Advertisement
ಅಣ್ಣಾಮಲೈ ಅವರು ಎಸ್‌ಪಿ ಯಾಗಿದ್ದ ಸಂದರ್ಭ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಸಾಧಿಸಿ ಅತ್ಯಲ್ಪ ಸಮಯದಲ್ಲಿ ಸಮಸ್ಯೆ ಬಗೆಹರಿಸಲು 2017 ಮಾ.27ರಂದು ಆ್ಯಪ್ ಹೊರತಂದಿದ್ದರು. ಇದಕ್ಕೆ ಹಲವಾರು ದೂರುಗಳೂ ಬರುತ್ತಿದ್ದವು. ಆದರೆ ಅಣ್ಣಾಮಲೈ ನಿರ್ಗಮನ ಬಳಿಕ ಕೆ.ಟಿ. ಬಾಲಕೃಷ್ಣ ಎಸ್.ಪಿ.ಯಾಗಿದ್ದು, ಅವರ 1 ವರ್ಷದ ಕಾರ್ಯಾವಧಿಯಲ್ಲಿ ಆ್ಯಪ್ ಸ್ತಬ್ಧವಾಗಿತ್ತು. ಬಳಿಕ ಎಸ್.ಪಿ.ಯಾಗಿ ಡಾ| ಸಂಜೀವ್ ಎಂ. ಪಾಟೀಲ್ ಅವರು ಬಂದಿದ್ದು ಕೆಲವೊಂದು ದೂರುಗಳು ಬರುತ್ತಿದ್ದವು.
ನೋಪಾರ್ಕಿಂಗ್‌ನಲ್ಲಿ ವಾಹನ ನಿಲುಗಡೆ, ರಸ್ತೆಯಲ್ಲಿ ನಡೆದಾಡುವ ಮಹಿಳೆಯರಿಗೆ ಕಿರುಕುಳ, ಇನ್ನಿತರ ದೂರುಗಳು ಕ್ಷಣಮಾತ್ರದಲ್ಲಿ ಆ್ಯಪ್ ಮೂಲಕ ಪರಿಹಾರ ಕಾಣುತ್ತಿದ್ದವು. ಅಣ್ಣಾಮಲೈ ನಿರ್ಗಮನ ಬಳಿಕ ಆ್ಯಪ್ ವ್ಯವಸ್ಥೆ ಮುಂದುವರಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದರೂ ಕಾಟಾಚಾರಕ್ಕಷ್ಟೇ ಆಗಿದೆ. ಕನ್ನಡದಲ್ಲೂ ದೂರಿಗೆ ಅವಕಾಶ
ಆ್ಯಪ್‌ನಲ್ಲಿ ಕನ್ನಡ ಯುನಿಕೋಡ್ ಮೂಲಕ ಟೈಪ್ ಮಾಡಿಯೂ ಆ್ಯಪ್‌ನಲ್ಲಿ ದೂರು ಕಳಿಸಬಹುದು. ಒಂದು ವೇಳೆ ಮೊಬೈಲ್ ಸಪೋರ್ಟ್ ಮಾಡದಿದ್ದರೆ ದೂರು ಟ್ರ್ಯಾಕಿಂಗ್ ಬಾಕ್ಸ್‌ನಲ್ಲಿ ಪ್ರಶ್ನಾರ್ಥಕ ಚಿಹ್ನೆ ಕಾಣಿಸುತ್ತದೆ. ಆದರೆ ಕನ್ನಡದಲ್ಲಿ ಬರೆದ ದೂರು ಸಂಬಂಧಪಟ್ಟವರಿಗೆ ತಲುಪಿರುತ್ತದೆ. ಆಂಗ್ಲ ಭಾಷೆಯಲ್ಲಿ ದೂರು ಕಳುಹಿಸಿದರೆ ಉತ್ತಮ. ಫೀಡ್‌ಬ್ಯಾಕ್‌ನಲ್ಲಿ ಪೊಲೀಸ್ ಇಲಾಖೆಗೆ ಸಲಹೆಗಳನ್ನೂ ಕಳುಹಿಸಿಕೊಡಬಹುದು. ದಾಖಲೆಯಾಗಿ 1 ಫೊಟೋ ಅಪ್‌ಲೋಡ್ ಮಾಡಲು ಸಾಧ್ಯವಿದೆ. ಹೆಚ್ಚಿನ ಫೊಟೋ ಅಪ್‌ಲೋಡ್‌ಗೆ ಅವಕಾಶ ಕಲ್ಪಿಸಬೇಕೆಂಬ ಒತ್ತಾಯ ಸಾರ್ವಜನಿಕರದ್ದು.
