Advertisement

ಶ್ರೀಧರಸ್ವಾಮಿಗಳ ಮಹಾಯಾಗ; ವರದಪುರಕ್ಕೆ ಸಂಬಂಧ ಇಲ್ಲ

03:29 PM Oct 13, 2021 | Suhan S |

ಸಾಗರ: ತಾಲೂಕಿನ ಶ್ರೀಕ್ಷೇತ್ರ ವರದಹಳ್ಳಿಯ ರಾಮದುರ್ಗಾಂಬ ದೇವಸ್ಥಾನದ ಪಕ್ಕದಲ್ಲಿರುವ ಶ್ರೀಧರ ಯಾಗಶಾಲೆಯಲ್ಲಿ ಮಾರ್ಚ್ ತಿಂಗಳಿನಲ್ಲಿ ಬೆಂಗಳೂರಿನ ಅನವರತ ಪ್ರತಿಷ್ಠಾನ ನಡೆಸಲು ಉದ್ದೇಶಿಸಿರುವ ಶ್ರೀಧರಸ್ವಾಮಿಗಳ ಮಹಾಯಾಗಕ್ಕೂ ವರದಪುರದ ಶ್ರೀಧರಾಶ್ರಮಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಶ್ರೀಧರ ಸೇವಾ ಮಹಾಮಂಡಲ ಸ್ಪಷ್ಟನೆ ನೀಡಿದೆ.

Advertisement

ಅನವರತ ಟ್ರಸ್ಟ್‌ಗೂ ಶ್ರೀಧರ ಸೇವಾ ಮಹಾಮಂಡಲ, ಶ್ರೀಧರಾಶ್ರಮ, ಶ್ರೀಕ್ಷೇತ್ರ ವರದಪುರಕ್ಕೂ ಯಾವುದೇ ಸಂಬಂಧವಿಲ್ಲ. ಈ ಸಂಸ್ಥೆಯು ದುರ್ಗಾಂಬ ದೇವಸ್ಥಾನ ವರದಪುರದಲ್ಲಿ ಕಾರ್ಯಕ್ರಮಗಳನ್ನು ನಡೆಸಿರುವ ಈ ಹಿಂದೆ ಡಾ. ಪ್ರಭಾಕರ ಕಶ್ಯಪ್, ಈಗ ಅನವರತ ಮಹರ್ಷಿ ಎಂಬ ಹೆಸರಿಟ್ಟುಕೊಂಡವರಿಗೆ ಸೇರಿರುತ್ತದೆ. ಭಗವಾನರು ಪ್ರಪ್ರಥಮವಾಗಿ ಶ್ರೀಕ್ಷೇತ್ರ ವರದಪುರದ ದುರ್ಗಾಂಬ ದೇವಸ್ಥಾನದಲ್ಲಿ ಆಶ್ರಮವನ್ನು ಸ್ಥಾಪಿಸಿದ್ದು, ಪ್ರಸ್ತುತ ಯಾಗಶಾಲೆಯಿರುವ ಜಾಗವು ಕೂಡಾ ಭಗವಾನರಿಗೆ ಅರ್ಪಣೆಗೊಂಡು, ಅವರು ಪ್ರೀತಿಯಿಂದ ಇಟ್ಟುಕೊಂಡಿರುವ ಸ್ಥಳವಾಗಿದೆ. ಧಾರ್ಮಿಕ ದೃಷ್ಟಿಯಿಂ, ವ್ಯಾವಹಾರಿಕ ದೃಷ್ಟಿಯಿಂದ, ಸಾಮಾಜಿಕ ರೀತಿ ನೀತಿಯ ದೃಷ್ಟಿಯಿಂದ ಶ್ರೀಧರ ಸೇವಾಮಹಾಮಂಡಲ ಧರ್ಮಸಂಕಟದಲ್ಲಿ ಸಿಕ್ಕಿಕೊಂಡು ಈ ಮಹಾಯಾಗಕ್ಕೆ ಒಪ್ಪಿಗೆಯನ್ನು ನೀಡಿದೆ ಎಂದು ಪ್ರಕಟಣೆಯಲ್ಲಿ ಪ್ರತಿಪಾದಿಸಲಾಗಿದೆ.

