Advertisement
ಇತಿಹಾಸದ ಹಲವು ಸತ್ಯಗಳನ್ನು ಬೆಳಕಿಗೆ ತಂದ ಕಾರಣದಿಂದಾಗಿ ಸಮಾಜದ ಒಂದು ವರ್ಗದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ನನ್ನ ಕಾದಂಬರಿಯನ್ನು ನಿಷೇಧ ಮಾಡುತ್ತಾರೆಂಬ ಆತಂಕವಿತ್ತು. ಸಲ್ಮಾನ್ ರಷಿª ಬರೆದ “ಸಟಾನಿಕ್ ವರ್ಸಸ್’ ಕೃತಿ ಪಾಶ್ಚಾತ್ಯ ದೇಶಗಳಲ್ಲಿ ವಿವಿಧ ಭಾಷೆಗಳಿಗೆ ಭಾಷಾಂತರಗೊಂಡು ಜನರು ಓದಿದ ನಂತರ ಮುಸ್ಲಿಂ ರಾಷ್ಟ್ರದ ಮುಖಂಡನೊಬ್ಬ ಕೃತಿಯನ್ನು ನಿಷೇಧಿಸಬೇಕೆಂದು ಘೋಷಿಸಿದ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿ ರಷಿªಯ ಕೃತಿ ನಿಷೇಧಿಸಲಾಯಿತು ಎಂದರು.
Related Articles
Advertisement
ಅವರು ಚರ್ಚ್‌ನ ಪಾದ್ರಿಯ ನಿರಂಕುಶ ಪ್ರಭುತ್ವವನ್ನು ವಿರೋಧಿಸಿದ್ದರು. ಆದರೆ, ಇಸ್ಲಾಂ ಧರ್ಮದಲ್ಲಿ ಧರ್ಮದ ಕುರಿತು ಪ್ರಶ್ನಿಸಲು ಅವಕಾಶವಿಲ್ಲ. ಇಸ್ಲಾಂ ವಿರುದ್ಧ ಬಂದ ಕೃತಿಗಳು ಅತಿ ಕಡಿಮೆ’ ಎಂದರು. ನಮ್ಮ ಹಲವು ಇತಿಹಾಸಕಾರರು ಮೊಘಲರ ದಾಳಿಯನ್ನು, ಮತಾಂತರವನ್ನು ಮರೆಮಾಚಲು ದೊಡ್ಡ ಷಡ್ಯಂತ್ರ ನಡೆಸಿದರು. ಇತಿಹಾಸದ ಕೃತಿಗಳಲ್ಲಿ ಸುಳ್ಳನ್ನು ವೈಭವಿಕರಿಸಿದರು. ಇದನ್ನೇ ಸತ್ಯ ಎಂಬಂತೆ ಬಿಂಬಿಸಿದರು. ಒಂದು ಧರ್ಮ ಗ್ರಂಥವನ್ನು ಓದದೇ ಆ ಧರ್ಮದ ಬಗ್ಗೆ ಮಾತನಾಡುವುದು ಸರಿಯಲ್ಲ. ನಮ್ಮ ಬಹುತೇಕ ಮಠಾಧೀಶರು ಕುರಾನ್ ಗ್ರಂಥವನ್ನೇ ಓದಿಲ್ಲ. ಆದರೂ, ಎಲ್ಲ ಧರ್ಮಗಳ ಉದ್ದೇಶ ಒಂದೇ ಎಂದು ವಾದ ಮಾಡುತ್ತಾರೆ. ದಯಾನಂದ ಸರಸ್ವತಿ ಕುರಾನ್ ಓದಿ ಅದನ್ನು ವಿಶ್ಲೇಷಿಸಿದರು.
ಅದರಲ್ಲಿನ ತಪ್ಪುಗಳನ್ನು ಎತ್ತಿ ತೋರಿದ್ದರಿಂದ ಅವರಿಗೆ ವಿಷ ಹಾಕಿ ಕೊಲ್ಲಲಾಯಿತು. ಎಲ್ಲ ಧರ್ಮಗಳ ಉದ್ದೇಶ ಒಂದೇ ಆಗಿರುವುದಿಲ್ಲ. ಎಲ್ಲರನ್ನೂ ಸಲಹುವ, ಎಲ್ಲವನ್ನೂ ಒಪ್ಪಿಕೊಳ್ಳುವ, ಸರ್ವ ಜನರ ಹಿತ ಬಯಸುವ ಧರ್ಮದ ಉದ್ದೇಶ ಹಾಗೂ ಮತಾಂತರವನ್ನು ಪ್ರೇರೇಪಿಸುವ, ತಮ್ಮ ಧರ್ಮದವರಷ್ಟೇ ಬದುಕಬೇಕೆಂದು ಹೇಳುವ ಧರ್ಮದ ಉದ್ದೇಶ ಒಂದೇ ಆಗಿರಲು ಸಾಧ್ಯವಿಲ್ಲ. ಬ್ರಿಟಿಷರು ವ್ಯವಸ್ಥಿತವಾಗಿ ಹಿಂದೂಗಳು ಹಾಗೂ ಮುಸಲ್ಮಾನರನ್ನು ಒಡೆದು ಪಾಕಿಸ್ತಾನ ಪ್ರತ್ಯೇಕ ದೇಶವಾಗುವಂತೆ ಮಾಡಿದರು. ಮುಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಒಡೆದಾಳುವ ತಂತ್ರ ಮುಂದುವರಿಸಿತು ಎಂದರು.
