Advertisement

ನಗರದ ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಗೆ ನೀರಿಲ್ಲ!

11:38 PM May 29, 2019 | sudhir |

ಉಡುಪಿ: ಬೇಸಗೆ ರಜೆ ಮಜವಾಗಿ ಕಳೆದ ಮಕ್ಕಳಿಗೆ ಮೇ 29ರಿಂದ ಶಾಲೆ ಪುನಾರಂಭವಾಗಿದ್ದು, ಇದೀಗ ಕುಡಿಯುವ ನೀರಿನ ಸಮಸ್ಯೆಯಿಂದ ಶಾಲೆಗಳಿಗೆ ರಜೆ ನೀಡಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿದೆ.

Advertisement

ಬಿಸಿಯೂಟಕ್ಕೆ ನೀರಿನ ಸಮಸ್ಯೆ

ನೀರಿನ ಸಮಸ್ಯೆ ಶಾಲೆಗಳನ್ನು ಬಿಟ್ಟಿಲ್ಲ. ನಗರದ ಸುತ್ತಮುತ್ತಲಿನ ಶಾಲೆಗಳ ಬಾವಿ ನೀರು ಬತ್ತಿ ಹೋಗಿದೆೆ. ಇದರಿಂದಾಗಿ ಬಿಸಿಯೂಟ ತಯಾರಿಕೆಗೆ ನೀರಿನ ಕೊರತೆ ಇದೆ. ಸ್ಥಳೀಯಾಡಳಿತ ನೀರು ನೀಡುವುದಾಗಿ ಭರವಸೆ ನೀಡಿದೆ. ಆದರೆ ಇಲ್ಲಿಯವರೆಗೆ ಶಾಲೆಗಳಿಗೆ ನೀರು ಪೂರೈಕೆಯಾಗಿಲ್ಲ.

8 ಶಾಲೆಗಳಿಂದ ನೀರಿಗಾಗಿ ಮನವಿ

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಕಡಿಯಾಳಿ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ, ವಳಕಾಡು, ಬೋರ್ಡ್‌ ಹೈಸ್ಕೂಲ್, ಬಾಲಕಿಯರ ಪ.ಪೂ. ಕಾಲೇಜು, ನಾರ್ತ್‌ ಶಾಲೆ ಸೇರಿದಂತೆ ಇತರೆ 8 ಅನುದಾನಿತ ಹಾಗೂ ಸರಕಾರಿ ಶಾಲೆಗಳು ನೀರಿನ ಸಮಸ್ಯೆಯಿಂದ ನರಳುತ್ತಿದೆ. ಟ್ಯಾಂಕರ್‌ ಮೂಲಕ ನೀರು ಒದಗಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಕಚೇರಿಗೆ ಪತ್ರಗಳು ಬಂದಿವೆ.

ನೀರಿಗಾಗಿ ಮನವಿ ಮಾಡಿದ್ದೇವೆ

ಶಾಲೆಗೆ ನೀರು ಪೂರೈಕೆ ಮಾಡುವಂತೆ ಸ್ಥಳೀಯಾಡಳಿತಕ್ಕೆ ಮನವಿ ಮಾಡಲಾಗಿದೆ. ಸದ್ಯಕ್ಕೆ ಶಾಲೆಯ ಬಾವಿಯಲ್ಲಿರುವ ನೀರು ಮುಂದಿನ 7 ದಿನಕ್ಕೆ ಸಾಕು.
-ಗಣೇಶ್‌ ಮೂರ್ತಿ ಹೆಬ್ಟಾರ್‌, ಮುಖ್ಯೋಪಾಧ್ಯಾಯ, ಕಡಿಯಾಳಿ ಪ್ರೌಢಶಾಲೆ
ಅರ್ಧದಿನ ಶಾಲೆ ನಡೆಸುವ ಚಿಂತನೆ

ಶನಿವಾರದ ವರೆಗೆ ನೀರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ನೀರಿನ ಸಮಸ್ಯೆ ಹೆಚ್ಚಾದರೆ ಅರ್ಧ ದಿನ ಶಾಲೆಯನ್ನು ನಡೆಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ.
-ನಿರ್ಮಲಾ ರಾವ್‌, ವಳಕಾಡು ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ
ಹಿಂದೆ ಶಾಲೆಗಳು ಪುನರಾರಂಭ ಆಗುವ ಹೊತ್ತಿಗೆ ಮುಂಗಾರಿನ ಸಿಂಚನ ಆಗುತ್ತಿತ್ತು. ಆದರೆ ಈ ಬಾರಿ ಬಿಸಿಲ ಧಗೆ ಇನ್ನೂ ಹೆಚ್ಚಿದೆ. ಈಗಲ್ಲೂ ಜಿಲ್ಲೆಯಲ್ಲಿ 33-35 ಡಿಗ್ರಿ ತಾಪಮಾನವಿದೆ. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next