Advertisement

ಹಿರಿಯರಿಗೆ ಟಿಕೆಟ್ ಇಲ್ಲ..; ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್

05:27 PM Feb 26, 2023 | Team Udayavani |

ಕೊಪ್ಪಳ: ”ಗುಜರಾತ್ ಮಾದರಿ ಹಿರಿಯರಿಗೆ ಟಿಕೆಟ್ ಇಲ್ಲ ಎನ್ನುವ ವಿಚಾರ ಬರಿ ಮಾಧ್ಯಮದಲ್ಲಿ ಮಾತ್ರ ಚರ್ಚೆ ನಡೆದಿದೆ. ಈ ಬಾರಿಯೂ ನಾನು ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವೆ” ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಭಾನುವಾರ ಹೇಳಿಕೆ ನೀಡಿದ್ದಾರೆ.

Advertisement

ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಮಾಜಿ ಶಾಸಕ ಶಿವಶರಣಪ್ಪಗೌಡರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಬಿಜೆಪಿಯಲ್ಲಿ ಹಿರಿಯರಿಗೆ ಟಿಕೆಟ್ ಇಲ್ಲ ಎನ್ನುವ ವಿಚಾರ ಬರಿ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. ಪಕ್ಷದಲ್ಲಿ ಅಂಥ ಚರ್ಚೆ ನಡೆದಿಲ್ಲ. ನಾನು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವೆ ಎಂದರು.

ಪ್ರಧಾನಿ ನರೇಂದ್ರ ಮೋದಿ, ಅಮಿತಾ ಶಾ ರಾಜ್ಯಕ್ಕೆ ಬರುವುದರಿಂದ ರಾಜ್ಯ ಅಭಿವೃದ್ದಿಯಾಗಲಿದೆ. ಕಾಂಗ್ರೆಸ್ ಗೆ ಟೀಕಿಸುವ ವಿಷಯವಿಲ್ಲದೆ ಈ ರೀತಿ ಟೀಕಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಳಗಾವಿ ಹಾಗು ಶಿವಮೊಗ್ಗಕ್ಕೆ ಬರುತ್ತಿದ್ದಾರೆ. ಎರಡು ಕಡೆ ಅಭಿವೃದ್ದಿ ಕಾರ್ಯ ಹಾಗೂ ರೋಡ್ ಶೋ ಮಾಡಲಿದ್ದಾರೆ.ನರೇಂದ್ರ ಮೋದಿ ವಿಶ್ವ ನಾಯಕರು. ವಿಶ್ವದಲ್ಲಿ ಆರ್ಥಿಕತೆಯಲ್ಲಿ ದೇಶವನ್ನು ಮುನ್ನಡಿಸುತ್ತಿದ್ದಾರೆ. ಮೋದಿ ಬರುವುದರಿಂದ ರಾಜ್ಯದಲ್ಲಿ ಅಭಿವೃದ್ಧಿಯಾಗಲಿದೆ. ಅಭಿವೃದ್ದಿಗಾಗಿ ಅವರು ಮೇಲಿಂದ ಮೇಲೆ ಬಂದರೆ ತಪ್ಪೇನು ಎಂದರು.

ಕಾಂಗ್ರೆಸ್ ಸೋಲಿನ ಹತಾಸೆಯಿಂದ ಮಾತನಾಡುತ್ತಿದ್ದಾರೆ. ಹಿಂದೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಚುನಾವಣೆಗೆ ಬಂದಿಲ್ಲವೇ ? ಮೋದಿ ಬರುವುದರಿಂದ ರಾಜ್ಯ ಬಿಜೆಪಿಗೆ ಒಳ್ಳೆಯದಾಗುತ್ತದೆ. ರಾಜ್ಯದಲ್ಲಿ ಬಿಜೆಪಿ ಮುಖಂಡರು ಸಹ ಸಮರ್ಥರಿದ್ದಾರೆ ಎಂದರು.

ಲಿಂಗಾಯತರು ಬಿಜೆಪಿಯಿಂದ ದೂರವಾಗಿದ್ದಾರೆ ಎಂದು ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು ಪ್ರತಿಪಕ್ಷವಾಗಿ ಹೇಳುತ್ತಾರೆ.‌ ಲಿಂಗಾಯತ ಸಮಾಜ ಬಿಜೆಪಿ ಬೆಂಬಲಿಸಲಿದೆ. ಕಾಂಗ್ರೆಸ್ ಪಕ್ಷ ರಾಜ್ಯ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಅವರಿಗೆ ಮುಖವಿಲ್ಲ. ಅವರಲ್ಲಿ ನಾಯಕತ್ವವಿಲ್ಲ. ಭಾರತೀಯ ಜನತಾ ಪಕ್ಷ ಅಭಿವೃದ್ದಿ ಪರವಾಗಿದೆ ಎಂದರು.

Advertisement

ಅರ್ಕಾವತಿ ಬಡಾವಣೆ ಡಿನೋಟಿಫೈ ನಲ್ಲಿ ಸಿದ್ದರಾಮಯ್ಯನವರಿಗೆ ಕ್ಲೀನ್ ಚಿಟ್ ನೀಡಿಲ್ಲ. ಒಂದು ವೇಳೆ ಕ್ಲೀನ್ ಚಿಟ್ ನೀಡಿದ್ದರೆ ಅಂದೆ ಸದನದಲ್ಲಿ ಮಂಡಿಸುತ್ತಿದ್ದರು. 986 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿದ್ದದ್ದನ್ನು ನಾನು ಅಂದು ಪ್ರತಿಪಕ್ಷವಾಗಿ ಸದನ ಗಮನ ಸೆಳೆದಿದ್ದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next