Advertisement
ತಾಲೂಕಿನ ಮಲಾರಪಾಳ್ಯ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ನಮ್ಮ ದೇಶದಲ್ಲಿ ಅನೇಕ ಜಾತಿ, ಧರ್ಮದ ಜನರು ಸಾವಿರಾರು ವರ್ಷಗಳಿಂದಲೂ ವಾಸವಾಗಿದ್ದಾರೆ. ಇಡೀ ವಿಶ್ವಕ್ಕೆ ಐಕ್ಯತೆಯ ಸಂದೇಶ ಸಾರಿದ್ದು, ನಮ್ಮ ದೇಶವಾಗಿದೆ. ಇದನ್ನು ಮುಂದುವರಿಸಿಕೊಳ್ಳುವ ಅಗತ್ಯತೆ ಪ್ರಸ್ತುತಕ್ಕೆ ಹೆಚ್ಚಾಗಿದೆ ಎಂದು ಹೇಳಿದರು.
ಪ್ರತಿಭೆ ಅನಾವರಣಕ್ಕೆ ಶಿಬಿರ ಸಹಕಾರಿ: ಕಾಲೇಜಿನ ಪ್ರಾಂಶುಪಾಲ ಜೆ. ಸುರೇಂದ್ರ ಮಾತನಾಡಿ, ಸೇವಾ ಯೋಜನೆಯ ವಿಶೇಷ ಶಿಬಿರಗಳು ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮ ಹಾಗೂ ಅವರಲ್ಲಿನ ಪ್ರತಿಭೆಗಳನ್ನು ಅನಾವರಣಕ್ಕೆ ಸಹಕಾರ ನೀಡುತ್ತದೆ. ಇಂತಹ ಕಾರ್ಯಕ್ರಮದ ಪ್ರಯೋಜನ ಭವಿಷ್ಯದಲ್ಲಿ ಸತಜೆಗಳಾಗಿ ರೂಪುಗೊಳ್ಳಲು ಸಹಕಾರ ನೀಡುತ್ತದೆ. ಪ್ರತಿಯೊಬ್ಬರೂ ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಸೂಚನೆ ನೀಡಿದರು. ಕನ್ನಡ ಭಾಷಾ ವಿಭಾಗದ ಸಹ ಪ್ರಾಧ್ಯಪಕ ಥಿಯೋಡರ್ ಲೂಥರ್ ಮಾತನಾಡಿ, ಎನ್‌ಎಸ್‌ಎಸ್‌ನಲ್ಲಿ ರಾಷ್ಟ್ರ ಸೇವೆ ಸಲ್ಲಿಸುವ ಒಂದು ನೆಪವಾಗಬಾರದು. ಇದು ರೂಢಿಯಾಗಬೇಕು. ವ್ಯಕ್ತಿಗತವಾಗಿ ದೇಶಪ್ರೇಮ, ದೇಶಸೇವೆಯನ್ನು ಬೆಳೆಸಿಕೊಳ್ಳುವ ಮನೋಭಾವ ವೃದ್ಧಿಯಾಗಬೇಕು ಎಂದು ಹೇಳಿದರು. ಈ ವೇಳೆ ಶಿಬಿರಾಧಿಕಾರಿ ಗಿರಿಜಾ, ಹಾಲು ಉತ್ಪಾದಕರ ಸಂಘದ ಲಿಂಗರಾಜು, ಉಪನ್ಯಾಸಕರಾದ ಸತೀಶ್, ಮಹಾಂತೇಶ್, ಚೇತನ್, ಮಹಾದೇವ ಕುಮಾರ್, ಸಿದ್ದರಾಜೇಗೌಡ, ಸುರೇಂದ್ರ, ನಂಜೇಶ್, ಶೋಭಾ ಹಾಗೂ ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಹಾಜರಿದ್ದರು