Advertisement

ಬಿಜೆಪಿ ಅವಧಿಯಲ್ಲಿದ್ದ ನೀರಿನ ಸಮಸ್ಯೆ ಈಗಿಲ್ಲ

12:29 PM Apr 30, 2018 | Team Udayavani |

ಕೆ.ಆರ್‌.ಪುರ: “ಅಭಿವೃದ್ಧಿಯನ್ನೇ ಮೂಲ ಮಂತ್ರವಾಗಿಸಿಕೊಂಡಿರುವ ನಾನು ಮತ್ತೂಮ್ಮೆ ಶಾಸಕನಾಗಲು ಅವಕಾಶ ಮಾಡಿಕೊಡಿ, ನಿಮ್ಮ ಪ್ರೀತಿ ವಿಶ್ವಾಸ ಉಳಿಸಿಕೊಳ್ಳತ್ತೇನೆ,’ ಎಂದು ಕೆ.ಆರ್‌.ಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಹಾಲಿ ಶಾಸಕ ಭೈರತಿ ಬಸವರಾಜ ಮತದಾರರಲ್ಲಿ ಮನವಿ ಮಾಡಿದರು.

Advertisement

ದೇವಸಂದ್ರ ವಾರ್ಡ್‌ನ ವಿವಿಧ ಬಡಾವಣೆಗಳಲ್ಲಿ ಮತಯಾಚನೆ ನಡೆಸಿದ ವೇಳೇ ಮಾತನಾಡಿದ ಅವರು, “ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಪೂರ್ಣಗೊಳಿಸಿದ ತೃಪ್ತಿ ನನಗಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದ ಸಂದರ್ಭದಲ್ಲಿ ಕೆ.ಆರ್‌.ಪುರ ಕ್ಷೇತ್ರದಲ್ಲಿ ನೀರಿನ ಅಭಾವವಿತ್ತು. ಟ್ಯಾಂಕರ್‌ಗಳ ಮೂಲಕ ಬಡಾವಣೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ನಾನು ಶಾಸಕನಾದ ನಂತರ, ಕಾಂಗ್ರೆಸ್‌ ಸರ್ಕಾರ ನೀಡಿದ ಅನುದಾನದ ನೆರವಿನಿಂದ ಕ್ಷೇತ್ರದಲ್ಲಿದ್ದ ನೀರಿನ ಸಮಸ್ಯೆ ನಿವಾರಿಸಿದ್ದೇನೆ,’ ಎಂದು ತಿಳಿಸಿದರು.

“ಅರ್ಹ ಫ‌ಲಾನುಭವಿಗಳಿಗೆ ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ ಒದಗಿಸುವ ಮೂಲಕ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ, ಸಿಗೇಹಳ್ಳಿ, ಗೆದ್ದಲಹಳ್ಳಿ, ಹೊರಮಾವು ಆಗರದಲ್ಲಿ ತ್ಯಾಜ್ಯ ನೀರು ಸಂಸ್ಕರಣ ಘಟಕಗಳ ಸ್ಥಾಪನೆ, ಕೆ.ಆರ್‌.ಪುರದ ವಿವಿಧ ಭಾಗಗಳಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರ ನಿರ್ಮಾಣದೊಂದಿಗೆ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಮೂಲಕ ಬಡ ರೋಗಿಗಳಗೆ ಸಹಾಯಧನ ಒದಗಿಸಲಾಗಿದೆ,’ ಎಂದು ಭೈರತಿ ಬಸವರಾಜ ಹೇಳಿದರು.

ಬೆಂಗಳೂರು ನಗರದ ಅಭಿವೃದ್ಧಿಗೆ ಹಿಂದೆ ಯಾವುದೇ ಸರ್ಕಾರ ನೀಡದಷ್ಟು ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ನೀಡಿದ್ದು, ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದೆ. ಈ ಮೂಲಕ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದೆ ಎಂದರು.

ದೇವಸಂದ್ರ ವಾರ್ಡ್‌ನ ನೇತ್ರವತಿ ಬಡಾವಣೆ, ಮಸೀದಿ ರಸ್ತೆ, ಬೀಮಯ್ಯ ಬಡಾವಣೆ, ಟೆಂಟ್‌ ರಸ್ತೆ, ರಾಜರಾಜೇಶ್ವರಿ ದೇವಸ್ಥಾನ ಸೇರಿ ಹಲವೆಡೆ ಸಂಚರಿಸಿದ ಶಾಸಕರು ಮತಯಾಚನೆ ನಡೆಸಿದರು. ಈ ವೇಳೆ ರಾಜರಾಜೇಶ್ವರಿ ಬಡಾವಣೆ ನಾಗರಿಕರು, ಹೂಗುಚ್ಚ ನೀಡಿ  ಭೈರತಿ ಬಸವರಾಜ ಅವರನ್ನು ಸನ್ಮಾಸಿದರು. ಪಾಲಿಕೆ ಸದಸ್ಯರಾದ ಎಂ.ಎನ್‌. ಶ್ರೀಕಾಂತ್‌, ವಿ.ಸುರೇಶ್‌, ಪಾಲಿಕೆ ಮಾಜಿ ಸದಸ್ಯೆ ಮಂಜುಳಾ ದೇವಿ ಶ್ರೀನಿವಾಸ್‌ ಹಾಗೂ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next