Advertisement

ರಸ್ತೆ ಸುರಕ್ಷಾ ಮಸೂದೆಯಲ್ಲಿ ಚಾಲಕರಿಗೆ ಸುರಕ್ಷೆ  ಇಲ್ಲ: ವರಲಕ್ಷ್ಮೀ

07:30 AM Aug 07, 2017 | Team Udayavani |

ಕುಂದಾಪುರ:  ಕೇಂದ್ರ ಸರಕಾರವು ತಂದಿರುವ ರಸ್ತೆ ಸುರಕ್ಷತಾ ಮಸೂದೆಯಲ್ಲಿ ಸುರಕ್ಷತೆಗಿಂತ ಚಾಲಕರನ್ನು ಶಿಕ್ಷಿಸುವ ಕಾಯಿದೆಗಳು ಅಡಕವಾಗಿವೆ.  ಸ್ವಂತ ಹಣದಿಂದ ಆಟೋ ತೆಗೆದುಕೊಂಡು ಸ್ವಂತ ಉದ್ಯೋಗ ಮಾಡುವ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಆಟೋ ಚಾಲಕರಿಗೆ ಸರಕಾರದಿಂದ ಯಾವುದೇ ಸೌಲಭ್ಯವನ್ನು ನೀಡದೆ ಇಂದು ಬೇರೆ ಬೇರೆ ತೆರಿಗೆಗಳನ್ನು ವಿ ಧಿಸಿ ಅವರ ಬದುಕಿನಲ್ಲಿ ಅತಂತ್ರ ಪರಿಸ್ಥಿತಿಯನ್ನು ತಂದಿಟ್ಟಿದೆ ಎಂದು  ಸಿಐಟಿಯುನ ರಾಜ್ಯ ಸಮಿತಿ ಅಧ್ಯಕ್ಷೆ  ಎಸ್‌. ವರಲಕ್ಷ್ಮೀ  ಹೇಳಿದರು.

Advertisement

ಅವರು  ಜು.23ರಂದು  ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ   ನಡೆದ ಕುಂದಾಪುರ ತಾಲೂಕು ಆಟೋರಿûಾ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು) ಇದರ 41ನೇ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಂಘದ ಅಧ್ಯಕ್ಷ ಕೆ. ಲಕ್ಷ್ಮಣ ಬರೆಕಟ್ಟು  ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ಸಿಐಟಿಯುನ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಶಂಕರ, ಕುಂದಾಪುರ ತಾಲೂಕು ಸಮಿತಿಯ ಅಧ್ಯಕ್ಷ ಎಚ್‌. ನರಸಿಂಹ, ಸಂಘದ ಗೌರವಾಧ್ಯಕ್ಷ ಎಚ್‌. ಕರುಣಾಕರ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಸಂಘದ ವಾರ್ಷಿಕ ಚಟುವಟಿಕೆಯ ವರದಿಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ಮಂಡಿಸಿದರು. ಕೋಶಾ ಧಿಕಾರಿ ಸಂತೋಷ ಕಲ್ಲಾಗರ ಲೆಕ್ಕಪತ್ರವನ್ನು ನೀಡಿದರು.

ನಂತರ ನಡೆದ ನೂತನ ಪದಾಧಿ ಕಾರಿಗಳ ಆಯ್ಕೆಯಲ್ಲಿ ಅಧ್ಯಕ್ಷರಾಗಿ ಕೆ. ಲಕ್ಷ್ಮಣ ಬರೆಕಟ್ಟು, ಗೌರವಾಧ್ಯಕ್ಷರಾಗಿ ಎಚ್‌. ಕರುಣಾಕರ, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ, ಸಂಘಟನಾ ಕಾರ್ಯದರ್ಶಿಯಾಗಿ ರಾಜು ದೇವಾಡಿಗ, ಕೋಶಾಧಿಕಾರಿಯಾಗಿ ಸಂತೋಷ ಕಲ್ಲಾಗಾರ, ಸಂಘದ ಸಲಹೆಗಾರರಾಗಿ ವಿ. ಚಂದ್ರ ಅವರು ಆಯ್ಕೆಗೊಂಡರು.ರಾಜು ದೇವಾಡಿಗ  ಸ್ವಾಗತಿಸಿದರು. ರವಿ ವಿ. ಎಂ. ವಂದಿಸಿದರು. 

Advertisement

ಇಂದು 40 ವರ್ಷ ಮೇಲ್ಪಟ್ಟ ಚಾಲಕರು ಅ ಧಿಕ ಸಂಖ್ಯೆಯಲ್ಲಿದ್ದು, ಅಂತವರಿಗೆ ಬ್ಯಾಡ್ಜ್ ನೀಡಲು ಸರಕಾರವು 10ನೇ ತರಗತಿ ತೇರ್ಗಡೆ ಹೊಂದಿರುವ ಪ್ರಮಾಣಪತ್ರ ಕೇಳುತ್ತಿರುವುದು ಸರಿಯಾದ ಕ್ರಮವಲ್ಲ. ಅಂತಹ ಚಾಲಕರು ಈ ಸಮಯದಲ್ಲಿ ಪರೀಕ್ಷೆ ಬರೆದು ಪ್ರಮಾಣಪತ್ರ ಪಡೆಯುವುದು ಕಷ್ಟಸಾಧ್ಯ. ಇಂತಹ ಕಾನೂನನ್ನು ಹಿಂಪಡೆಯಬೇಕು ಮತ್ತು ಕಟ್ಟಡ ಕಾರ್ಮಿಕರಿಗೆ ಸಿಗುವಂತಹ ಸೌಲಭ್ಯಗಳು ರಾತ್ರಿ ಹಗಲೆನ್ನದೆ ದುಡಿಯುವ ಆಟೋಚಾಲಕರಿಗೆ ಸಿಗಬೇಕು. 

ಇಂದಿನ ಕಾಲದಲ್ಲಿ ಒಬ್ಬ ಆಟೋಚಾಲಕ ತಾನು ದುಡಿದು ಬಂದ ಹಣದಲ್ಲಿ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ, ಮನೆ ಅಡುಗೆ ಸಾಮಗ್ರಿಗಳನ್ನು ತಂದುಕೊಂಡು ಜೀವನ ನಡೆಸುವುದು ಕಷ್ಟಕರವಾಗಿದೆ. ಸರಕಾರವು ಆಟೋಚಾಲಕರಿಗೆ ಪಿ.ಎಫ್‌., ಇ.ಎಸ್‌.ಐ. ಮುಂತಾದ ಸೌಲಭ್ಯಗಳನ್ನು ನೀಡಬೇಕು.
-ಎಸ್‌. ವರಲಕ್ಷ್ಮೀ 

Advertisement

Udayavani is now on Telegram. Click here to join our channel and stay updated with the latest news.

Next