Advertisement

ರೇವಣ್ಣ ಮಾತಿಗೆ ಮಹತ್ವಇಲ್ಲ: ಬಸವರಾಜ ಹೊರಟ್ಟಿ

12:55 AM Feb 03, 2019 | |

ಧಾರವಾಡ: ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ದೋಸ್ತಿ ಮುಂದುವರಿಯಲಿದೆ. ಎಚ್‌.ಡಿ.ರೇವಣ್ಣ ಅವರ ತ್ರಿಕೋನ ಸ್ಪರ್ಧೆ ಹೇಳಿಕೆಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಊರು ಸುಟ್ಟರೂ ಹನುಮಂತಪ್ಪ ಹೊರಗೆ ಅನ್ನುವಂತೆ ಅವರ ಮಾತಿಗೆ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಜೆಡಿಎಸ್‌ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಬಜೆಟ್‌ ಮಂಡನೆ ಬಳಿಕ ಸಮನ್ವಯ ಸಮಿತಿ ಸಭೆ ನಡೆಯಲಿದೆ.ಬಳಿಕ, ಲೋಕಸಭಾ ಚುನಾವಣೆ ಬಗ್ಗೆ ನಿಖರ ಹಾಗೂ ಸ್ಪಷ್ಟವಾದ ಚಿತ್ರಣ ದೊರೆಯಲಿದೆ. ತ್ರಿಕೋನ ಸ್ಪರ್ಧೆ ಎಂಬುದು ಇಲ್ಲ. ಎರಡೂ ಪಕ್ಷಗಳಿಂದ ಓರ್ವ ಅಭ್ಯರ್ಥಿಯೇ ಕಣಕ್ಕೆ ಇಳಿಯುತ್ತಾರೆ. ಇದರಲ್ಲಿ ಎರಡು ಮಾತಿಲ್ಲ ಎಂದರು. ಸಮ್ಮಿಶ್ರ ಸರ್ಕಾರದಿಂದ ಸಿಎಂ ಇರುವಾಗ ಮಾಜಿ ಸಿಎಂ ಅವರನ್ನೇ ಸಿಎಂ ಅನ್ನೋದು ಸರಿಯಲ್ಲ. ಈ ಬಗ್ಗೆ ಸಿದ್ದರಾಮಯ್ಯ ಅವರಿಗೂ ಭಾವನೆಗಳಿಲ್ಲ. ಆದರೆ, ಅವರ ಹಿಂಬಾಲಕರಿಂದ ಇಂತಹ ಕೆಲಸವಾಗುತ್ತಿವೆ ಅಷ್ಟೆ. ಇದು ಸರಿಯಾಗಬೇಕು ಎಂದರು.

ಸಿಎಂ ಆಗೋದು ಸತೀಶ ಜಾರಕಿಹೊಳಿ ಅವರು ತಿಳಿದುಕೊಂಡಷ್ಟು ಸುಲಭದ ಮಾತಲ್ಲ. ಸಿಎಂ ಸ್ಥಾನ ಲಭಿಸುವುದು ಕಷ್ಟಕರ. ಅದಕ್ಕಾಗಿ ತುಂಬಾನೇ ಕಷ್ಟ ಅನುಭವಿಸಬೇಕು. ಸತೀಶ ಅವರ ಬಗ್ಗೆ ಗೌರವ ಇದ್ದು, ಅವರು ಒಳ್ಳೆಯ ಮನುಷ್ಯ ಕೂಡ. ಈಗಂತೂ ಸಿಎಂ ಆಗಲು ಸಾಧ್ಯವಿಲ್ಲ. ಮುಂದೆ ಬೇಕಾದರೆ ಸಿಎಂ ಆಗಲು ಪ್ರಯತ್ನ ಮಾಡಲಿ.
 ● ಬಸವರಾಜ ಹೊರಟ್ಟಿ,
ಜೆಡಿಎಸ್‌ ಹಿರಿಯ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next