Advertisement

ಮಹಿಳಾ ಕಾಲೇಜಿಗೆ ಜಾಗವಿದ್ದರೂ ಕಟ್ಟಡ ಕಟ್ಟಲು ಹಣವಿಲ್ಲ !

03:35 PM May 10, 2017 | Team Udayavani |

ಪುತ್ತೂರು: ಪುತ್ತೂರು ಉಪವಿಭಾಗದ ಏಕೈಕ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಈ ಶೈಕ್ಷಣಿಕ ವರ್ಷದಲ್ಲೂ ಸ್ವಂತ ಕಟ್ಟಡದ ಕನಸು ಈಡೇರುವ ಲಕ್ಷಣ ಕಾಣಿಸುತ್ತಿಲ್ಲ.

Advertisement

ಮೂರು ವರ್ಷದ ಹಿಂದೆ ಕಾಲೇಜು ಮಂಜೂರಾತಿಗೊಂಡರೂ ಕಾದಿರಿಸಲಾದ ಸ್ಥಳದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಲಭ್ಯವಾಗಿಲ್ಲ. ಕಳೆದ ಶೈಕ್ಷಣಿಕ ವರ್ಷದಿಂದ ಒಂದೇ ಕಾಲೇಜು ಬೇರೆ- ಬೇರೆ ಕಡೆ ಇರುವ ಎರಡು ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಪ್ರಸ್ತುತ 2017-18ನೇ ಸಾಲಿನ ಪದವಿ ತರಗತಿಗಳು ಅಂತಿಮ ಹಂತದಲ್ಲಿದೆ. ಶೈಕ್ಷಣಿಕ ಗುಣಮಟ್ಟದಲ್ಲಿ ಮುಂಚೂಣಿಯಲ್ಲಿರುವ ಕಾಲೇಜಿಗೆ ಪ್ರತಿ ವರ್ಷ ಹೆಚ್ಚೆಚ್ಚು ವಿದ್ಯಾರ್ಥಿನಿಯರು ಪ್ರವೇಶ ಪಡೆಯುತ್ತಿದ್ದರೂ ಮೂಲ ಸೌಕರ್ಯ ಇಲ್ಲ ಎಂಬಂತಾಗಿದೆ.

ಹಳೆ ಜೈಲಿನಲ್ಲಿ ಕಾಲೇಜು!
ಹಳೆ ತಾ| ಕಚೇರಿಯ ಬ್ರಿಟಿಷ್‌ ಕಾಲದ ಕಟ್ಟಡ ಆರಂಭದಲ್ಲಿ ಹಳೆ ಜೈಲು, ಆ ಬಳಿಕ ಹಳೆ ತಾ| ಕಚೇರಿ ಆಗಿತ್ತು. ಈ ಕಟ್ಟಡದಲ್ಲಿರುವ ಮಹಿಳಾ ಕಾಲೇಜಿಗೆ ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣ ವಾಗಿ ಸ್ಥಳಾವಕಾಶಲ್ಲ. ಕಳೆದ ಶೈಕ್ಷಣಿಕ ವರ್ಷದ ಆರಂಭದಲ್ಲೇ ಪುತ್ತೂರು ಪುರಸಭೆಯ ಹಳೆಯ ಕಟ್ಟಡದ ಕೆಲವೊಂದು ಕೋಣೆಗಳನ್ನು ಬಳಧಿಸಲಾ ಯಿತು. ಹೀಗಾಗಿ ಒಂದೇ ಕಾಲೇಜು 200 ಮೀ. ಅಂತರದಲ್ಲಿ 2 ಕಟ್ಟಡಧಿಗಳಲ್ಲಿ ಕಾರ್ಯಾಚರಿಸುತ್ತಿದೆ. ಜತೆಗೆ  ವಿದ್ಯಾರ್ಥಿ ಗಳು, ಉಪನ್ಯಾಸಕರೂ ಅತ್ತಿಂದಿತ್ತ ಓಡಾಡುವಂತಾಗಿದೆ.

ಅನುದಾನ ಬಂದಿಲ್ಲ
ಈ ಕಾಲೇಜಿಗೆಂದೂ ನಗರಧಿದಿಂದ 3 ಕಿ.ಮೀ. ದೂರದ ಬೊಳುವಾರು-ಧಿಉಪ್ಪಿ ನಂಗಡಿ ರಸ್ತೆಯ ಪಡೀಲು ಸಮೀಪದ ಆನೆಮಜಲಿನಲ್ಲಿ 4.70 ಎಕÅೆ ಜಮೀನು ಕಾದಿರಿಸಲಾಗಿದೆ. 

Advertisement

ಕಾಲೇಜು ಶಿಕ್ಷಣ ಆಯುಕ್ತರ ಹೆಸರಿನಲ್ಲಿ ಪಹಣಿ ಪತ್ರ ಆಗಿದೆ. ಅಲ್ಲಿ ನೂತನ ಕಟ್ಟಡ ನಿರ್ಮಿಸಲು ಅನುಕೂಲವಾಗುವಂತೆ 5 ಕೋಟಿ ರೂ. ಅನುದಾನ ಕೋರಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. 

