Advertisement

ಬೇಕಾದಷ್ಟು ಕಲ್ಲಿದ್ದಲು ಸಂಗ್ರಹವಿದೆ, ಗಾಬರಿಯಾಗುವ ಅವಶ್ಯಕತೆಯಿಲ್ಲ: ಪ್ರಹ್ಲಾದ್ ಜೋಶಿ

04:38 PM Apr 30, 2022 | Team Udayavani |

ಹುಬ್ಬಳ್ಳಿ: ರಾಷ್ಟ್ರದಲ್ಲಿ ಥರ್ಮಲ್ ಪವರ್ ಪ್ಲಾಂಟ್ ನಲ್ಲಿ ಸರಾಸರಿ 21.55 ಮಿಲಿಯನ್ ಟನ್ ಹಾಗೂ ಕಲ್ಲಿದ್ದಲು ಕಂಪನಿಗಳಲ್ಲಿ 72.5 ಮಿಲಿಯನ್ ಸಂಗ್ರಹವಿದೆ. ಅತಿ ಹೆಚ್ಚು ವಿದ್ಯುತ್ ಬೇಡಿಕೆ ಈ ತಿಂಗಳಲ್ಲಿ ನಿರ್ಮಾಣವಾಗಿದೆ. ಆದರೂ ಯಾರು ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಭಯಂಕರ ಬಿಸಿಲು ಇದ್ದಿದ್ದೇ ಇದಕ್ಕೆ ಕಾರಣ. ದೇಶದ ಎಲ್ಲ ಭಾಗದಲ್ಲಿ ಕಲ್ಲಿದ್ದಲು ಸಂಗ್ರಹವಿದೆ. ಆದರೆ ಇನ್ನೇನು 10 ದಿನಕ್ಕೆ ಕತ್ತಲೆ ಅವರಿಸುತ್ತೆ ಎನ್ನುವುದನ್ನು ಕೆಲವರು ಬಿಂಬಿಸುತ್ತಿದ್ದಾರೆ, ಅದು ಸರಿಯಲ್ಲ. ನಾವು ಪ್ರತಿ ದಿನ 1.7 ಮಿಲಿಯನ್ ಟನ್ ಪೂರೈಕೆ ಮಾಡುತ್ತಿದ್ದೇವೆ. ಎಷ್ಟು ಖಾಲಿಯಾಗುತ್ತದೆಯೋ ಅಷ್ಟು ನಾವು ತುಂಬುತ್ತಿದ್ದೇವೆ. ಈಗಾಗಲೇ ಬೇಕಾದಷ್ಟು ಸಂಗ್ರಹವಿದೆ. ಗಾಬರಿ ಪಡುವ ಅವಶ್ಯಕತೆಯಿಲ್ಲ. ಬೇಡಿಕೆ ಹೆಚ್ಚಾಗಿ ಬಂದಿದ್ದರಿಂದ ಸಾಗಣೆ ಮಾಡಲು ರೈಲ್ವೆ ಇಲಾಖೆ ಹಲವು ಕ್ರಮ ಕೈಗೊಂಡಿದೆ. ಯಾರು ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದರು.

ಇದನ್ನೂ ಓದಿ:ಭ್ರಷ್ಟಾಚಾರ ವಿಚಾರವನ್ನು ಬಿಜೆಪಿ ಬಹಳ ದೂರವಿಟ್ಟಿದೆ: ಸಚಿವ ಬಿ.ಶ್ರೀರಾಮುಲು

ಪಿಎಸ್ಐ ನೇಮಕಾತಿ ರದ್ದು ಬಗ್ಗೆ ಸರಕಾರ ನಿರ್ಧಾರ ಕೈಗೊಂಡಿದೆ. ಪರೀಕ್ಷೆಯಲ್ಲಿ ತಂತ್ರಜ್ಞಾನ ಬಳಸಿ ಕೆಲವೊಂದು ಅಪರಾಧ ಮಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಂಡಿದೆ. ಈಗಾಗಲೇ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಮುಂದೆಯೂ ಈ ರೀತಿ ಆಗದಂತೆ ಮುಖ್ಯಮಂತ್ರಿ ಗಮನ ಹರಿಸಿ ಕ್ರಮಕ್ಕೆ ಮುಂದಾಗಿದ್ದಾರೆ. ಕೆಲವೊಮ್ಮೆ ಪರೀಕ್ಷೆ ರದ್ದಿನಂತಹ ಸಂಗತಿಗಳು ಅನಿವಾರ್ಯವಾಗಿ ಆಗುತ್ತವೆ. ಹೀಗಾಗಿ ಎಲ್ಲರೂ ಸಹಕರಿಸಬೇಕು ಎಂದರು.

ಹಳಿ ತಪ್ಪಿದ ಪುಟಾಣಿ ರೈಲು:  ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಇಲ್ಲಿನ ಮಹಾತ್ಮಾ ಗಾಂಧಿ ಉದ್ಯಾನವನದಲ್ಲಿ ನಿರ್ಮಿಸಲಾದ ಪುಟಾಣಿ ರೈಲು ಉದ್ಘಾಟಿಸಿ, ಅದರಲ್ಲಿ ಪ್ರಯಾಣಿಸಿದರು. ಆದರೆ ಮಾರ್ಗ ಮಧ್ಯೆ ಒಂದು ಬೋಗಿ ಹಳಿ ತಪ್ಪಿದೆ. ತಕ್ಷಣ ಎಲ್ಲರೂ ಕೆಳಗೆ ಇಳಿದರು. ಯಾರಿಗೂ ಯಾವುದೇ ಹಾನಿ ಆಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next