Advertisement

ಹೊಸ ಕಟ್ಟಡದಲ್ಲಿ ಶೌಚಾಲಯವೇ ಇಲ್ಲ

11:11 AM Jan 24, 2019 | Team Udayavani |

ದೋಟಿಹಾಳ: ಸಮೀಪ ಶಿರಗುಂಪಿ ಗ್ರಾಮದಲ್ಲಿ ಸುಮಾರ ಒಂದು ಕೋಟಿ ರೂ. ಖರ್ಚು ಮಾಡಿ ಸುಂದರವಾದ ಶಾಲೆಯ ಕಟ್ಟಡವನ್ನು ಕಟ್ಟಿದಾರೆ. ಆದರೆ ಸರಿಯಾದ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡದೆ ಶಾಲಾ ಕಟ್ಟಡವನ್ನು ಉದ್ಘಾಟನೆ ಮಾಡಿದರ ಪರಿಣಾಮ ವಿದ್ಯಾರ್ಥಿಗಳು ನಿತ್ಯ ತೊಂದರೆ ಅನುಭವಿಸುತ್ತಿದಾರೆ.

Advertisement

ಗ್ರಾಮೀಣ ಮಕ್ಕಳು ಶಿಕ್ಷಣಕ್ಕಾಗಿ ಕೇಂದ್ರ ಸರಕಾರದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ(ಆರ್‌ಎಂಎಸ್‌ಎ)ಯೋಜನೆ ಅಡಿಯಲ್ಲಿ ಜಂಪನಾ ಕಾನ್ಸಟ್ರಕ್ಷನ್‌ ಪ್ರೈವೆಟ್ ಲಿಮಿಟೆಡ್‌ ಬೆಂಗಳೂರು ಮತ್ತು ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ 10 ಕೊಠಡಿಗಳನ್ನು ನಿರ್ಮಿಸಲಾಗಿದೆ. ಈ ನೂತನ ಶಾಲಾ ಕಟ್ಟಡವನ್ನು ಇತ್ತೀಚೆಗೆ ಉದ್ಘಾಟನೆ ಮಾಡಲಾಗಿದೆ. ಅದರೆ ಇಲ್ಲಿಯ ಶಾಲಾ ಮಕ್ಕಳು ಮೂಲ ಸೌಕರ್ಯಗಳ ಕೊರತೆಯಿಂದ ಹಲವು ಸಮಸ್ಯೆ ಅನುಭವಿಸುತ್ತಿದ್ದಾರೆ.

ಈ ಶಾಲಾ ಕಟ್ಟಡಕ್ಕೆ ಕೋಟಿಗಟ್ಟಲೇ ಹಣ ಖರ್ಚು ಮಾಡಿದ್ದಾರೆ. ಆದರೆ ಶಾಲಾ ಮಕ್ಕಳಿಗೆ ಶೌಚಾಲಯವನ್ನು ನಿರ್ಮಿಸಿಲ್ಲ. ಇದರಿಂದ ಶಾಲಾ ಬಾಲಕಿಯರ ಪರಿಸ್ಥಿತಿ ಹೇಳತೀರದು. ಬಾಲಕರು ಶೌಚಕ್ಕಾಗಿ ದೂರದ ಬಯಲು ಪ್ರದೇಶವನ್ನೇ ಅವಲಂಬಿಸಿದ್ದಾರೆ.

ಅಡುಗೆ ಕೊಠಡಿ ಕೊರತೆ: ಈ ಸರ್ಕಾರಿ ಪ್ರೌಢಶಾಲೆಯಲ್ಲಿ 202 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಿಗೆ ನಿತ್ಯ ಬಿಸಿಯೂಟ ತಯಾರಿಸಲು ಸೂಕ್ತ ಅಡುಗೆ ಕೊಠಡಿ ಇಲ್ಲದಿರುವುದರಿಂದ ಶಾಲೆಯ ಕೊಠಡಿಯಲ್ಲಿ ನಿತ್ಯ ಅಡುಗೆ ಮಾಡಲಾಗುತ್ತಿದೆ. ನೂತನ ಕಟ್ಟಡ ನಿರ್ಮಾಣದ ವೇಳೆ ಬಿಸಿಯೂಟದ ಅಡುಗೆ ಕೊಠಡಿಯನ್ನೂ ಕಟ್ಟಿಲ್ಲ. ಹೀಗಾಗಿ ಶಾಲಾ ಮಕ್ಕಳಿಗೆ ಪ್ರತಿನಿತ್ಯ ಬಿಸಿಯೂಟ ಮಾಡಲು ತೊಂದರೆಯಾಗುತ್ತಿರುವುದರಿಂದ ಶಾಲೆಯ ಒಂದು ಕೊಠಡಿಯಲ್ಲಿ ಅಡುಗೆ ಮಾಡಲಾಗುತ್ತಿದೆ.

ಶೌಚಾಲಯ ಕೊರತೆ: ಸರಕಾರ ಈ ಶಾಲೆಯ ಕಟ್ಟಡಕ್ಕೆ ಕೋಟಿಗಟ್ಟಲೇ ಹಣ ಖರ್ಚು ಮಾಡಿದೆ. ಆದರೆ ಒಂದೇ ಒಂದು ಶೌಚಾಲಯ ನಿರ್ಮಿಸಿಲ್ಲ. ಬಾಲಕಿಯರಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡ ಶಿಕ್ಷಕರು ತಮ್ಮಗೆ ನಿರ್ಮಿಸಿದ ಶೌಚಾಲಯದ ಒಂದು ಭಾಗವನ್ನು ವಿದ್ಯಾರ್ಥಿನಿಯರ ಬಳಕೆಗೆ ನೀಡಿದ್ದಾರೆ.

Advertisement

ಶಾಲಾ ಅಡುಗೆ ಕೊಠಡಿ ಹಾಗೂ ಶೌಚಾಲಯ ನಿರ್ಮಾಣದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸದ್ಯ ಶಿಕ್ಷಕರಿಗಾಗಿ ನಿರ್ಮಿಸಿದ ಶೌಚಾಲಯವನ್ನು ವಿದ್ಯಾರ್ಥಿನಿಯರ ಬಳಕೆಗೆ ನೀಡಲಾಗಿದೆ. ಶಾಲಾ ಕಾಂಪೌಂಡ್‌ ಅರ್ಧ ಭಾಗ ಮಾತ್ರ ಮುಗಿದಿದೆ. ಮುಖ್ಯದ್ವಾರಕ್ಕೆ ಒಂದು ಗೆಟ್ ವ್ಯವಸ್ಥೆಯ ಕೊರತೆ ಸೇರಿದ್ದಂತೆ ಸಣ್ಣಪುಟ ಸಮಸ್ಯೆಗಳಿವೆ ಎಂದು ಶಾಲಾ ಮುಖ್ಯೋಪಾಧ್ಯಾಯ ಮಹಾಂತಯ್ಯ ಸೊಪ್ಪಿಮಠ ತಿಳಿಸಿದರು.

ಶಿರಗುಂಪಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಬೇರೊಂದು ಬಿಸಿಯೂಟದ ಕೊಠಡಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾತಿಯಾದ ಕೂಡಲೇ ಕೊಠಡಿ ನಿರ್ಮಾಣಕ್ಕೆ ಮಾಡಿಕೊಡುತ್ತೇವೆ ಎಂದು ತಾಲೂಕು ಅಕ್ಷರ ದಾಸೋಹ ಅಧಿಕಾರಿ ಕೆ. ಶರಣಪ್ಪ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next