Advertisement
ಉಡುಪಿ ಜಿಲ್ಲೆಯಲ್ಲಿ ಸುಮಾರು 250ರಷ್ಟು ಅಪಾರ್ಟ್‌ಮೆಂಟ್‌ಗಳಿದ್ದು, ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳ ಮಂದಿ ಇಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಭದ್ರತೆ ಇರುತ್ತದೆ ಎನ್ನುವ ಕಾರಣಕ್ಕೆ ಹೆಚ್ಚಿನವರು ಇದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವವಾಗಿ ನಡೆಯುತ್ತಿರುವುದೇ ಬೇರೆಯಾಗಿದೆ.
Related Articles
Advertisement
ಇನ್ನು ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಸೊಸೈಟಿಗಳಿದ್ದರೂ ಹಣ ಉಳಿಸುವ ಉದ್ದೇಶದಿಂದ ಸೆಕ್ಯೂರಿಟಿ ಗಾರ್ಡ್ ನೇಮಕ ಮಾಡುತ್ತಿಲ್ಲ. ಇಂತಹ ಅಪಾರ್ಟ್‌ಮೆಂಟ್‌ಗಳಲ್ಲಿ ನಿರ್ವಹಣೆ ಶುಲ್ಕ ಕಡಿಮೆ ಇದ್ದರೂ ಭದ್ರತೆ ಮರೀಚಿಕೆಯಾಗಿರುತ್ತದೆ.
ದಾಖಲು ಮಾಡಿದರೆ ನೇರ ಪ್ರವೇಶ:
ಅಪಾರ್ಟ್‌ಮೆಂಟ್‌ನೊಳಗೆ ಅನ್ಯ ವ್ಯಕ್ತಿಗಳು, ಸೇಲ್ಸ್‌ಮ್ಯಾನ್‌ಗಳ ಸಹಿತ ಇತರರು ಆಗಮಿಸುವಾಗ ನೋಂದಣಿ ಪುಸ್ತಕದಲ್ಲಿ ದಾಖಲಿಸಿದರೆ ಒಳಪ್ರವೇಶಿಸಲು ಅವಕಾಶ ಕಲ್ಪಿಸುವ ಘಟನೆಗಳೂ ನಡೆಯುತ್ತಿವೆ. ಎಲ್ಲ ಭಾಗಗಳಲ್ಲಿ ಸಿಸಿಟಿವಿ ಇಲ್ಲದ ಕಾರಣ ಅನಂತರ ಅವರು ಯಾವ ಕಡೆಗೆ ತೆರಳುತ್ತಾರೆ ಎಂಬ ಮಾಹಿತಿಯೂ ಇರುವುದಿಲ್ಲ. ಕೆಲವೊಂದು ಘಟನೆಗಳು ನಡೆದಾಗಲಷ್ಟೇ ಈ ಬಗ್ಗೆ ತನಿಖೆ ಚುರುಕು ಪಡೆಯುತ್ತವೆ.
ಬೇಕಿದೆ ಸೂಕ್ತ ಕಾನೂನು :
ಅಪಾರ್ಟ್‌ಮೆಂಟ್‌ಗಳಲ್ಲಿ ಹೆಚ್ಚಿನ ಮಂದಿ ನೆಲೆಸಲು ಆಸಕ್ತಿ ವಹಿಸುತ್ತಿರುವುದರಿಂದ ಅದರ ಭದ್ರತೆಗೂ ಸೂಕ್ತ ಒತ್ತು ನೀಡುವ ಅಗತ್ಯವಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಕನಿಷ್ಠ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳು, ಸಿಸಿ ಕೆಮರಾ, ಸೊಸೈಟಿ, ತುರ್ತುಸೇವಾ ವ್ಯವಸ್ಥೆಗಳ ಅವಕಾಶಗಳನ್ನು ಕಡ್ಡಾಯಗೊಳಿಸಿದರಷ್ಟೇ ಮತ್ತೂ ಹೆಚ್ಚಿನ ಮಂದಿ ಅಪಾರ್ಟ್‌ಮೆಂಟ್‌ಗಳತ್ತ ಆಗಮಿಸಲು ಸಾಧ್ಯವಿದೆ.
ಜಿಲ್ಲೆಯ ಬಹುತೇಕ ಎಲ್ಲ ಅಪಾರ್ಟ್‌ಮೆಂಟ್‌ಗಳಲ್ಲಿಯೂ ಸಿಸಿಟಿವಿ ಕೆಮರಾ ಹಾಗೂ ಸೆಕ್ಯೂರಿಟಿ ಗಾರ್ಡ್‌ಗಳು ಇರುತ್ತಾರೆ. ಸೊಸೈಟಿ ಮೂಲಕ ಇದು ಕಾರ್ಯನಿರ್ವಹಿಸುತ್ತವೆ. ಈ ಬಗ್ಗೆ ಯಾವುದೇ ಕಡ್ಡಾಯ ನಿಯಮಗಳಿಲ್ಲದ ಕಾರಣ ಕೆಲವೊಂದು ಅಪಾರ್ಟ್ ಮೆಂಟ್‌ಗಳು ಭದ್ರತಾ ನಿಯಮಗಳನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ರಾಜ್ಯಮಟ್ಟದಲ್ಲಿ ವಿಶೇಷ ನಿಯಮಾವಳಿ ಬಂದರೆ ಸೂಕ್ತ. -ಮನೋಹರ ಶೆಟ್ಟಿ,, ಮಾಲಕರು, ಜಿಲ್ಲಾ ಬಿಲ್ಡರ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ, ಉಡುಪಿ