Advertisement

Saudi Arabia; ಭೂಮಿ ನೀಡಲು ಒಪ್ಪದಿದ್ದರೆ ಹತ್ಯೆ: ಬಿಬಿಸಿ ವರದಿ

01:18 AM May 10, 2024 | Team Udayavani |

ರಿಯಾದ್‌: ಸೌದಿ ಅರೇಬಿಯಾದ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ರ ಕನಸಿನ ನಗರ “ನಿಯೋಮ್‌’ ಯೋಜನೆಗೆ ಭೂಮಿ ನೀಡಲು ನಿರಾಕರಿಸಿದವರನ್ನು ಕೊಲ್ಲಲು ಆದೇಶಿಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಈಗಾಗಲೇ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದ ವ್ಯಕ್ತಿಯನ್ನು ಗುಂಡಿ ಕ್ಕಿ ಹತ್ಯೆಗೈಯ್ಯಲಾಗಿದೆ ಎಂದೂ ಸೌದಿಯ ಗುಪ್ತಚರ ಇಲಾಖೆ ಯ ನಿವೃತ್ತ ಅಧಿಕಾರಿ ಕ.ರಬಿನ್‌ ಅಲೆನಿ ಹೇಳಿದ್ದಾರೆ ಎನ್ನಲಾ ಗಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಸೌದಿ ಸರಕಾರ ನಿರಾಕರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next