Advertisement

ಯುವಕರಲ್ಲಿ ಓದುವ ಸಂಸ್ಕೃತಿ ಇಲ್ಲ

09:37 PM Sep 15, 2019 | Team Udayavani |

ಮೈಸೂರು: ಯುವ ಪೀಳಿಗೆಯಲ್ಲಿ ಸ್ವತಂತ್ರವಾಗಿ ಓದುವ ಹವ್ಯಾಸ ನಾಶವಾಗುತ್ತಿರುವುದು ಆಘಾತಕಾರಿ ಸಂಗತಿ ಎಂದು ಡಾ.ಜಯಶ್ರೀ ಮುರಳಿ ತಿಳಿಸಿದರು. ಸಂಸ್ಕೃತಿ ಪ್ರಕಾಶನ ಹಾಗೂ ಶ್ರೀನಿಧಿ ಪುಸ್ತಕ ಕೇಂದ್ರದ ವತಿಯಿಂದ ಭಾನುವಾರ ನಗರದ ಗೋಪಾಲಸ್ವಾಮಿ ಶಿಶುವಿಹಾರ ಕಾಲೇಜಿನಲ್ಲಿ ಲೇಖಕ ಡಾ.ವಿ.ರಂಗನಾಥ್‌ ಅವರ “ನೀವು ನಮ್ಮವರಲ್ಲ, ನಾವೇ ನಿಮ್ಮವರು’ ಮತ್ತು “ನಮ್ಮ ಹೆಮ್ಮೆಯ ರಾಷ್ಟ್ರಧ್ವಜ’ ಕೃತಿಗಳನ್ನು ಅವರು ಬಿಡುಗಡೆ ಮಾಡಿದರು.

Advertisement

ಬಳಿಕ ಮಾತನಾಡಿದ ಅವರು, ಇತ್ತೀಚೆಗೆ ನಮ್ಮ ಜನರಿಗೆ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವೇ ಕಡಿಮೆಯಾಗಿದೆ. ಯಾರೋ ಖರೀದಿಸಿದ ಪುಸ್ತಕದಲ್ಲಿ ತಾವೂ ಓದುತ್ತಾರೆ. ಯುವ ಪೀಳಿಗೆಯಲ್ಲಂತೂ ಓದುವ ಸಂಸ್ಕೃತಿಯೇ ಇಲ್ಲವಾಗಿರುವ ಇಂತಹ ಸ್ಥಿತಿಯಲ್ಲಿ ರಂಗನಾಥ್‌ ಅವರು ಈ ಕೃತಿಗಳನ್ನು ರಚನೆ ಮಾಡುವ ಮೂಲಕ ನಿವೃತ್ತಿಯ ನಂತರವೂ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಇಂದಿನ ರಾಜಕಾರಣಿಗಳು ತಮ್ಮ ಬೆಳವಣಿಗೆಗಾಗಿ ದೇಶದ ಬಗ್ಗೆ, ರಾಷ್ಟ್ರಧ್ವಜದ ಮೇಲಿನ ಅಭಿಮಾನವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅವರು “ನಮ್ಮ ಹೆಮ್ಮೆಯ ರಾಷ್ಟ್ರಧ್ವಜ’ ಪುಸ್ತಕ ಓದುವ ಮೂಲಕ ರಾಷ್ಟ್ರಧ್ವಜದ ಪರಿಕಲ್ಪನೆ ಮನನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

“ನೀವು ನಮ್ಮವರಲ್ಲ, ನಾವೇ ನಿಮ್ಮವರು’ ಕೃತಿ ಕುರಿತು ಮಾತನಾಡುತ್ತಾ, “ನಾನು ಎಂಬ ಅಹಂ ತ್ಯೆಜಿಸಿದಾಗ ಮಾತ್ರ ಸಮಾಜದಲ್ಲಿ ಒಂದಾಗಲು ಸಾಧ್ಯ ಎಂಬುದುನ್ನು ಈ ಪುಸ್ತಕ ತಿಳಿಸಿದೆ. ಅಲ್ಲದೆ, ಚುನಾವಣೆ, ಚುನಾವಣೆಗೆ ನಿಲ್ಲುವ ಅಭ್ಯರ್ಥಿ ಹಾಗೂ ಶಿಕ್ಷಣದಲ್ಲಿ ಸಂಸ್ಕಾರ ಹೇಗಿರಬೇಕು ಎಂಬುದನ್ನು ಮಾನವೀತೆಯ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದರು. ಭಾರತೀಯ ವಿದ್ಯಾಭವನದ ಅಧ್ಯಕ್ಷ ಪ್ರೊ.ಎ.ವಿ.ನರಸಿಂಹಮೂರ್ತಿ, ಮಹಾರಾಜ ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ.ಎಸ್‌.ಮುರಳಿ, ಲೇಖಕ ಸಂಸ್ಕೃತಿ ಸುಬ್ರಹ್ಮಣ್ಯ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next