Advertisement

ಚಿತ್ರರಂಗ ಬಿಟ್ಟು ಎಲ್ಲೂ ಹೋಗಲ್ಲ

11:14 AM Dec 03, 2018 | Team Udayavani |

ಕೆಲವು ನಟಿಯರು ಚಿತ್ರರಂಗಕ್ಕೆ ಒಂದಷ್ಟು ಸಿನಿಮಾ ಮಾಡಿ, ಆ ನಂತರ ಗ್ಯಾಪ್‌ ತಗೊಂಡು ಮತ್ತೆ ವಾಪಾಸ್‌ ಆಗುತ್ತಾರೆ. ಹೀಗೆ ರೀ ಎಂಟ್ರಿಕೊಡುವ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಈಗ ಐಶ್ವರ್ಯ ಸಿಂಧೋಗಿ ಕೂಡಾ ಆ ತರಹದ ನಿರೀಕ್ಷೆಯಲ್ಲಿ ಸಿನಿಮಾವೊಂದಕ್ಕೆ ಎದುರು ನೋಡುತ್ತಿದ್ದಾರೆ. ಹಾಗೆ ಅವರು ಎದುರು ನೋಡುತ್ತಿರುವ ಸಿನಿಮಾ “ಮಟಾಶ್‌’. ಈಗಾಗಲೇ ಹಾಡುಗಳ ಮೂಲಕ ಸಾಕಷ್ಟು ಸುದ್ದಿ ಮಾಡುತ್ತಿರುವ “ಮಟಾಶ್‌’ ಚಿತ್ರ ಡಿಸೆಂಬರ್‌ 7 ರಂದು ತೆರೆಕಾಣುತ್ತಿದೆ.

Advertisement

ಈ ಚಿತ್ರದಲ್ಲಿ ಐಶ್ವರ್ಯ ಸಿಂಧೋಗಿ ನಾಯಕಿಯಾಗಿದ್ದಾರೆ. ಈಗಾಗಲೇ ಕನ್ನಡದಲ್ಲಿ ಒಂದಷ್ಟು ಚಿತ್ರಗಳಲ್ಲಿ ನಟಿಸಿರುವ ಐಶ್ವರ್ಯ ವಿದ್ಯಾಭ್ಯಾಸದ ಕಾರಣದಿಂದ ಚಿತ್ರರಂಗದಿಂದ ಗ್ಯಾಪ್‌ ತೆಗೆದುಕೊಂಡಿದ್ದರು. ಯುಎಸ್‌ಎನಲ್ಲಿದ್ದ ಐಶ್ವರ್ಯ ಈಗ “ಮಟಾಶ್‌’ ಮೂಲಕ ಮತ್ತೆ ಬರುತ್ತಿದ್ದಾರೆ. ಸಹಜವಾಗಿಯೇ ಈ ಸಿನಿಮಾ ಮೇಲೆ ಐಶ್ವರ್ಯ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟಿದ್ದಾರೆ. “ನಾನು ಈ ಹಿಂದೆ ಅರವಿಂದ್‌ ಅವರ ಸಿನಿಮಾಗಳನ್ನು ನೋಡಿದ್ದೆ.

ಅವರು ವಿಭಿನ್ನವಾದ ಕಥೆಗಳನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಅದೇ ಕಾರಣದಿಂದ ಅವರ ಕಡೆಯಿಂದ “ಮಟಾಶ್‌’ಗೆ ಕರೆಬಂದಾಗ ನಾನು ಖುಷಿಯಾದೆ. ಅದರಂತೆ ಈ ಚಿತ್ರದಲ್ಲಿ ನನಗೆ ಒಳ್ಳೆಯ ಪಾತ್ರ ಸಿಕ್ಕಿದೆ. ಜವಾಬ್ದಾರಿಯುತ ಬೆಂಗಳೂರು ಹುಡುಗಿಯಾಗಿ ನಟಿಸಿದ್ದೇನೆ. ಕಷ್ಟಕ್ಕೆ ಸಿಲುಕಿದಾಗ ಹೇಗೆ ಹೊರಗಡೆ ಬರುತ್ತೇನೆ, ಬೇರೆಯವರಿಗೆ ಹೇಗೆ ಸಹಾಯವಾಗುತ್ತೇನೆ ಎಂಬ ಅಂಶದೊಂದಿಬಗೆ ಸಿನಿಮಾ ಸಾಗುತ್ತದೆ.

ಸಮರ್ಥ್ ನರಸಿಂಹರಾಜು ನನ್ನ ಜೋಡಿಯಾಗಿ ನಟಿಸಿದ್ದಾರೆ. ಇಡೀ ಸಿನಿಮಾ ತುಂಬಾ ಮಜವಾಗಿ ಸಾಗುತ್ತದೆ. ಚಿತ್ರದ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿರೋದು ನಮಗೆ ಪ್ಲಸ್‌’ ಎಂದು ಚಿತ್ರದ ಬಗ್ಗೆ ಖುಷಿಯಿಂದ ಹೇಳುತ್ತಾರೆ ಐಶ್ವರ್ಯ. ರೀಎಂಟ್ರಿಗೆ ಈ ಸಿನಿಮಾ ಪ್ಲಸ್‌ ಆಗುತ್ತಾ ಎಂದರೆ ಖಂಡಿತಾ ಎಂಬ ಉತ್ತರ ಐಶ್ವರ್ಯ ಅವರಿಂದ ಬರುತ್ತದೆ. “ರೀ ಎಂಟ್ರಿಗೆ ಈ ಸಿನಿಮಾ ಖಂಡಿತಾ ಪ್ಲಸ್‌ ಆಗುತ್ತದೆ. ಮೊದಲೇ ಹೇಳಿದಂತೆ ಆ ತರಹದ ಒಂದು ಪಾತ್ರ ಸಿಕ್ಕಿದೆ.

ನಾನಂತೂ ಈ ಸಿನಿಮಾ ಮೇಲೆ ತುಂಬಾ ನಿರೀಕ್ಷೆ ಇಟ್ಟಿದ್ದೇನೆ’ ಎನ್ನುತ್ತಾರೆ. ಇನ್ನು ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಮಾಡಿ, ಯುಎಸ್‌ಎನಲ್ಲಿ ಇಂಟರ್ನ್ಶಿಪ್‌ ಮಾಡಿಕೊಂಡು ಬಂದಿರುವ ಐಶ್ವರ್ಯ ಮುಂದೆ ಕನ್ನಡ ಚಿತ್ರರಂಗದಲ್ಲಿ ಗಟ್ಟಿನೆಲೆ ಕಾಣುವ ಕನಸು ಕಾಣುತ್ತಿದ್ದಾರೆ. “ನನ್ನ ಎಜುಕೇಶನ್‌ ಮುಗಿದಿದೆ. ಇನ್ನೇನಿದ್ದರೂ ಸಿನಿಮಾ ಕಡೆಗೆ ಆಸಕ್ತಿ’ ಎನ್ನುವುದು ಐಶ್ವರ್ಯ ಮಾತು. ಸದ್ಯ “ಮೈಲಾಪುರ’ ಎಂಬ ಹಾರರ್‌ ಸಿನಿಮಾವೂ ಐಶ್ವರ್ಯ ಕೈಯಲ್ಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next