Advertisement

ಈಡೇರದ ಹಲವು ವರ್ಷಗಳ ಬೇಡಿಕೆ 

07:39 PM Dec 26, 2021 | Team Udayavani |

ಬೋಂದೆಲ್‌: ಸ್ಮಾರ್ಟ್‌ ಸಿಟಿಯಾಗಿ ಮಂಗಳೂರು ನಗರ ರೂಪು ಗೊಳ್ಳುತ್ತಿದ್ದರೂ ಸಿಟಿಯಿಂದ ತುಸು ದೂರವಿರುವ ಬೋಂದೆಲ್‌ನಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಸುಸಜ್ಜಿತ ಆಟದ ಮೈದಾನವಿಲ್ಲ. ಸುತ್ತಮುತ್ತಲೂ ಸಾವಿ ರಾರು ಮನೆಗಳಿದ್ದು, ಸುತ್ತಲಿನ ಮಂದಿ ಆಟವಾಡಲು ಇಲ್ಲಿನ ಪಿಡಬ್ಲ್ಯುಡಿ ಮೈದಾ ನವನ್ನು ಆಶ್ರಯಿಸಿದ್ದಾರೆ. ಈ ಮೈದಾನದಲ್ಲಿ ಸಮರ್ಪಕ ಮೂಲಸೌಲಭ್ಯ ಇಲ್ಲದ್ದ ಪರಿ ಣಾಮ, ಈ ಭಾಗದ ಕ್ರೀಡಾಸಕ್ತರಿಗೆ, ಸಾರ್ವಜನಿಕರಿಗೆ ಬಹುತೊಂದರೆ ಉಂಟಾಗಿದೆ.

Advertisement

ಕಾವೂರು, ಬೋಂದೆಲ್‌, ಪಚ್ಚನಾಡಿ, ಮರಕಡ ಸಹಿತ ಸುತ್ತಮುತ್ತಲಿನ ಸಾರ್ವ ಜನಿಕರು, ಇದೇ ಭಾಗದಲ್ಲಿರುವ ಕೆಐಒಸಿಎಲ್‌, ಕೆಎಚ್‌ಬಿ, ಕೆಇಬಿ, ನಬಾರ್ಡ್‌ ಸಂಸ್ಥೆಗಳ ವಸತಿ ಸಮು ಚ್ಚಯಗಳ ಮಂದಿ, ಸುತ್ತಲಿನ ಶಾಲಾ ಮಕ್ಕಳಿಗೆ ಆಟಕ್ಕೆಂದು ಇದೇ ಮೈದಾನವನ್ನು ಬಳಕೆ ಮಾಡುತ್ತಿದ್ದಾರೆ. ಈ ಮೈದಾನ ಅಭಿವೃದ್ಧಿ ಮಾಡಬೇಕು ಎಂಬ ಕೂಗು ಅನೇಕ ವರ್ಷಗಳಿಂದ ಇದ್ದರೂ ಜನಪ್ರತಿನಿಧಿಗಳು ಮಾತ್ರ ಇತ್ತ ಗಮನಹರಿಸುತ್ತಿಲ್ಲ ಎನ್ನುವುದು ಸಾರ್ವ ಜನಿಕರ ದೂರು.

ಸುಮಾರು 8 ಎಕರೆ ಪ್ರದೇಶದಲ್ಲಿರುವ ಬೋಂದೆಲ್‌ ಮೈದಾನ ಇನ್ನಷ್ಟೇ ಅಭಿವೃದ್ಧಿಯಾಗಬೇಕಿದೆ. ಸ್ಥಳೀಯರ ಬೇಡಿಕೆಯಂತೆ ಮೈದಾನ ವನ್ನು ಪೂರ್ಣ ಮಟ್ಟದಲ್ಲಿ ಸಮತಟ್ಟು ಮಾಡಬೇಕು. ಮೈದಾನದ ಒಳಾಂಗಣದ ಸುತ್ತಲೂ ವಾಕಿಂಗ್‌ ಟ್ರಾಕ್‌ ನಿರ್ಮಾಣ ಮಾಡ ಬೇಕು. ಪ್ರೇಕ್ಷಕರಿಗೆ ವೀಕ್ಷಣೆಗೆ ಅನುವು ಮಾಡಿಕೊಡಲು ಗ್ಯಾಲರಿ ನಿರ್ಮಾಣವಾಗಬೇಕು. ಮೈದಾನದ ಸುತ್ತಲೂ ಗಿಡ ನೆಟ್ಟು ಪೋಷಿಸಬೇಕು. ಮೈದಾನಕ್ಕೆ ಸದ್ಯ ವಿದ್ಯುತ್‌ ಸಂಪರ್ಕವಿಲ್ಲ. ಹೀಗಿದ್ದಾಗ ಅನೈತಿಕ ಚಟುವಟಿಕೆಗಳಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮೈದಾನದಲ್ಲಿ ಹೈ ಮಾಸ್ಕ್ ದೀಪ ಅಳವಡಿಸಬೇಕು. ಆಟವಾಡಲು ಮತ್ತು ಬೆಳಗ್ಗೆ ಸಂಜೆ ವಾಕಿಂಗ್‌ಗೆ ಬರುವವರಿಗೆ ಅನುಕೂಲವಾಗುವಂತೆ ನೀರಿನ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕಿದೆ.

