Advertisement
ಕುದುರೆ ಗಾಡಿಮೈಸೂರಿಗೆ ಭೇಟಿ ಕೊಟ್ಟವರು ಅಲ್ಲಿನ ರಸ್ತೆಗಳಲ್ಲಿ ಕುದುರೆ ಗಾಡಿಗಳಲ್ಲಿ ಪ್ರಯಾಣಿಕರು, ಪ್ರವಾಸಿಗರು ಸಂಚರಿಸುವುದನ್ನು ನೋಡಿರುತ್ತೀರಾ. ಅಲ್ಲಿ ಟ್ರಾಫಿಕ್ನಲ್ಲಿ ಹೊಗೆಯುಗುಳುವ ವಾಹನಗಳ ಮಧ್ಯೆ ಕುದುರೆ ಗಾಡಿ ಠಾಕು ಠೀಕಾಗಿ ಹೋಗುತ್ತದೆ. ಆದರೆ ಮೆಕಿನ್ಯಾಕ್ನಲ್ಲಿ ರಸ್ತೆಗಳ ಮೇಲೆ ಕುದುರೆ ಗಾಡಿಗಳು ಯಾವುದೇ ಹಾಹಾರ್ನ್ ಗ ಳ ಕಿರಿಕಿರಿಯಿಲ್ಲದೆ ರಾಜಾರೋಷವಾಗಿ ಪ್ರಯಾಣಿಸುವುದನ್ನು ಕಾಣಬಹುದು. ಸೈಕಲ್ ಬಿಟ್ಟರೆ ಅಲ್ಲಿನ ಪ್ರಮುಖ ಸಾರಿಗೆ ವ್ಯವಸ್ಥೆ ಎಂದರೆ ಕುದುರೆ ಗಾಡಿಗಳೇ.
ಕೆಲ ವರ್ಷಗಳ ಹಿಂದೆ ಅಮೆರಿಕದ ಉಪಾಧ್ಯಕ್ಷರು ನಗರಕ್ಕೆ ಭೇಟಿ ನೀಡಿದ್ದರು. ಅಮೆರಿಕದ ರಾಜಕಾರಣಿಗಳಿಗೆ, ಮಂತ್ರಿಗಳಿಗೆ ನೀಡುವ ಭದ್ರತಾ ವ್ಯವಸ್ಥೆ ತುಂಬಾ ಕಟ್ಟುನಿಟ್ಟಾಗಿರುತ್ತದೆ. ಹೀಗಾಗಿ ಉಪಾಧ್ಯಕ್ಷರು ಸ್ಥಳೀಯ ನಿಯಮವನ್ನು ಪಾಲಿಸುವರೇ ಇಲ್ಲವೇ ಎಂಬುದರ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಭದ್ರತಾ ಕಾರಣಗಳಿಂದಾಗಿ ಅವರು ಸೈಕಲ್ ಅಥವಾ ಕುದುರೆಗಾಡಿಗಳನ್ನು ಬಳಸಲಿಲ್ಲ. ಅವರು ಎಂದಿನಂತೆ ಬುಲೆಟ್ ಪ್ರೂಫ್ ಕಾರಿನಲ್ಲಿಯೇ ಪ್ರಯಾಣಿಸಿದರು. ಆ ಸಮಯದಲ್ಲಿ ಎಲ್ಲೆಡೆ ವಾದ ಪ್ರತಿವಾದಗಳು ಕೇಳಿ ಬಂದಿದ್ದವು. ಅದೇನೇ ಇರಲಿ. ಈ ರಸ್ತೆಗಳಲ್ಲಿ ಇನ್ನೊಂದು ಬಾರಿ ವಾಹನ ಚಲಾಯಿಸಲು ಅನುಮತಿ ನೀಡಲಾಗಿತ್ತು. ಸೂಪರ್ ಮ್ಯಾನ್ ಸಿನಿಮಾ ಖ್ಯಾತಿಯ ಕ್ರಿಸ್ಟೋಫರ್ ರೀವ್ ಅಭಿನಯದ ಸಿನಿಮಾ ಶೂಟಿಂಗಿಗೆಂದು ಅನುಮತಿ ನೀಡಲಾಗಿತ್ತು. ಅದು ಬಿಟ್ಟರೆ ಯಾರಿಗೂ ವಾಹನ ಚಲಾಯಿಸಲು ಅನುಮತಿ ನೀಡಿಲ್ಲ. ಚಳಿಗಾಲದಲ್ಲಿ ಹೊಸ ವಾಹನ
ಅಮೆರಿಕದಲ್ಲಿ ಚಳಿ ಎಂದರೆ ನಮ್ಮ ಊರುಗಳಂತಲ್ಲ. ಮನೆಗಳೇ ಮುಚ್ಚಿಹೋಗುವಷ್ಟು ಹಿಮಸುರಿಯುತ್ತದೆ. ಆ ವಾತಾವರಣದಲ್ಲಿ ಕುದುರೆಗಾಡಿ, ಸೈಕಲ್ ಯಾವುವೂ ಉಪಯೋಗಕ್ಕೆ ಬಾರದು. ಹೀಗಾಗಿ ಚಳಿಗಾಲದಲ್ಲಿ ಮಾತ್ರ ಅಲ್ಲಿನ ಆಡಳಿತ ಹೊಸದೊಂದು ವಾಹನಕ್ಕೆ ಅನುಮತಿ ನೀಡುತ್ತದೆ. ಅದರ ಹೆಸರು ಸ್ನೋ ಮೊಬಿಲ…’. ಅದು ಹಿಮದ ಮೇಲೆ ಜಾರುವ ಇಂಧನ ಆಧಾರಿತ ಪುಟ್ಟ ವಾಹನ. ಅದರಲ್ಲಿ ಒಬ್ಬರು ಆರಾಮಾಗಿ ಕುಳಿತುಕೊಳ್ಳಬಹುದು. ಅದನ್ನು ಬೈಕಿನಂತೆ ಚಲಾಯಿಸಲಾಗುತ್ತದೆ.