ಬೆಂಗಳೂರು: ಮುಖ್ಯಮಂತ್ರಿ ಹೊರತುಪಡಿಸಿ ಸರ್ಕಾರದಲ್ಲಿ ಬದಲಾವಣೆಯಾಗಬೇಕು. ಅದೇ ಮುಖಗಳನ್ನು ನೋಡಿ ಸಾಕಾಗಿದೆ. ಅಭಿವೃದ್ಧಿಗೆ ವೇಗ ಸಿಗಬೇಕಾದರೆ ಹೊಸಬರಿಗೆ ಅವಕಾಶ ಸಿಗಬೇಕು ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಕಾರ್ಯದರ್ಶಿ ಹುದ್ದೆ ದೊಡ್ಡದಲ್ಲ, ನನಗೆ ವ್ಯಾಮೋಹವಿಲ್ಲ. ಕಚೇರಿ ಮನೆ ಕೊಟ್ಟಿದ್ದಾರೆ ಅಷ್ಟೇ, ಇಲ್ಲಿ ಏನು ಕೆಲಸ ಇಲ್ಲ. ನಾನು ಇದಕ್ಕೆ ಅಂಟಿಕೊಂಡಿಲ್ಲ ಎಂದು ಬಾಂಬ್ ಸಿಡಿಸಿದರು.
ಕೆಟ್ಟ ಹೆಸರು ತರುವ ಸಂಚು: ಕಾಂಗ್ರೆಸ್ ನಾಯಕರಿಗೆ ಹೋರಾಟ ಮಾಡಿ ಅಭ್ಯಾಸವಿಲ್ಲ. ಶೋಕಿಗೆ ವಾಕಿಂಗ್ ಸೂಟ್ ಹಾಕಿಕೊಂಡು ಹೊರಟಿದ್ದರಷ್ಟೇ. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಸಂಚು ಮೇಕೆದಾಟು ಪಾದಯಾತ್ರೆ ಹಿಂದೆ ಇತ್ತು ಎಂದು ರೇಣುಕಾಚಾರ್ಯ ಕಾಂಗ್ರೆಸ್ ನಾಯಕರ ವಿರುದ್ದ ಹರಿಹಾಯ್ದರು.
ಡಿಕೆ ಶಿವಕುಮಾರ್, ಸಿದ್ದರಾಮಯ್ಯನವರು ಪಾದಯಾತ್ರೆ ಹೆಸರಿನಲ್ಲಿ “ನನ್ನ- ನಾನು” ಜಪ ಮಾಡಿದರು ಎಂದು ಲೇವಡಿ ಮಾಡಿದರು.
ಇದನ್ನೂ ಓದಿ:ಮೈತ್ರಿ ಕನಸು ಕಾಣುವವರಿಗೆ ಮೇಕೆದಾಟು ಶಾಪವಾಗಲಿದೆ: ಮಾಜಿ ಶಾಸಕ ಪುಟ್ಟೇಗೌಡ
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಲ್ಲದ ಬದ್ಧತೆ ಈಗ ತೋರಿದರೆ ಏನು ಪ್ರಯೋಜನ. ಸಿದ್ದರಾಮಯ್ಯ ಅವರಿಗೆ ಪಾದಯಾತ್ರೆ ಇಷ್ಟವೇ ಇರಲಿಲ್ಲ. ಡಿ.ಕೆ.ಶಿವಕುಮಾರ್ ನಾಯಕನಾದರೆ ಎಂಬ ಆತಂಕ ಅವರದ್ದು. ಸಿದ್ದರಾಮಯ್ಯ ಬಗ್ಗೆ ಶಿವಕುಮಾರ್ ಗೆ ಭಯ. ಇಬ್ಬರ ಕಿತ್ತಾಟ ಚುನಾವಣೆ ವೇಳೆ ಬಯಲಾಗಲಿದೆ ಎಂದು ರೇಣುಕಾಚಾರ್ಯ ಹೇಳಿದರು.