Advertisement

ರೆಡ್ಡಿಗೆ ಹೆದರುವ ಪ್ರಶ್ನೆಯೇ ಇಲ್ಲ; ಗಂಗಾವತಿಯಲ್ಲಿ ಮತ್ತೆ ಕಮಲ ಅರಳುತ್ತದೆ:ಶಾಸಕ ಮುನವಳ್ಳಿ

07:52 PM Feb 12, 2023 | Team Udayavani |

ಗಂಗಾವತಿ: ರಾಜ್ಯದ ರಾಜಕಾರಣದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಯವರು ಬಿಜೆಪಿಯಿಂದ ದೂರವಾಗಿ ಸ್ವಂತ ಪ್ರಾದೇಶಿಕ ಪಕ್ಷ ಸ್ಥಾಪಿಸಿದ್ದು ರೆಡ್ಡಿಯವರಿಗೆ ಹೆದರುವ ಪ್ರಶ್ನೆಯೇ ಇಲ್ಲ. ಮತ್ತೊಮ್ಮೆ ಗಂಗಾವತಿ ಮತ ಕ್ಷೇತ್ರದಲ್ಲಿ ನಾನು ಟಿಕೇಟ್ ಆಕಾಂಕ್ಷಿ ಇಲ್ಲಿ ಕಮಲ ಅರಳುವುದು ಖಚಿತ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

Advertisement

ಅವರು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನಪರವಾದ ಯೋಜನೆಗಳನ್ನು ಅನುಷ್ಠಾನ ಮಾಡಿದ್ದು ಮತ್ತೆ ರಾಜ್ಯದಲ್ಲಿ 150 ಶಾಸಕ ಸ್ಥಾನಗಳೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು ಪವಿತ್ರ ಕಿಷ್ಕಿಂಧಾ ಅಂಜನಾದ್ರಿಯನ್ನು ಒಳಗೊಂಡಿರುವ ಗಂಗಾವತಿ ಮತ ಕ್ಷೇತ್ರದಲ್ಲಿ ಪುನಹ ಕಮಲ ಅರಳಲಿದ್ದು ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಗಾಲಿ ರೆಡ್ಡಿಯವರ ಪಕ್ಷಕ್ಕೆ ಬಿಜೆಪಿಯಿಂದ ಕೆಲ ಮುಖಂಡರು ತೆರಳಿದ್ದು ಯಾವುದೇ ಪರಿಣಾಮವಾಗುವುದಿಲ್ಲ. ಇವರಲ್ಲಿ ಪ್ರಮುಖರಿಗೆ ನನ್ನ ಹೃದಯದಲ್ಲಿ ಸ್ಥಾನ ನೀಡಿದ್ದೆ ಆದರೆ ಅವರು ಕುಂಟು ನೆಪ ಹೇಳಿ ಬಿಜೆಪಿ ತ್ಯಜಿಸಿದ್ದಾರೆ ಎಂದರು.

ಅವರ ಮನೋಭಾವನೆಗೆ ರೆಡ್ಡಿ ಪಕ್ಷಕ್ಕೆ ಒಗ್ಗುವುದಿಲ್ಲ. ಅವರು ಮರಳಿ ಬಿಜೆಪಿಗೆ ಬಂದರೆ ಅವರನ್ನು ಹೃದಯಪೂರ್ವಕವಾಗಿ ಸ್ವಾಗತಿಸಲಾಗುತ್ತದೆ. ರೆಡ್ಡಿಯವರು ಹೋದಲ್ಲಿ ಬಂದಲ್ಲಿ ಜನ ಸೇರುವುದು ನೈಜ ಪ್ರೀತಿಯ ಕಾರಣಕ್ಕಾಗಿ ಅಲ್ಲ. ಗಂಗಾವತಿಯ ಮತದಾರರು ಬುದ್ಧಿವಂತರಾಗಿದ್ದು ಮುಂಬರುವ ಚುನಾವಣೆಯಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಿದ್ದಾರೆ. ಸುಮಾರು 15 ನೂರು ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಿಸಿ ಸಮಗ್ರ ಪ್ರಗತಿ ಮಾಡಲಾಗಿದೆ. ಅಂಜನಾದ್ರಿಗೆ 120 ಕೋಟಿ ಅನುದಾನ ತಂದು ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ಭರ್ತಿ ಮಾಡಲು ಕೋಟ್ಯಂತರ ರೂ.ಗಳನ್ನು ಮಂಜೂರಿ ಮಾಡಿಸಲಾಗಿದ್ದು ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದರು.

ಅಮೃತ ಸಿಟಿಯೋಜನೆ, ಕೇಂದ್ರೀಯ ವಿದ್ಯಾಲಯ, ರೈಲ್ವೇ, ವಿಜಯನಗರ ಕಾಲುವೆಗಳ ದುರಸ್ಥಿ, ಕೃಷಿ ಮಹಾವಿದ್ಯಾಲಯ, ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ಚಿಕಿತ್ಸೆ, ಸರಕಾರಿ ಮಹಾವಿದ್ಯಾಲಯದಲ್ಲಿ ಹತ್ತು ಹಲವು ಸ್ನಾತಕ ಸ್ನಾತಕೋತ್ತರ ಕೋರ್ಸ್ಗಳ ಮಂಜೂರಿ ಜತೆಗೆ ಬಿ ಪ್ಲಸ್ ಪ್ಲಸ್ ಗ್ರೇಡ್ ಮೂಲಕ ನ್ಯಾಕ್ನಲ್ಲಿ ಸ್ಥಾನಮಾನ ಲಭಿಸುವಂತೆ ಕಾರ್ಯ ಮಾಡಲಾಗಿದೆ. ಇದರಿಂದ ಖಚಿತವಾಗಿ ಮತ್ತೊಮ್ಮೆ ಗೆಲುವು ನಮ್ಮದಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕಳಕನಗೌಡ, ನರಸಿಂಗರಾವ್ ಕುಲಕರ್ಣಿ, ಅರಿಕೇರಿ ಶಿವಕುಮಾರ ಸೇರಿ ಅನೇಕರಿದ್ದರು.

Advertisement

ಫೆ.14 ರಂದು ಸಂಜೆ 4 ಗಂಟೆಗೆ ನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಪೇಜ್ ಪ್ರಮುಖ ಸಮಾವೇಶಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಸೇರಿ ಸಂಸದರು, ಸಚಿವರು ಶಾಸಕರು ಬಿಜೆಪಿ ಮುಖಂಡರು ಆಗಮಿಸಲಿದ್ದಾರೆ. ಶಿಕ್ಷಣ ಪ್ರೇಮಿ ನೆಕ್ಕಂಟಿ ಸೂರಿಬಾಬು ಸೇರಿ ಪ್ರಮುಖರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next