Advertisement

ಗಾಂಧಿ-ಅಂಬೇಡ್ಕರ್‌ ನಡುವೆ ಭಿನ್ನಾಭಿಪ್ರಾಯವಿತ್ತು

12:03 PM Sep 16, 2018 | |

ಬೆಂಗಳೂರು: ದಲಿತರಿಗೆ ಪ್ರತ್ಯೇಕ ಮತದಾನ ಕೇಂದ್ರ ವ್ಯವಸ್ಥೆ ಕಲ್ಪಿಸುವ ಬಗ್ಗೆ ಗಾಂಧೀಜಿ ಮತ್ತು ಅಂಬೇಡ್ಕರ್‌ ನಡುವೆ ಭಿನ್ನಾಭಿಪ್ರಾಯವಿತ್ತು. ಆದರೆ, ಈ ವಿಚಾರದಲ್ಲಿ ಗಾಂಧೀಜಿ ನಿಲುವು ಸರಿಯಾಗಿತ್ತು ಎಂದು ಸಾಹಿತಿ ಮತ್ತು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.

Advertisement

ಗಾಂಧಿ ಶಾಂತಿ ಪ್ರತಿಷ್ಠಾನ ಶೇಷದ್ರಿಪುರಂ ಕಾಂಪೋಸಿಟ್‌ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಗಾಂಧೀಜಿ ಮತ್ತು ಅಂಬೇಡ್ಕರ್‌ ವಿಚಾರಧಾರೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಲವು ವಿಚಾರಗಳಲ್ಲಿ ಈ ಇಬ್ಬರೂ ನಾಯಕರಲ್ಲಿ ಭಿನ್ನಾಭಿಪ್ರಾಯಗಳಿದ್ದವು ಎಂದು ಹೇಳಿದರು.

ದಲಿತರಿಗೆ ಪ್ರತ್ಯೇಕ ಮತದಾನ ಕೇಂದ್ರ ನೀಡಿದಾಗ ಮಾತ್ರ ಅವರು ನಿರ್ಭೀತಿಯಿಂದ ತಮಗಿಷ್ಟವಾದ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೆ ಎಂಬುವುದು ಅಂಬೇಡ್ಕರ್‌ ವಾದವಾಗಿತ್ತು. ಆದರೆ ಇದನ್ನು ವಿರೋಧಿಸಿ ಗಾಂಧೀಜಿ, ಉಪವಾಸ ಸತ್ಯಾಗ್ರಹ ನಡೆಸಿದ್ದರು. ಪ್ರತ್ಯೇಕ ಮತದಾನ ಕೇಂದ್ರ ನೀಡಿದರೆ ಶೋಷಿತ ವರ್ಗವನ್ನು ಇನ್ನಷ್ಟು ಶೋಷಿತರನ್ನಾಗಿ ಮಾಡಿದಂತಾಗುತ್ತದೆ ಎಂಬುವುದು ಗಾಂಧೀಜಿ ಅವರ ವಾದವಾಗಿತ್ತು.

ಗಾಂಧೀಜಿ ಅವರ ಆ ನಿಲುವು ಸರಿಯಾಗಿತ್ತು ಎಂದು ತಿಳಿಸಿದರು. ಅಹಿಂಸೆ ಅಸ್ತ್ರದೊಂದಿಗೆ ಗಾಂಧೀಜಿ ಅನ್ಯಾಯದ ವಿರುದ್ಧ ಹೋರಾಡಿದರೆ, ಅಂಬೇಡ್ಕರ್‌ ತಮ್ಮ ಸಮುದಾಯಕ್ಕೆ ಆಗುತ್ತಿದ್ದ ಅನ್ಯಾಯದ ವಿರುದ್ಧ ತಮ್ಮದೇ ರೀತಿಯಲ್ಲಿ ಪ್ರತಿಭಟಿಸಿದರು. ಇಬ್ಬರೂ ಈ ದೇಶ ಕಂಡ ಅಪ್ರತಿಮ ನಾಯಕರು ಎಂದು ಶ್ಲಾ ಸಿದರು.

ಇಡೀ ದೇಶ ನಂಬುತ್ತಿದ್ದ ಏಕೈಕ ನಾಯಕ ಮಹಾತ್ಮಾಗಾಂಧೀಜಿ ಮಾತ್ರ. ಗಾಂಧೀಜಿ ಹೇಳಿದ್ದನ್ನು ಜನ ಪಾಲಿಸುತ್ತಿದ್ದರು. ಗಾಂಧೀಜಿ ಮನಸ್ಸು ಮಾಡಿದ್ದರೆ ಬಯಸಿದ ಹುದ್ದೆಯನ್ನು ಆಲಂಕರಿಸಬಹುದಾಗಿತ್ತು. ಆದರೆ ಅವರು ಎಂದೂ, ಏನನ್ನೂ ಬಯಸಲಿಲ್ಲ. ವಿದ್ಯಾರ್ಥಿಗಳು ಮಹಾತ್ಮಾ ಗಾಂಧೀಜಿ ಅವರ ಆತ್ಮ ಚರಿತ್ರೆ ಓದಬೇಕು ಎಂದು ಸಲಹೆ ನೀಡಿದರು.

Advertisement

ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್‌, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಎಸ್‌.ರಾಮಲಿಂಗೇಶ್ವರ (ಸಿಸಿರಾ), ಡಾ.ಎಸ್‌.ಪೂರ್ಣಿಮಾ, ಶೇಷಾದ್ರಿಪುರಂ ಇನ್ಸ್‌ಟಿಟ್ಯೂಟ್‌ ಆಫ್ ಕಾಮರ್ಸ್‌ ಆಂಡ್‌ ಮ್ಯಾನೇಜ್‌ಮೆಂಟ್‌ನ ಪ್ರಾಶುಂಪಾಲರಾದ ಪ್ರೊ.ವಿದ್ಯಾ ಶಿವಣ್ಣವರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next