ನವದೆಹಲಿ: ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ (ಎಂಪಿಲಾಡ್) ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಅದರ ಬಳಕೆ ವಿಚಾರಕ್ಕೆ ಸಂಸದರು ಆಸಕ್ತಿ ವಹಿಸದೇ ನಿರ್ಲಕ್ಷಿಸುತ್ತಿದ್ದಾರೆ. 2004ರಿಂದ ಬಿಡುಗಡೆಯಾಗಿರುವ ಒಟ್ಟು ಎಂಪಿಲಾಡ್ ಮೊತ್ತದ ಪೈಕಿ 12 ಸಾವಿರ ಕೋಟಿ ರೂ. ಬಳಕೆಯಾಗದೇ ಉಳಿದುಕೊಂಡಿದೆ. ಈ ಪೈಕಿ ಉತ್ತರ ಪ್ರದೇಶದ ಸಂಸದರ ಹಣವೇ ಹೆಚ್ಚಿದ್ದರೆ, ನಂತರದ ಸ್ಥಾನದಲ್ಲಿ ಬಿಹಾರ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಸಂಸದರು ನಂತರದ ಸ್ಥಾನದಲ್ಲಿದ್ದಾರೆ.
ಇನ್ನು ಕರ್ನಾಟಕದಲ್ಲಿ ಪ್ರಸ್ತುತ ಲೋಕಸಭೆ ಅವಧಿಯಲ್ಲಿ ಬಿಡುಗಡೆಯಾದ ಮೊತ್ತದ ಪೈಕಿ 269 ಕೋಟಿ ರೂ. ಖರ್ಚಾಗದೇ ಉಳಿದಿದೆ. 2014ರಿಂದ 2403 ಕೋಟಿ ರೂ. ಎಂಪಿಲಾಡ್ ಬಿಡುಗಡೆಯಾಗಿತ್ತು. ಉತ್ತರ ಪ್ರದೇಶಕ್ಕೆ ಬಿಡುಗಡೆಯಾದ 6882 ಕೋಟಿ ರೂ. ಪೈಕಿ 693 ಕೋಟಿ ರೂ. ಹಾಗೆಯೇ ಬಿದ್ದಿದೆ. ಜಿಲ್ಲಾ ಮಟ್ಟದಲ್ಲೇ ಹಣ ಬಳಕೆ ಅಡ್ಡಿ ಇದೆ ಎಂದು ಹೇಳಲಾಗಿದೆ. ಬಹುತೇಕ ಸಂದರ್ಭಗಳಲ್ಲಿ ಕಾಮಗಾರಿ ಬಗ್ಗೆ ಅಗತ್ಯ ದಾಖಲೆ ಒದಗಿಸದಿರುವುದು ಮತ್ತು ಕಳಪೆ ಕಾಮಗಾರಿಯಿಂದಾಗಿ ಹಣ ಬಿಡುಗಡೆಗೆ ಅಡ್ಡಿ ಉಂಟಾಗಿದೆ ಎಂದು ಊಹಿಸಲಾಗಿದೆ.
ಜಿಲ್ಲಾಧಿಕಾರಿ, ರಾಜ್ಯ ಸರ್ಕಾರ ಹಾಗೂ ಸಂಸದರ ಮಧ್ಯೆ ಉತ್ತಮ ಸಂವಹನ ಸಾಧಿಸುವ ಉದ್ದೇಶದಿಂದ 30 ರಾಜ್ಯಗಳ ರಾಜ್ಯ ಮಟ್ಟದ ನೋಡಲ್ ಕಾರ್ಯದರ್ಶಿಗಳೊಂದಿಗೆ ಸಾಂಖಿಕ ಮತ್ತು ಯೋಜನೆ ಅನುಷ್ಠಾನ ಸಚಿವಾಲಯವು ಪರಿಶೀಲನೆ ಸಭೆಯನ್ನು ನಡೆಸಿದೆ.
16ನೇ ಲೋಕಸಭೆಯ ಎಂಪಿಲಾಡ್ ಬಳಕೆ (ಕೋಟಿ ರೂ.ಗಳಲ್ಲಿ )
ರಾಜ್ಯ ಬಿಡುಗಡೆ ಮೊತ್ತ ಉಳಿಕೆ