ಬೀದರ: ನಗರಸಭೆ ಸಾರ್ವತ್ರಿಕ ಚುನಾವಣೆ ಮತ್ತು ಹಳ್ಳಿಖೇಡ(ಬಿ) ಪುರಸಭೆ ಉಪಚುನಾವಣೆಯ ಮತಗಟ್ಟೆಗಳ ಕಾರ್ಯಕ್ಕೆನಿಯೋಜನೆಗೊಂಡ ಮತಗಟ್ಟೆ ಅಧಿ ಕಾರಿಗಳು ಹಾಗೂಸಹಾಯಕ ಮತಗಟ್ಟೆ ಅಧಿ ಕಾರಿಗಳು ಮತ್ತು ಪೋಲಿಂಗ್‌ಅ ಧಿಕಾರಿಗಳಿಗೆ ಶುಕ್ರವಾರ ನಗರದ ಜಿಲ್ಲಾ ರಂಗಮಂದಿರದಲ್ಲಿಪೂರ್ವಭಾವಿ ಸಿದ್ಧತಾ ಚುನಾವಣಾ ತರಬೇತಿ ನಡೆಯಿತು.
ಈ ವೇಳೆ ರಾಜ್ಯಮಟ್ಟದ ಮಾಸ್ಟರ್ ಟ್ರೇನರ್ ಗೌತಮಅರಳಿ ಮಾತನಾಡಿ, ನಗರಸಭೆ ಚುನಾವಣೆಗಾಗಿ ಏ.27ರಂದುಮತದಾನ ನಡೆಯಲಿದೆ. ಮತದಾನ ದಿನದಂದುಪ್ರತಿಯೊಬ್ಬರು ಜವಾವಾªರಿಯಿಂದ ಕಾರ್ಯನಿರ್ವಹಿಸಬೇಕುಎಂದು ತಿಳಿಸಿದರು.
ಈ ಚುನಾವಣೆಯಲ್ಲಿ ವಿವಿಪ್ಯಾಟ್‌ಇರುವುದಿಲ್ಲ. ಬ್ಯಾಲೆಟ್ ಯುನಿಟ್ ಮತ್ತು ಕಂಟ್ರೋಲ್‌ಯುನಿಟ್‌ಗಳನ್ನು ಮಾತ್ರ ಬಳಸಲಾಗುತ್ತದೆ ಎಂದುಸ್ಪಷ್ಟಪಡಿಸಿದರು.ಬ್ಯಾಲೆಟ್ ಯುನಿಟ್ ಮತ್ತು ಕಂಟ್ರೋಲ್‌ಯುನಿಟ್‌ಗಳನ್ನು ಸರಿಯಾಗಿ ಬಳಸಬೇಕು. ಬ್ಯಾಲೆಟ್‌ಯುನಿಟ್‌ನಲ್ಲಿ ಅಳವಡಿಸಿರುವ ಮತಪತ್ರ ಸರಿಯಾಗಿಪಂಕ್ತಿಕರಣಗೊಳಿಸಿರಬೇಕು ಮತ್ತು ಈ ಬ್ಯಾಲೆಟ್ ಯುನಿಟ್‌ನಲ್ಲಿ ಕಾಣುವ ಉಮೇದುವಾರರ ಬಟನ್‌ಗಳು ಸ್ಪರ್ಧಾಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆಗೆ ಸಮನಾಗಿರಬೇಕು.
ಈ ಯುನಿಟ್‌ನಲ್ಲಿ ಅಡ್ರೆಸ್ ಟ್ಯಾಗ್‌ನೊಂದಿಗೆ ಸೀಲ್‌ಮಾಡಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದು ಸಮಗ್ರವಿವರಿಸಿದರು.ಮತಗಟ್ಟೆಗಳ ವ್ಯವಸ್ಥೆ ಸರಿಯಾಗಿರುವಂತೆನೋಡಿಕೊಳ್ಳಬೇಕು. ಕೋವಿಡ್ ನಿಯಮಾವಳಿಯಪೋಸ್ಟರ್ ಹಾಕಬೇಕು. ಮತಗಟ್ಟೆ ಕೊಠಡಿಯಿಂದ 100ಮೀಟರ್ ಗುರುತು ಹಾಕಬೇಕು.
ಆ ವ್ಯಾಪ್ತಿಯ ಒಳಗಡೆಯಾವುದೇ ಪಕ್ಷದ ಅಥವಾ ಉಮೇದುವಾರರ ಭಿತ್ತಿ ಪತ್ರಪೋಸ್ಟರ್ ಇತರೆ ಯಾವುದಾದರು ಇದ್ದಲ್ಲಿ ತೆಗೆದು ಹಾಕಲುಕ್ರಮ ವಹಿಸಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಗಂಗಾದೇವಿ ಸಿ.ಎಚ್.ಹಾಗೂ ಇನ್ನೀತರ ಸಿಬ್ಬಂದಿ ಇದ್ದರು.