ಅನವರತ ಎಂಬುವವರು ಪ್ರಕಟಪಡಿಸಿದಂತೆ ‘ಶ್ರೀ ಶ್ರೀಧರ ಸ್ವಾಮಿಗಳ ಮಹಾಯಾಗ’ ಎಂಬುವ ಶಬ್ದವೇ ಸರಿಯಾದದ್ದಲ್ಲ. ಶ್ರೀಧರ ಸ್ವಾಮಿ ಜಪ ಮತ್ತು ಹೋಮಕ್ಕೆ ಮಂತ್ರದ ಜಪಾನುಷ್ಠಾನ ಹಾಗೂ ಹೋಮದ ನಿಯಮಗಳ ಬಗ್ಗೆ ಅತ್ಯಂತ ಸ್ಪಷ್ಟವಾಗಿ ತಿಳಿಸಿದ್ದು, ‘ಶ್ರೀ ಗುರು ಮಂತ್ರಾನುಷ್ಠಾನ, ಶ್ರೀ ನಮಃ ಶಾಂತಾಯ ಮಂತ್ರ ಜಪಾನುಷ್ಠಾನ, ಶ್ರೀ ಗುರುಮಂತ್ರ ಹವನ, ಶ್ರೀ ನಮಃ ಶಾಂತಾಯ ಮಂತ್ರ ಹವನ’ ಎಂದು ನಾಮಕರಣ ಮಾಡಿದುದನ್ನು ತಿದ್ದುಪಡಿ ಮಾಡಲು ಯಾರಿಗೂ ಯಾವ ಕಾಲದಲ್ಲಿಯೂ ಅಧಿಕಾರವಿಲ್ಲ. ಭಗವಾನರ ಆದೇಶವನ್ನು ಗಾಳಿಗೆ ತೂರದಂತೆ ಮಾಡುವ ಪ್ರಯತ್ನವನ್ನು ನಾವು ಮಾಡುವುದಕ್ಕೆ ಮುಂಚಿತವಾಗಿಯೇ ತ್ತಿದ್ದೆವು. ಈ ವಿಚಾರಗಳ್ಯಾವುದು ನಮ್ಮ ಗಮನಕ್ಕೆ ಮುಂಚೆಯೇ ಬರದೇ ಇದ್ದುದರಿಂದ ನಮಃ ಶಾಂತಾಯ ಜಪದ ಪುಸ್ತಕವನ್ನು ಮಾನವೀಯತೆಯ ದೃಷ್ಟಿಯಿಂದ ಭಗವಾನರ ಸನ್ನಿಧಿ ಮುಂದೆ ಇಟ್ಟು ನಮಸ್ಕರಿಸಿ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆಯೇ ವಿನಃ ಮಹಾಮಂಡಲವು ಯಾವುದೇ ವಿಧದ ಕೃಪಾಶೀರ್ವಾದವನ್ನು ನೀಡಿಲ್ಲ ಎಂದು ದೃಢಪಡಿಸಲಾಗಿದೆ.

ಕೆಲವು ಸಂಸ್ಥೆಗಳು ಲೋಕ ಕಲ್ಯಾಣದ ಹೆಸರಿನಲ್ಲಿ ತಮ್ಮ ಆತ್ಮ ಕಲ್ಯಾಣ ಮತ್ತು ಸಂಪತ್ ಅಭಿವೃದ್ಧಿಗಾಗಿ ಕೆಲವು ಕಡೆ ಇಂತಹ ಕಾರ್ಯಕ್ರಮಗಳನ್ನು ನಡೆಸಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಹವನಕ್ಕೆ ದೇಣಿಗೆ ನೀಡುವ ಬಗ್ಗೆ ಮಹಾಮಂಡಲವು ಭಕ್ತರ ವೈಯುಕ್ತಿಕ ನಿರ್ಧಾರಕ್ಕೆ ಬಿಟ್ಟಿರುತ್ತದೆ. ಈ ಸಂಬಂಧ ಯಾವುದೇ ವ್ಯಾವಹಾರಿಕ ವಿಚಾರದಲ್ಲಿ ಶ್ರೀಧರ ಮಹಾಮಂಡಲವು ಯಾವುದೇ ರೀತಿಯಿಂದ ಪಾಲುದಾರರಲ್ಲ ಎಂದು ವರದಪುರದ ಶ್ರೀಧರ ಸೇವಾ ಮಹಾಮಂಡಲ ಸ್ಪಷ್ಟೀಕರಣದಲ್ಲಿ ಒತ್ತಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next