Advertisement
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ”ಬಿಜೆಪಿ ಶಾಸಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಕೆಲವು ಶಾಸಕರಿಗೆ ಸಂಜೆಯಾದರೆ ಅಲ್ಲಿ ಇಲ್ಲಿ ಕೂತು ಮಾತನಾಡುವ ಅಭ್ಯಾಸವಿರುತ್ತದೆ. ಅದು ಅವರ ವೈಯಕ್ತಿಕ ವಿಚಾರ.ನನಗೆ ಅಂತಹ ಯಾವ ಅಭ್ಯಾಸಗಳು, ಅಂತಾ ಟ್ರೈನಿಂಗ್ ಇಲ್ಲ” ಎಂದರು.
ಸಚಿವ ಸಂಪುಟ ವಿಚಾರ ಏನು ಆಗುತ್ತೇ ಅನ್ನೋದಕ್ಕಿಂತ ಕೊರೊನಾ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ” ಎಂದರು. ”ದೇವರಾಣೆ, ನಮ್ಮ ಅಪ್ಪನಾಣೆ ಮೇಕೆದಾಟು ಯೋಜನೆ ಮಾಡುವುದು ನಾವೇ . ಇದರಲ್ಲಿ ಯಾವುದೇ ಅನುಮಾನಗಳು ಬೇಡ” ಎಂದರು.
Related Articles
Advertisement
ರಾಜ್ಯದಲ್ಲಿ ವಸತಿ ಇಲಾಖೆಯಿಂದ ಮನೆ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿ ”ಇದು ಸಿದ್ದರಾಮಯ್ಯ ಅವರ ಕಾಲದಲ್ಲಿ ಆಗಿದ್ದ ಎಡವಟ್ಟು. ಅವರು ಮಾಡಿದ ತಪ್ಪು ಸರಿಪಡಿಸಿದ್ದೇವೆ. ಸುಮ್ಮನೆ ಒಂದು ಮನೆ ಕೊಟ್ಟಿಲ್ಲ ಅಂತಾ ವಿರೋಧ ಪಕ್ಷದವರು ಹೇಳುತ್ತಾರೆ. ಆದರೆ ಮನೆ ಕೊಡಲು ನೀವು ಬಿಟ್ಟಿಲ್ಲ. ನಾನಾಗಿರುವುದಕ್ಕೆ ಅಡೆ ತಡೆ ಬಗೆಹರಿಸಿದ್ದೇನೆ. ಕೇಂದ್ರದ ಆ್ಯಪ್‌ನಲ್ಲಿ ಎಂಟ್ರಿ ಮಾಡಬೇಕಿತ್ತು ಆದರೆ ರಾಜ್ಯ ಸರ್ಕಾರ ತಮ್ಮದೇ ಆ್ಯಪ್ ಮಾಡಿ ಫೀಡ್ ಮಾಡಿದ್ದರು.ಮಾತು ಮನೆ ಕೆಡಿಸಿತು ಅನ್ನೋ ಮಾತಿನಂತೆ ಸಿದ್ದರಾಮಯ್ಯ ಮಾತನಾಡುತ್ತಾರೆ ಅಷ್ಟೇ.ಅವರಿಗೆ ಸಮರ್ಪಕವಾದ ಮಾಹಿತಿ ಇಲ್ಲ” ಎಂದರು.