Related Articles
ಉಡುಪಿಯ ಚಿಪ್ಸಿ ಸಂಸ್ಥೆಯ ಸಂದೀಪ್ ಭಕ್ತ ಮತ್ತವರ ತಂಡವು ಸುರಕ್ಷಾ ಪೊಲೀಸ್ ಆ್ಯಪ್ ಅನ್ನು ಡೆವಲಪ್ ಮಾಡಿದ್ದು ತಾಂತ್ರಿಕ ನಿರ್ವಹಣೆಯನ್ನೂ ಮಾಡುತ್ತಿದೆ. ಆಡಳಿತಾತ್ಮಕ ನಿರ್ವಹಣೆಯನ್ನು ಎಸ್‌ಪಿ ಮತ್ತವರ ನಿರ್ದೇಶನದಲ್ಲಿ ಎಎಸ್‌ಪಿ, ಡಿಪಿಒ, ಡಿವೈಎಸ್‌ಪಿ, ಡಿಸಿಆರ್‌ಬಿ, ಡಿಎಸ್‌ಬಿ, ಎಫ್ಪಿಬಿ ಮತ್ತು ಐಟಿ ವಿಭಾಗ ನಿರ್ವಹಿಸುತ್ತಿ¤ದೆ.
Advertisement
ಮೊದಲ 17 ತಿಂಗಳು 702 ದೂರು ಅನಂತರದ 17 ತಿಂಗಳು 114 ದೂರು ಅಣ್ಣಾಮಲೈ ಅವರಿದ್ದ ಸಮಯದ 17 ತಿಂಗಳಲ್ಲಿ 702 ದೂರುಗಳು ಬಂದಿದ್ದವು. ಅದರಲ್ಲಿ 701 ದೂರು ಇತ್ಯರ್ಥಪಡಿಸಲಾಗಿತ್ತು. ಅನಂತರದ 17 ತಿಂಗಳಲ್ಲಿ ಕೇವಲ 114 ದೂರುಗಳಷ್ಟೇ ಬಂದಿವೆ. ಅಣ್ಣಾಮಲೈ ಅಧಿಕಾರಾವಧಿಯ ಅನಂತರದಲ್ಲಿ ಆ್ಯಪ್‌ನಲ್ಲಿ ಎಸ್‌ಪಿಗಳ ಹೆಸರು ಬದಲಾಗಿದೆಯೇ ಹೊರತು ಯಾವುದೇ ಅಪ್ಡೆàಟ್ಸ್ ಇಲ್ಲ. ಆ್ಯಪ್-ಹೀಗೆ ಡೌನ್‌ಲೋಡ್ ಮಾಡಿಕೊಳ್ಳಿ
ಗೂಗಲ್ ಪ್ಲೇಸ್ಟೋರ್‌ಗೆ ಹೋಗಿ ಸುರಕ್ಷಾ ಪೊಲೀಸ್ ಎಂದು ಟೈಪ್ ಮಾಡಿ. ಬಳಿಕ ಇನ್‌ಸ್ಟಾಲ್ ಮಾಡಿ. ಅನಂತರ ಹೆಸರು, ಮೊಬೈಲ್ ನಂಬರ್ ಹಾಕಿ ನೋಂದಣಿ ಮಾಡಬೇಕು. ನೋಂದಣಿಯಾದರೆ ಮಾತ್ರ ಆ್ಯಪ್‌ನಲ್ಲಿ ದೂರು ದಾಖಲಿಸಲು, ವೀಕ್ಷಿಸಲು, ದಾಖಲೆ ಅಪ್‌ಲೋಡ್‌ಗೆ ಅವಕಾಶ. – ಚೇತನ್ ಪಡುಬಿದ್ರಿ