Advertisement

ಮೀನು ಮಾರಾಟಕ್ಕಿಲ್ಲ ಮಾರುಕಟ್ಟೆ ವ್ಯವಸ್ಥೆ

01:35 PM Dec 28, 2021 | Suhan S |

ವಿಜಯಪುರ: ಒಳನಾಡು ಮೀನುಗಾರಿಕೆ ಬಲವರ್ಧನೆಸಮಸ್ಯೆ ಒಂದೆಡೆಯಾದರೆ ಸದ್ಯದ ಮೀನುಗಾರಿಕೆಗೆ ಸುಸಜ್ಜಿತ ಮಾರುಕಟ್ಟೆ ಇಲ್ಲ. ಹೀಗಾಗಿ ಬೀದಿ ಬದಿಯಲ್ಲಿ ಮೀನು ಮಾರಾಟ ಮಾಡುತ್ತಿದ್ದು, ಅಶುದ್ಧತೆಯಿಂದಾಗಿ ಅಪಾಯಕ್ಕೆ ಆಹ್ವಾನ ನೀಡುವ ಸ್ಥಿತಿ ಇದೆ.

Advertisement

ವಿಜಯಪುರ ಜಿಲ್ಲೆಯಲ್ಲಿ ಸುಮಾರು 300 ಜನರುಬೀದಿ ಬದಿಯಲ್ಲಿ ಮೀನು ಮಾರಾಟ ಮಾಡುತ್ತಿದ್ದಾರೆ.ಇದರಲ್ಲಿ ಜಿಲ್ಲಾ ಕೇಂದ್ರ ಒಂದರಲ್ಲೇ ಸುಮಾರು 100ಕ್ಕೂ ಹೆಚ್ಚು ಮೀನುಗಾರರು ಮೀನು ಮಾರಾಟಕ್ಕೆ ಬೀದಿಯನ್ನೇ ಅವಲಂಬಿಸಿದ್ದು, ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿಲ್ಲ.

­ಬೀದಿಬದಿಮೀನು-ಆರೋಗ್ಯಕ್ಕೆಅಪಾಯ: ಬೀದಿ ಬದಿಯಲ್ಲಿ ಮೀನುಗಾರಿಕೆ ಮಾಡುವುದರಿಂದ ನೈರ್ಮಲ್ಯದ ಸಮಸ್ಯೆ ಎದುರಾಗುತ್ತದೆ. ಧೂಳು,ರೋಧಕಾರಕ ಇತರೆ ಕಣಗಳು ಬೀದಯಲ್ಲಿ ತೆರೆದಸ್ಥಿತಿಯಲ್ಲಿರುವ ಮೀನುಗಳ ಮೇಲೆ ಬೀಳಲಿದೆ. ಇಂಥ ಮೀನುಗಳನ್ನು ಖರೀದಿಸಿ, ಸೇವಿಸುವ ಗ್ರಾಹಕರ ಆರೋಗ್ಯದ ಮೇಲೆ ಇದು ಗಂಭೀರ ಪರಿಣಾಮ ಬೀರುವ ಸಾಧ್ಯತದೆ ಇದೆ.ಈವಿಷಯದಲ್ಲಿ ಮೀನುಗಾರಿಕೆ ಇಲಾಖೆ ಈಗಾಗಲೇ ಸಮೀಕ್ಷೆ ನಡೆಸಿದೆ.

ಮುದ್ದೇಬಿಹಾಳ, ಇಂಡಿ, ಕೊಲ್ಹಾರ, ಸಿಂದಗಿ ಸೇರಿದಂತೆ ಹಲವು ಕಡೆಗಳಲ್ಲಿ ಮೀನು ಮಾರಾಟಗಾರರಿಗೆ ಬೀದಿಬದಿ ವ್ಯಾಪಾರಕ್ಕೆ ಬದಲಾಗಿ ಮಳಿಗೆಗಳಲ್ಲಿ ಸುರಕ್ಷಿತರೀತಿಯಲ್ಲಿ ವ್ಯಾಪಾರಕ್ಕೆ ಸೂಚಿಸಿದೆ. ಇದನ್ನು ಕೆಲ ಮೀನುಗಾರರು ಪಾಲಿಸಿದ್ದಾರೆ.