ಬಿಎಸ್‌ಸಿ ಕೋರ್ಸ್‌ ಗಮನದಲ್ಲಿ ಇಟ್ಟುಕೊಂಡು 25 ಕೊಠಡಿ, ಪ್ರಿನ್ಸಿಪಾಲ್‌ ಚೇಂಬರ್‌, ಉಪನ್ಯಾಸಕರ ಕೊಠಡಿ, ರೆಸ್ಟ್‌ ರೂಂ, ಗ್ರಂಥಾಲಯ, ಶೌಚಾಲಯ, ಆಟದ ಮೈದಾನ ಮೊದಲಾದ ಮೂಲ ಸೌಕರ್ಯಧಿಗಳನ್ನು ಪ್ರಸ್ತಾವನೆಯಲ್ಲಿ ಸೇರಿ ಸಲಾಧಿಗಿದೆ. ಆದರೆ ಇನ್ನೂ ಅನುದಾನ ಬಂದಿಲ್ಲ. 

ಹೆಚ್ಚುತ್ತಿರುವ ಬೇಡಿಕೆ
2014-15ನೇ ಸಾಲಿನಲ್ಲಿ ನೆಲ್ಲಿಕಟ್ಟೆ ಸ.ಪ್ರಾ. ಶಾಲೆಯಲ್ಲಿ ಆರಂಭಗೊಂಡ ಕಾಲೇಜಿನಲ್ಲಿ ಪ್ರಥಮ ಬಿ.ಎ., ಬಿಕಾಂ ತರಗತಿಗಳಿದ್ದವು. 2015-16ನೇ ಸಾಲಿನಲ್ಲಿ ಕಾಲೇಜು ಹಳೆ ತಾ| ಕಚೇರಿ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಇಲ್ಲಿ ತರಗತಿಗೆಂದೂ 6 ಕೊಠಡಿ ಇದೆ. ಮೊದಲ ಶೈಕ್ಷಣಿಕ ವರ್ಷದಲ್ಲಿ 120 ವಿದ್ಯಾರ್ಥಿನಿಯರಿದ್ದರು. 2ನೇ ವರ್ಷ 354ಕ್ಕೇರಿತು. 3ನೇ ವರ್ಷ 500ಕ್ಕೆ ಸಮೀಪಿ ಸಿದೆ. ಈ ವರ್ಷ ಮತ್ತಷ್ಟು ಏರುವ ಸಾಧ್ಯತೆ ಇದೆ.

ಅಬ್ಬಕ್ಕನ ಹೆಸರು
ಈ ಮಹಿಳಾ ಕಾಲೇಜಿಗೆ ರಾಣಿ ಅಬ್ಬಕ್ಕನ ಹೆಸರಿಡುವ ಬಗ್ಗೆ ಸರಕಾರದ ಗಮನಕ್ಕೆ ತರುವ ಪ್ರಸ್ತಾಪ ಇತ್ತು. ಮಹಿಳಾ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಸ್ಥಳೀಯ ಶಾಸಕಿಯವರು ಈ ಬಗ್ಗೆ ಉಲ್ಲೇಖೀಸಿದ್ದರು. ಆದರೆ ಅಧಿಕೃತವಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ.

ಅನುದಾನ ಬಂದಿಲ್ಲ 
ಈ ತನಕ ಅನುದಾನ ಬಂದಿಲ್ಲ. ಯಾವುದೇ ಹೊಸ ಕಾಲೇಜಿ ಗಳಿಗೂ ಅನುದಾನ ಬಿಡುಗಡೆ ಆಗಿಲ್ಲ. ಅನುಧಿದಾನ ಹಂಚಿಕೆಯ ಪಟ್ಟಿ ತಯಾರಿ ಆಗುತ್ತಿಧಿರುವ ಮಾಹಿತಿ ಲಭಿಸಿದೆ. ಮಹಿಳಾ ಕಾಲೇಜಿಗೂ ಅನು ದಾನ ಇದೆಯೋ ಎಂಬ ಬಗ್ಗೆ ಮಾಹಿತಿ ಇನ್ನಷ್ಟೇ ಬರಬೇಕಿದೆ.
– ಕ್ಷೇವಿಯರ್‌ ಡಿ’ಸೋಜಾ, ಪ್ರಾಂಶುಪಾಲರು, ಮಹಿಳಾ ಕಾಲೇಜು, ಪುತ್ತೂರು

ಅನುದಾನಕ್ಕೆ ಪ್ರಯತ್ನ
ಕಾಲೇಜಿನ ಹೆಸರಿನಲ್ಲಿ ಸ್ವಂತ ಜಾಗ ಕಾದಿರಿಸಿದ್ದು ಪಹಣಿ ಪತ್ರ ಆಗಿದೆ. ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟವರ ಜತೆ ಚರ್ಚಿಸಿ ಅನುದಾನ ಶೀಘ್ರ ಬಿಡುಗಡೆಗೆ ಪ್ರಯತ್ನ ನಡೆಯುತ್ತಿದೆ.
– ಶಕುಂತಳಾ ಟಿ. ಶೆಟ್ಟಿ, ಶಾಸಕಿ

Advertisement

Udayavani is now on Telegram. Click here to join our channel and stay updated with the latest news.

Next