶಾಲೆಯಲ್ಲಿ ಹಸುವೂ ಇಲ್ಲ, ಮೇವೂ ಇಲ್ಲ ಎಂಬಂತಾಗಿದೆ. ಬರ ನಿರ್ವಹಣೆ ಹೆಸರಿನಲ್ಲಿ ಕೆಲವರು ತಿನ್ನಬಾರದನ್ನೆಲ್ಲಾ ತಿನ್ನುತ್ತಿದ್ದಾರೆ. ಅವರು ಮನುಷ್ಯರೇ ಅಲ್ಲ. ಕೆಲವರು ಬರಕ್ಕಾಗಿ ಕಾಯುತ್ತಿರುತ್ತಾರೆ. ಮೇವಿನಲ್ಲಿ ಲೂಟಿ, ಕೆರೆ ಹೂಳು ತೆರೆಯುವುದರಲ್ಲಿ ಲೂಟಿಗಾಗಿ ಕಾಯುತ್ತಿರುತ್ತಾರೆ.
– ಕೆ.ಎಸ್.ಈಶ್ವರಪ್ಪ, ಮೇಲ್ಮನೆ ಪ್ರತಿಪಕ್ಷ ನಾಯಕ