Advertisement

ನಿರ್ಲಕ್ಷ್ಯಕ್ಕೊಳಗಾದ ಎಲ್ಲ ವಲಯಗಳಲ್ಲೂ ಈಗ ಅಭಿವೃದ್ಧಿ ತಲುಪಿದೆ: ಕಂದಾಯ ಸಚಿವ

05:49 PM Nov 04, 2020 | mahesh |

ಕಾಸರಗೋಡು: ಅನೇಕ ವರ್ಷಗಳಿಂದ ಉತ್ತರ ಮಲಬಾರ್‌ ಪ್ರದೇಶ ನಿರ್ಲಕ್ಷ್ಯಕ್ಕೊಳಗಾಗಿದ್ದು, ಈ ಬಾರಿಯ ರಾಜ್ಯಸರಕಾರದ ಅವಧಿಯಲ್ಲಿ ಈ ವಲಯದ ಎಲ್ಲ ವಲಯಗಳಲ್ಲೂ ಅಭಿವೃದ್ಧಿ ತಲುಪಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್‌ ತಿಳಿಸಿದರು.

Advertisement

ಮಡಿಯನ್‌ ಸರಕಾರಿ ಶಾಲೆಯಲ್ಲಿ ನಿರ್ಮಿಸಲಾದ ಮೂರು ತರಗತಿ ಕೊಠಡಿಗಳ ಉದ್ಘಾಟನೆಯನ್ನು ನಡೆಸಿ ಅವರು ಮಾತನಾಡಿದರು. ಕಂದಾಯ ಸಚಿವರ ಸ್ಥಳೀಯ ಅಭಿವೃದ್ಧಿ ನಿಧಿಯಿಂದ 25 ಲಕ್ಷ ರೂ. ವೆಚ್ಚದಲ್ಲಿ ಈ ಕಟ್ಟಡಗಳ ನಿರ್ಮಾಣ ನಡೆಸಲಾಗಿದೆ. ರಾಜ್ಯದ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ನಡೆದಿವೆ. ಶಿಕ್ಷಣ ವಲಯದಲ್ಲಿ ಸಮಗ್ರ ಅಭಿವೃದ್ಧಿ ನಡೆದಿದೆ. ರಾಜಕೀಯ ಪಕ್ಷಗಳ ಭೇದವಿಲ್ಲದೆ ಜನತೆಯ ಒಗ್ಗಟ್ಟಿನ ಫಲವಾಗಿ ಈ ಅಭಿವೃದ್ಧಿ ಜರುಗಿದೆ ಎಂದವರು ನುಡಿದರು.

ಅಜಾನೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಪಿ.ದಾಮೋದರನ್‌ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್‌ ಮೋಹನ್‌ ಉಣ್ಣಿತ್ತಾನ್‌ ಮುಖ್ಯ ಅತಿಥಿಯಾಗಿದ್ದರು. ಬ್ಲಾಕ್‌ ಪಂಚಾಯತ್‌ ಅಧ್ಯಕ್ಷೆ ಎಂ.ಗೌರಿ ಶಾಲೆಯ ನೂತನ ಪ್ರವೇಶದ್ವಾರವನ್ನು ಉದ್ಘಾಟಿಸಿದರು. ಎಲ್‌.ಎಸ್‌.ಜಿ.ಡಿ. ಕಾಸರಗೋಡು ಡಿವಿಝನ್‌ ಕಾರ್ಯಕಾರಿ ಎಂಜಿನಿಯರ್‌ ಎಂ.ವಿ.ಸಂತೋಷ್‌ ವರದಿ ವಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next