Advertisement

ಮೋದಿ ಹತ್ಯೆ ಸಂಚಿಗೆ ಇದೆ ಸಾಕ್ಷ್ಯ: ಪೊಲೀಸ್‌

10:24 AM Nov 16, 2018 | Team Udayavani |

ಪುಣೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ರಾಜೀವ್‌ ಗಾಂಧಿ ಶೈಲಿಯಲ್ಲಿ ಹತ್ಯೆ ಮಾಡಲು ಸಂಚು ರೂಪಿಸಿದ್ದ ಬಗ್ಗೆ ಪ್ರಬಲ ಸಾಕ್ಷ್ಯಗಳು ಇವೆ ಎಂದು ಪುಣೆ ಪೊಲೀಸರು ಹೇಳಿ ಕೊಂಡಿ ದ್ದಾರೆ. ಭೀಮಾ- ಕೋರೆಗಾಂವ್‌ ಹಿಂಸಾ ಚಾರಕ್ಕೆ ಸಂಬಂಧಿಸಿದಂತೆ ಕ್ರಾಂತಿ ಕಾರಿ ಕವಿ ಪಿ. ವರವರ ರಾವ್‌ ಸೇರಿದಂತೆ ಐವರ ವಿರುದ್ಧ ಮಹಾರಾಷ್ಟ್ರದ ಪುಣೆಯ ಸೆಷನ್ಸ್‌ ಕೋರ್ಟ್‌ಗೆ ಸಲ್ಲಿಸಲಾಗಿರುವ 5 ಸಾವಿರ ಪುಟಗಳ ಆರೋಪಪಟ್ಟಿಯಲ್ಲಿ ಈ ಅಂಶ ಉಲ್ಲೇಖೀಸಲಾಗಿದೆ. ಬಂಧಿತರಾಗಿರುವ ಐವರು ಎಡಪಂಥೀಯರಲ್ಲದೆ ರೋನಾ ವಿಲ್ಸನ್‌, ಸುರೇಂದ್ರ ಗಡ್ಲಿಂಗ್‌, ಶೋಮಾ ಸೆನ್‌, ಪ್ರಧಾನಮಂತ್ರಿ ಗ್ರಾಮೀಣಾಭಿವೃದ್ಧಿ ಫೆಲೋಶಿಪ್‌ ಪಡೆದ ಮಹೇಶ್‌ ರಾವುತ್‌, ಸುಧೀರ್‌ ಧವಲೆ ಹೆಸರುಗಳೂ ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖೀತಗೊಂಡಿವೆ. ದಲಿತರಿಗೆ ತಪ್ಪು ಮಾಹಿತಿ ನೀಡುವ ಮೂಲಕ ಹಿಂಸೆ ನಡೆಸುವುದು ಮತ್ತು ನಕ್ಸಲೀಯರ ಜತೆಗಿನ ನಂಟಿನ ಅಂಶವನ್ನು ಪೊಲೀಸರು ಇದರಲ್ಲಿ ಉಲ್ಲೇಖೀಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next