ಕಾದಂಬರಿ ಬರೆದ ಮೇಲೆ ಮರೆತು ಬಿಡುತ್ತೇನೆ!: ಒಂದು ಕಾದಂಬರಿ ಬರೆದ ಮೇಲೆ ಅದನ್ನು ಸಂಪೂರ್ಣವಾಗಿ ಮರೆತು ಬಿಡುತ್ತೇನೆ. “ಆವರಣ’ ಕಾದಂಬರಿ ಬರೆದ ನಂತರ ನಾನು ಮೂರು ಕಾದಂಬರಿ ಬರೆದೆ. 12 ವರ್ಷಗಳ ಹಿಂದೆ ಬರೆದ ಕಾದಂಬರಿ ಬಗ್ಗೆ ಈಗ ಏನೂ ಮಾತನಾಡಲಾಗುವುದಿಲ್ಲ. ಒಬ್ಬ ಸಂಗೀತಗಾರ ಒಂದು ರಾಗವನ್ನು ಪ್ರಸ್ತುತಪಡಿಸುವಾಗ ಅದರಲ್ಲಿ ತಲ್ಲೀನವಾಗುತ್ತಾನೆ. ಅದು ಮುಗಿದು ಮತ್ತೂಂದು ರಾಗವನ್ನು ಹಾಡುವಾಗ ಹಳೇ ರಾಗದ ಗುಂಗಿನಲ್ಲೇ ಇದ್ದರೆ, ಸಮ್ಮಿಳಿತಗೊಂಡರೆ ತಾಳ, ಶ್ರುತಿ ಹೊಂದುವುದಿಲ್ಲ. ರಾಗಕ್ಕೆ ನ್ಯಾಯ ಒದಗಿಸಲೂ ಆಗುವುದಿಲ್ಲ. ಕಾದಂಬರಿಕಾರನ ಸ್ಥಿತಿ ಕೂಡ ಇದಕ್ಕಿಂತ ಭಿನ್ನವೇನಲ್ಲ ಎಂದು ಭೈರಪ್ಪ ಅಭಿಪ್ರಾಯಪಟ್ಟರು.
ನನಗೆ ಹಿತವಚನ ಬರೆಯಲು ಬರಲ್ಲ: ನಾನು ಒಬ್ಬ ಕಾದಂಬರಿಕಾರ. ನಾನು ಬರೆಯುವುದೆಲ್ಲವನ್ನೂ ಕಾದಂಬರಿಯಲ್ಲಿಯೇ ಬರೆಯುತ್ತೇನೆ. ಗಹನ ಅರ್ಥ ಬರುವ ಮಾತನ್ನು ಕಾದಂಬರಿಯಲ್ಲಿ ಮಾತ್ರ ಹೇಳಲು ಸಾಧ್ಯ. ಸೃಜನಶೀಲ ಕಲ್ಪನೆಯಲ್ಲಿ ಪಾತ್ರಗಳು, ಸನ್ನಿವೇಶ ಇದ್ದಾಗ ಮಾತ್ರ ಗಂಭೀರವಾದ ತೂಕದ ಮಾತು ಬರುತ್ತದೆ. ಅಟೋಗ್ರಾಫ್‌ನಲ್ಲಿ ಹಿತವಚನ ಬರೆ ಯುವಂತೆ ಕೇಳಿದರೆ ನನಗೇನೂ ಬರೆಯಲಾಗುವುದಿಲ್ಲ ಎಂದರು.
ರಾಹುಲ್ ವಿರೋಧಿಸಲೇಬೇಕು: ಜಮ್ಮು -ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಪಡಿಸಿದ್ದನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರೋಧ ಮಾಡದಿದ್ದರೆ ತಮ್ಮ ಮುತ್ತಜ್ಜ ಜವಾಹರಲಾಲ್ ನೆಹರು ಮಾಡಿದ ಮಹಾಪ್ರಮಾದವನ್ನು ಒಪ್ಪಿಕೊಂ ಡಂತಾಗುತ್ತಿತ್ತು. ಇದೇ ಕಾಂಗ್ರೆಸ್ ಸಂಸ್ಕೃತಿ ಎಂದು ಭೈರಪ್ಪ ನುಡಿದರು.
ನಾನು ನನ್ನ ಕೃತಿಯಲ್ಲಿ ಸತ್ಯವನ್ನು ಹೇಳಲು ಯತ್ನಿಸಿದ್ದೇನೆ. ನನ್ನ ಅಧ್ಯಯನದಲ್ಲಿ ಪ್ರಾಪ್ತವಾಗಿದ್ದನ್ನು ಹೇಳಿದ್ದು, ಉಳಿದಿದ್ದನ್ನು ಓದುಗರಿಗೆ ಬಿಟ್ಟಿದ್ದೇನೆ. ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮಗಳು ಮಾರ್ಪಾಡಾಗುತ್ತ ಬಂದಿವೆ. ಆದರೆ, ಇಸ್ಲಾಂ ಧರ್ಮ ಹಾಗೇ ಉಳಿದಿದೆ. ಅದು ಬದಲಾವಣೆಗೆ ಒಪ್ಪುವುದಿಲ್ಲ. -ಎಸ್.ಎಲ್.ಭೈರಪ್ಪ, ಸಾಹಿತಿ