Advertisement
ಸ್ವಧರ್ಮದ ನಿಷ್ಠೆಯೊಂದಿಗೆ ಪರಧರ್ಮ ಸಹಿಷ್ಣುತೆ ಇದ್ದರೆ ಬದುಕಿದಲ್ಲಿ-ಸಮಾಜದಲ್ಲಿ ಶಾಂತಿ, ಸಾಮರಸ್ಯ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ ಪಂಚಪೀಠಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ಆಧುನಿಕ ಜಗತ್ತಿನಲ್ಲಿ ಹಳೆಯದನ್ನು ಮರೆತು ಹೊಸ ಜೀವನದತ್ತ ಹೆಜ್ಜೆ ಹಾಕುತ್ತಿದ್ದೇವೆ. ಹಳೆಯದನ್ನು ಮರೆತರೆ ಹೊಸತನಕ್ಕೆ ಬೆಲೆಯಿಲ್ಲ.
Related Articles
Advertisement
ರೇಣುಕಾಚಾರ್ಯರ “ಮಾನವ ಧರ್ಮಕ್ಕೆ ಜಯವಾಗಲಿ’ ಎನ್ನುವ ಮಾತು ಎಲ್ಲಾ ಧರ್ಮದ ಶಾಂತಿ ಸೇತುವೆಗೆ ದಾರಿಯಾಗಿದೆ. ವೀರಶೈವ ಧರ್ಮದ ಪರಂಪರೆ ಇಂದು ಹುಟ್ಟಿ, ನಾಳೆ ಕಣ್ಮರೆಯಾಗುವಂತಹ ಇತಿಹಾಸವಲ್ಲ. ಅನಾದಿಕಾಲದ ಭವ್ಯ ಪರಂಪರೆ ಹೊಂದಿದೆ. ವಿಜ್ಞಾನ ಯುಗದಲ್ಲಿಯೂ ವೀರಭದ್ರೇಶ್ವರ ಮೂರ್ತಿ ಪ್ರತಿಷ್ಠಾಪಿಸಿ ಭಕ್ತಿ ಮರೆಯುತ್ತಿರುವುದು ಶ್ಲಾಘನೀಯ ಎಂದರು.
ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ ಮಾತನಾಡಿ, ರಂಭಾಪುರಿ ಪೀಠಕ್ಕೆ ರಂಭಾಫಲವಾಗಿ ಬಂದು, ಪಂಚಪೀಠಗಳ ಗಣನಾಯಕರಾಗಿ ಡಾಕ್ಟರೆಟ್ ಪದವಿಗೆ ಭಾಜನರಾಗಿ ಪಂಚಪೀಠ ಪರಂಪರೆಯಲ್ಲಿ ಮತ್ತೆ ಅವತರಿಸಿ ಬಂದ ಜಗದ್ಗುರು ರೇಣುಕಾರೇ ತಾವೆಂದು ಸಾಬೀತುಪಡಿಸಿದ್ದೀರಿ. ಸಾಧನೆ ಕೆಲವರಿಗೆ ವೇದನೆಯಾದರೆ ಸಾಧನೆಗೇನೆ ವೇದನೆ ತಂದ ಸಾಧಕ ಜಗದ್ಗುರುಗಳು ತಾವು ಎಂದು ರಂಭಾಪುರಿ ಶ್ರೀಗಳ ಸಾಧನೆ ಸ್ಮರಿಸಿದರು.
ರೂಪಸಿಂಗ್‌ಲಾಡ್ ಮಾತನಾಡಿ, ಜಾತಿ, ಕುಲ ಮನುಷ್ಯರನ್ನು ದೂರ ಮಾಡಿದರೆ ಧರ್ಮ ಕೂಡಿಸುತ್ತದೆ. ಧರ್ಮ, ಪಂಪರೆ, ಸಂಸ್ಕೃತಿ ಉಳಿದಿರುವುದು ಮಠಾಧೀಶರು, ಸಂತರಿಂದ ಮಾತ್ರ. ಡಚ್ಚರು, ಬ್ರಿಟಿಷರು, ಮೊಗಲರು ಸೇರಿದಂತೆ ಅನೇಕರ ಅಕ್ರಮಣದ ನಡುವೆಯೂ ಹಿಂದೂ ಧರ್ಮ ಉಳಿದಿದೆ ಎಂದರು. ಮಾನಿಹಳ್ಳಿ ಮಠದ ಮಳೆಯೋಗಿ ಸ್ವಾಮೀಜಿ, ಕೊಟ್ಟೂರು ಯೋಗಿರಾಜೇಂದ್ರ ಸ್ವಾಮೀಜಿ, ಜಿಪಂ ಸದಸ್ಯ ಉತ್ತಂಗಿ ಡಾ| ಮಂಜುನಾಥ್ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಕೆ.ಎನ್. ರವಿಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಮುಖಂಡ ಎಸ್. ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ರಾಮಘಟ್ಟ ರೇವಣಸಿದ್ದೇಶ್ವರ ಸ್ವಾಮೀಜಿ, ವಿಭೂತಿಪುರ ಮಠದ ಮಹಾಂತಲಿಂಗ ಸ್ವಾಮೀಜಿ, ತಾಪಂ ಸದಸ್ಯ ಎಸ್. ಬಸವನಗೌಡ, ಬಿಜೆಪಿ ಮುಖಂಡ ಎನ್. ಕೊಟ್ರೇಶ್, ಕೆ. ರಾಜೇಶ್ವರಿ, ಟಿ.ಎಂ. ಚಂದ್ರಶೇಖರಯ್ಯ, ಎಂ.ಎಂ. ನೀಲಪ್ಪ, ಕೆ. ದ್ಯಾಮನಗೌಡ, ಸಾಬಳ್ಳಿ ಜಂಬಣ್ಣ ಮತ್ತಿತರರು ಉಪಸ್ಥಿತರಿದ್ದರು.