ಮುಖ್ಯಮಂತ್ರಿಗಳಿಗೂ ಮನವಿ :

ಬೋಂದೆಲ್‌ನಲ್ಲಿ ಸುಸಜ್ಜಿತ ಆಟದ ಮೈದಾನದ ಆವಶ್ಯಕತೆ ಎಂಬ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್‌. ಯಡಿಯೂರಪ್ಪ, ಎಚ್‌. ಡಿ. ಕುಮಾರಸ್ವಾಮಿ, ಸದಾನಂದ ಗೌಡ ಅವರಿಗೆ ಈ ಭಾಗದ ನಾಗರಿಕ ಹಿತರಕ್ಷಣೆ ವೇದಿಕೆಯ ಆಶ್ರಯದಲ್ಲಿ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದರು. ಆವೇಳೆ ಮನವಿ ಸ್ಪಂದಿಸಿದ ಮುಖ್ಯ ಮಂತ್ರಿಗಳು, ಮೈದಾನ ನಿರ್ಮಾಣಕ್ಕೆ ಶೀಘ್ರ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಭರವಸೆ ನೀಡಿ ಹತ್ತು ವರ್ಷ ಕಳೆದರೂ ಬೇಡಿಕೆ ಮಾತ್ರ ಈಡೇರಲಿಲ್ಲ.

Advertisement

ಸರಕಾರಕ್ಕೆ ಪ್ರಸ್ತಾವನೆ :

ಬೋಂದೆಲ್‌ ಬಳಿಯ ಕ್ರೀಡಾಂಗಣ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಈಗಾಗಲೇ ಬೇಡಿಕೆ ಬಂದಿದೆ. ಅದರ ಅನುಗುಣವಾಗಿ ಕ್ರೀಡಾಂಗಣ ಅಭಿವೃದ್ಧಿಗೆಂದು ಅನುದಾನ ಬಿಡುಗಡೆಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.ಯಶವಂತ್‌, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತ

ಮನವಿ ಮಾಡಿದರೂ ಬೇಡಿಕೆ ಈಡೇರಲಿಲ್ಲ:

ಬೋಂದೆಲ್‌ಗೆ ಸುಸಜ್ಜಿತ ಆಟದ ಮೈದಾನ ಬೇಕು ಎಂಬುವುದು ನಮ್ಮ ಹಲವಾರು ವರ್ಷಗಳ ಬೇಡಿಕೆ. ಈಗಿರುವ ಪಿಡಬ್ಲ್ಯುಡಿ ಮೈದಾನ ವನ್ನು ಅಭಿವೃದ್ಧಿಗೊಳಿಸಬೇಕು ಎಂದು ಅನೇಕ ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ. ಆದರೂ ನಮ್ಮ ಬೇಡಿಕೆ ಈಡೇರಲಿಲ್ಲ. ಮೈದಾನ ದಕ್ಕೆ ದಿನಂಪ್ರತಿ ಹಿರಿಯ ನಾಗರಿಕರು, ಸುತ್ತಮುತ್ತಲಿನ ಸರ್ವಾಜನಿಕರು ವಾಕಿಂಗ್‌ಗೆ ಬರುತ್ತಿದ್ದಾರೆ. ಇನ್ನು, ಮಕ್ಕಳು, ಯುವಕರು ಆಟದ ಉದ್ದೇಶಕ್ಕೆ ಬಳಸುತ್ತಿದ್ದಾರೆ. ಆದರೂ ಮೈದಾನಕ್ಕೆ ಸೂಕ್ತ ರಕ್ಷಣೆಯಿಲ್ಲ. ಸಂಬಂಧಪಟ್ಟ ಇಲಾಖೆ ತತ್‌ಕ್ಷಣ ದಾನ ಅಭಿವೃದ್ಧಿಯತ್ತ ಗಮನಹರಿಸಬೇಕಾಗಿದೆ.ಪದ್ಮನಾಭ ಉಳ್ಳಾಲ್‌, ನಾಗರಿಕ ಹಿತರಕ್ಷಣಾ ವೇದಿಕೆ ಸಂಚಾಲಕ

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next