Advertisement

ಕೆಲವು ಶಾಸಕರಿಗೆ ಸಂಜೆ ಅಲ್ಲಿ ಇಲ್ಲಿ ಕೂತು ಮಾತನಾಡುವ ಅಭ್ಯಾಸ : ಸಚಿವ ಸೋಮಣ್ಣ

04:40 PM Jan 24, 2022 | Team Udayavani |

ಮೈಸೂರು: ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆ ಕೂಗು ಜೋರಾಗಿರುವ ವೇಳೆಯಲ್ಲಿ ಸಚಿವ ಸೋಮಣ್ಣ, ”ಕೆಲವು ಶಾಸಕರಿಗೆ ಸಂಜೆಯಾದರೆ ಅಲ್ಲಿ ಇಲ್ಲಿ ಕೂತು ಮಾತನಾಡುವ ಅಭ್ಯಾಸವಿರುತ್ತದೆ” ಎಂದು ಸ್ವಪಕ್ಷೀಯರ ವಿರುದ್ಧವೇ ಅಸಮಾಧಾನ ತೋರಿದ್ದಾರೆ.

Advertisement

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ”ಬಿಜೆಪಿ ಶಾಸಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಕೆಲವು ಶಾಸಕರಿಗೆ ಸಂಜೆಯಾದರೆ ಅಲ್ಲಿ ಇಲ್ಲಿ ಕೂತು ಮಾತನಾಡುವ  ಅಭ್ಯಾಸವಿರುತ್ತದೆ. ಅದು ಅವರ ವೈಯಕ್ತಿಕ ವಿಚಾರ.ನನಗೆ ಅಂತಹ ಯಾವ ಅಭ್ಯಾಸಗಳು, ಅಂತಾ ಟ್ರೈನಿಂಗ್ ಇಲ್ಲ” ಎಂದರು.

”ಸಚಿವ ಸಂಪುಟ ವಿಸ್ತರಣೆ ಹಾಗೂ ಸಿಎಂ ಬದಲಾವಣೆಯಂತಹ ಯಾವುದೇ ವಿಚಾರ ಇಲ್ಲ.2023ರ ಚುನಾವಣೆ ಸಹ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದೆ.ಈ‌ ಬಗ್ಗೆ ವರಿಷ್ಠರು ಸ್ಪಷ್ಟಪಡಿಸಿದ್ದಾರೆ.ಕೋವಿಡ್ ಜಾಸ್ತಿ ಆಗಿರುವುದರಿಂದ ಅದಕ್ಕೆ ಮೊದಲ ಆದ್ಯತೆ. ಬಸವರಾಜ ಬೊಮ್ಮಾಯಿ ಸುಸಜ್ಜಿತವಾಗಿ ಕೆಲಸ ಮಾಡುತ್ತಿದ್ದಾರೆ. ಸಿಎಂ ಆಗಿ 6 ತಿಂಗಳು ಪೂರೈಸಿದ್ದಾರೆ. ಅವರ ನೇತೃತ್ವದಲ್ಲಿ ಮಾಡಿದ ಕೆಲಸವನ್ನು ಹೇಳುತ್ತೇವೆ.
ಸಚಿವ ಸಂಪುಟ ವಿಚಾರ ಏನು ಆಗುತ್ತೇ ಅನ್ನೋದಕ್ಕಿಂತ ಕೊರೊನಾ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ” ಎಂದರು.

”ದೇವರಾಣೆ, ನಮ್ಮ ಅಪ್ಪನಾಣೆ ಮೇಕೆದಾಟು ಯೋಜನೆ ಮಾಡುವುದು ನಾವೇ . ಇದರಲ್ಲಿ ಯಾವುದೇ ಅನುಮಾನಗಳು ಬೇಡ” ಎಂದರು.

”ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸುಭದ್ರ ಸರ್ಕಾರಗಳಿವೆ. ರಾಜ್ಯ ಸರ್ಕಾರದಲ್ಲಿ ಯಾವ ಅಭದ್ರತೆಯೂ ಇಲ್ಲ‌.ಎಲ್ಲವೂ ಸುಸೂತ್ರವಾಗಿ ಸಾಗುತ್ತಿವೆ. ಅದರ ಬಗ್ಗೆ ಯಾರಿಗೂ ಯೋಚನೆ ಬೇಡ. ಕೆಲವು ಶಾಸಕರು ವೈಯಕ್ತಿಕವಾಗಿ ಕೂತು ಮಾತ್ನಾಡುವುದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸಬೇಡಿ” ಎಂದರು.

Advertisement

ರಾಜ್ಯದಲ್ಲಿ ವಸತಿ ಇಲಾಖೆಯಿಂದ ಮನೆ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿ ”ಇದು ಸಿದ್ದರಾಮಯ್ಯ ಅವರ ಕಾಲದಲ್ಲಿ ಆಗಿದ್ದ ಎಡವಟ್ಟು. ಅವರು ಮಾಡಿದ ತಪ್ಪು ಸರಿಪಡಿಸಿದ್ದೇವೆ. ಸುಮ್ಮನೆ ಒಂದು ಮನೆ ಕೊಟ್ಟಿಲ್ಲ ಅಂತಾ ವಿರೋಧ ಪಕ್ಷದವರು ಹೇಳುತ್ತಾರೆ. ಆದರೆ ಮನೆ ಕೊಡಲು ನೀವು ಬಿಟ್ಟಿಲ್ಲ. ನಾನಾಗಿರುವುದಕ್ಕೆ ಅಡೆ ತಡೆ ಬಗೆಹರಿಸಿದ್ದೇನೆ. ಕೇಂದ್ರದ ಆ್ಯಪ್‌ನಲ್ಲಿ ಎಂಟ್ರಿ ಮಾಡಬೇಕಿತ್ತು ಆದರೆ ರಾಜ್ಯ ಸರ್ಕಾರ ತಮ್ಮದೇ ಆ್ಯಪ್ ಮಾಡಿ ಫೀಡ್ ಮಾಡಿದ್ದರು.ಮಾತು ಮನೆ ಕೆಡಿಸಿತು ಅನ್ನೋ ಮಾತಿನಂತೆ ಸಿದ್ದರಾಮಯ್ಯ ಮಾತನಾಡುತ್ತಾರೆ ಅಷ್ಟೇ.ಅವರಿಗೆ ಸಮರ್ಪಕವಾದ ಮಾಹಿತಿ ಇಲ್ಲ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next