Advertisement

ರಾಜ್ಯದಲ್ಲಿ‌ ಸದ್ಯಕ್ಕೆ ಲಾಕ್ ಡೌನ್ ಸ್ಥಿತಿಯಿಲ್ಲ: ಸಚಿವ ಡಾ. ಕೆ.ಸುಧಾಕರ್

02:14 PM Mar 01, 2021 | Team Udayavani |

ಶಿರಸಿ (ಉತ್ತರ ಕನ್ನಡ): ರಾಜ್ಯದಲ್ಲಿ‌ ಸದ್ಯಕ್ಕೆ ಲಾಕ್ ಡೌನ್ ಸ್ಥಿತಿ ಇಲ್ಲ ಎಂದು‌ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದರು.

Advertisement

ಸೋಮವಾರ ಅವರು ಉತ್ತರ ಕನ್ನಡದ ಶಿರಸಿಯಲ್ಲಿ ಕೋವಿಡ್ 19 ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ‌ನೀಡಿ ಮಾತನಾಡಿದರು.

ಜನತೆ ಸಹಕಾರ ನೀಡಿದರೆ ಲಾಕ್ ಡೌನ್ ಇಲ್ಲ. ಅದರ ಅಗತ್ಯವೂ ಬರುವದಿಲ್ಲ. ಆದರೆ ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಸಹಕಾರ ನೀಡಿದರೆ ಈ ಅಪಾಯ ತಪ್ಪಿಸಿಕೊಳ್ಳಬಹುದು ಎಂದರು.

ರಾಜ್ಯದಲ್ಲಿ 273 ಲಸಿಕಾ‌ ಕೇಂದ್ರದಲ್ಲಿ ಸುಮಾರು 50 ಲಕ್ಷ ಹಿರಿಯ‌ ನಾಗರೀಕರಿಗೆ, 15 ಲಕ್ಷ 45 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಲಸಿಕೆ ನೀಡಲಾಗುತ್ತದೆ. ನೋಂದಣಿ ಇದ್ದರೂ, ಇಲ್ಲದೇ ಇದ್ದರೂ ಲಸಿಕೆ ಕೊಡಲಾಗುತ್ತದೆ. ಲಸಿಕೆ ಕುರಿತು ಜನರಿಗೆ ತಿಳುವಳಿಕೆ ಕೂಡ ನೀಡಲಾಗುತ್ತದೆ ಎಂದರು.

ಇದನ್ನೂ ಓದಿ:ಕೋವಿಡ್ 19-ಲಸಿಕೆ ಪಡೆದ ನಂತರ ಪ್ರಧಾನಿ ಮೋದಿ… ಸಿಸ್ಟರ್ ನಿವೇದಾಗೆ ಹೇಳಿದ್ದೇನು?

Advertisement

ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದೆ. ಈ‌ ಕಾರಣದಿಂದ ಅಂತಾರಾಜ್ಯ ಗಡಿಯಲ್ಲಿ‌ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ಬಿಗುವಾದ ಕ್ರಮವನ್ನು ಗಡಿಗಳಲ್ಲಿ ಕೈಗೊಳ್ಳಲಾಗಿದೆ. ಆದರೆ ಗಡಿ ಬಂದ್ ಇಲ್ಲ ಎಂದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಆರೋಗ್ಯ ಕ್ಷೇತ್ರದ ಕುರಿತೂ ಸದನದಲ್ಲಿ ಚರ್ಚಿಸಬೇಕಾಗಿದೆ. ಕೊವಿಡ್ ಮುಗಿಯಿತೆಂಬ ಭಾವನೆ ಬೇಡ. ಸರಕಾರದ ಸೂಚನೆ ಪಾಲಿಸಬೇಕು. ಜನ ಜೀವನದಲ್ಲಿ ಹೆಚ್ಚು ಆರೋಗ್ಯವಂತರಾಗಿರಬೇಕು ಎಂದರು.

ಪ್ರಥಮ ಲಸಿಕೆಯನ್ನು ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ, ಜೀವ ಜಲ‌ ಸಂರಕ್ಷಣೆಯಲ್ಲಿ ರಾಜ್ಯಕ್ಕೆ ಮಾದರಿ ಕಾರ್ಯ ಮಾಡಿದ ಶ್ರೀನಿವಾಸ ಹೆಬ್ಬಾರ,‌ ಮಾಜಿ ಶಾಸಕ ವಿವೇಕಾನಂದ ವೈದ್ಯ ಇತರರು ಪಡೆದರು.  ಜಿಲ್ಲಾಧಿಕಾರಿ ಮುಲ್ಲೈ‌ಮಹೀಲ್, ಜಿಲ್ಲಾ ಆರೋಗ್ಯಾಧಿಕಾರಿ ಶರತ್ ನಾಯಕ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜಯಶ್ರೀ ಮೊಗೇರ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next