Advertisement

ವೈಮನಸ್ಸು ಇರಬಹುದು,ಆದರೆ… : ಯಡಿಯೂರಪ್ಪ ಅವರನ್ನು ಹೊಗಳಿದ ಯತ್ನಾಳ್ !

04:22 PM Feb 24, 2023 | Team Udayavani |

ಬೆಂಗಳೂರು : 15 ನೇ ವಿಧಾನಸಭೆ ಅಧಿವೇಶನಕ್ಕೆ ಶುಕ್ರವಾರ ತೆರೆ ಬಿದ್ದಿದ್ದು, ವಿಧಾನಸಭೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅಪರೂಪಕ್ಕೆ ಎಂಬಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ವೈಮನಸ್ಸು ಮರೆತು ಹೋಗಳಿ ಗಮನ ಸೆಳೆದರು.

Advertisement

ಯತ್ನಾಳ್ ಮಾತನಾಡಿ,”ನಾನು ಆಡಳಿತ ಪಕ್ಷದಲ್ಲಿರುವ ವಿಪಕ್ಷ ಸದಸ್ಯನಾಗಿ ಕೆಲಸ ಮಾಡಿದೆ.ಯಡಿಯೂರಪ್ಪ ಮತ್ತು ನಮಗೆ ವೈಮನಸ್ಸು ಆಗಿರಬಹುದು ಆದರೆ ಅವರು ನಮ್ಮ ಪಕ್ಷದ ಹಿರಿಯರು. ಕರ್ನಾಟಕದಲ್ಲಿ ಬಿಜೆಪಿ ಕಟ್ಟುವುದರಲ್ಲಿ ಅನಂತ್ ಕುಮಾರ್ ಮತ್ತು ಯಡಿಯೂರಪ್ಪ ಅವರು ಕೃಷ್ಣ ಮತ್ತು ಅರ್ಜುನರಂತೆ ಕೆಲಸಮಾಡಿದರು” ಎಂದರು.

”ಇಂದು ನಾವೆಲ್ಲಾ ಶಾಸಕರಾಗಿದ್ದೇವೆ. ನನ್ನ ಹಣೆಬರಹದಲ್ಲಿ ಶ್ರೇಷ್ಠ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವನಾಗುವ ಅವಕಾಶ ಸಿಕ್ಕಿತು. ಆವಾಗ ಅನಂತ್ ಕುಮಾರ್, ಪ್ರಮೋದ್ ಮಹಾಜನ್ , ಬಸವರಾಜ್ ಪಾಟೀಲ್ ಸೇಡಂ, ಯಡಿಯೂರಪ್ಪ ಅವರಿದ್ದರು” ಎಂದರು.

”ಈ ಐದು ವರ್ಷಗಳಲ್ಲಿ ವಿಜಯಪುರದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಲು ಸಿಎಂ ಬಸವರಾಜ್ ಬೊಮ್ಮಾಯಿ, ಅನೇಕ ಸಚಿವರು ಅವಕಾಶ ಮಾಡಿಕೊಟ್ಟರು” ಎಂದು ಧನ್ಯವಾದ ತಿಳಿಸಿದರು.

”ಆಯಾ ರಾಮ್.. ಗಯಾ ರಾಮ್… ಆಗುತ್ತದೆ. ಆ ಬದಿಯಲ್ಲಿದ್ದವರು ಈ ಬದಿಗೆ ಬರುತ್ತಾರೆ. ಅದರಲ್ಲಿ ಯಡಿಯೂರಪ್ಪ ಅವರು ಗಟ್ಟಿ ನಿಂತು ಬಿಟ್ಟರು. ಅನೇಕ ಶಾಸಕರು ನಾನು ನಿಲ್ಲುವುದಿಲ್ಲ, ನನ್ನ ಮಗನನ್ನು ತಯಾರು ಮಾಡಿದ್ದೇನೆ ಅನ್ನುತ್ತಿದ್ದರು. ಈಗ ಡೈಲಾಗ್ ಚೇಂಜ್ ಮಾಡಿದ್ದು , ಜನ ಕೇಳುತ್ತಿಲ್ಲ ನೀವೇ ನಿಲ್ಲಬೇಕು ಆನ್ನುತ್ತಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಕೆಲವರು ಶಾಸಕರಾಗಿಯೇ ಸಾಯಬೇಕು ಅನ್ನುವ ತತ್ವಕ್ಕೆ ಬದ್ಧರಾಗಿ ಬಿಟ್ಟಿದ್ದಾರೆ” ಎಂದು ಟಾಂಗ್ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next