­ಕಸದ ತೊಟ್ಟಿಯಾದಮೀನು ಮಾರುಕಟ್ಟೆ: ಮೀನು ಮಾರಾಟಕ್ಕೆಂದು ವಿಜಯಪುರ ನಗರದಲ್ಲಿ ಪ್ರತ್ಯೇಕವಾಗಿ ಹಲವು ದಶಕಗಳ ಹಿಂದೆ ನಿರ್ಮಿಸಿರುವ ಮೀನು ಮಾರುಕಟ್ಟೆ ಬಳಕೆಗೆ ಯೋಗ್ಯವಿಲ್ಲ. ವಿಜಯಪುರ ನಗರದಲ್ಲಿ ಮೀನು ಮಾರಾಟಕ್ಕಾಗಿ ಪ್ರತ್ಯೇಕ ಮಾರುಕಟ್ಟೆ ಇದ್ದರೂ ಮಹಾನಗರ ಪಾಲಿಕೆ ನಿರ್ವಹಣೆ ಇಲ್ಲದೇ ದುಸ್ಥಿತಿ ತಲುಪಿದೆ. ಪರಿಣಾಮ ನೀರು, ಮೀನು ಸ್ವಚ್ಛಗೊಳಿಸುವಿಕೆ ಮಾಡುವುದು ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲದೇ ಇದ್ದೊಂದು ಮೀನು ಮಾರುಕಟ್ಟೆಯೂ ಕಸದ ತೊಟ್ಟಿಯಾಗಿ ಪರಿವರ್ತನೆಗೊಂಡಿದೆ.

Advertisement

­ಕೈಗೂಡದ ಸ್ಥಳಾಂತರಕನಸು: ಎಂ.ಬಿ. ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಮೀನು ಮಾರುಕಟ್ಟೆ ಸ್ಥಳಾಂತರಚಿಂತನೆ ನಡೆಸಿದ್ದರು. ಆದರೆ ಇದು ಕೈಗೂಡಿಲ್ಲ. ಸ್ಥಳೀಯರಿಂದಲೂ ಪ್ರತ್ಯೇಕವಾದ ಸುಸಜ್ಜಿತ ಮೀನುಮಾರುಕಟ್ಟೆಯ ಬೇಡಿಕೆಯ ಧ್ವನಿ ದೊಡ್ಡ ಮಟ್ಟದಲ್ಲಿಕೇಳಿ ಬರುತ್ತಿಲ್ಲ. ಪರಿಣಾಮ ಭವಿಷ್ಯದಲ್ಲಿ ಒಳನಾಡುಮೀನುಗಾರಿಕೆಯಲ್ಲಿ ನೀಲಿ ಕ್ರಾಂತಿಯಿಂದಲೇಗುರುತಿಸಿಕೊಳ್ಳುವ ಶಕ್ತಿ ಇದ್ದರೂ ಸೌಲಭ್ಯಗಳ ಕೂರೆ‌ತೆಯಲ್ಲಿ ಪ್ರತ್ಯೇಕ ಮೀನುಗಾರಿಕೆ ಮಾರುಕಟ್ಟೆ ಸೌಲಭ್ಯದ ಕೊರತೆಯೂ ಪ್ರಧಾನವಾಗಿದೆ.

­ಆಧುನಿಕ ಮೀನುಮಾರುಕಟ್ಟೆ: ಇದರ ಮಧ್ಯೆಯೂ ಮೀನುಗಾರಿಕೆ ಅಭಿವೃದ್ದಿಗೆ ಸರ್ಕಾರ ಕಣ್ತೆರೆದಿದೆ. ಇದಕ್ಕಾಗಿ ಜಿಲ್ಲೆಯ ಮೀನು ಮಾರಾಟಕ್ಕೆ ಪ್ರತ್ಯೇಕ ಹಾಗೂ ಸುಸಜ್ಜಿತ ಆಧುನಿಕ ಮಾರುಕಟ್ಟೆ ನಿರ್ಮಾಣಕ್ಕೆ ಕರ್ನಾಟ‌ಕ ಮೀನುಗಾರಿಕೆ ಅಭಿವೃದ್ಧಿ ನಿಗಮದಿಂದಯೋಜನೆ ರೂಪಿಸಲಾಗಿದೆ. ವಿಜಯಪುರಜಿಲ್ಲೆಯಲ್ಲಿ ಮೀನುಗಾರಿಕೆಗೆ ಇರುವ ಸಮೃದ್ಧಸಂಪನ್ಮೂಲದ ಅಗತ್ಯವನ್ನು ಮನಗಂಡು ರೂಪಿಸಿರುವ ಯೋಜನೆಯಲ್ಲಿ ಇಂಡಿ ಪಟ್ಟಣದಲ್ಲಿ ಒಂದು ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಹಂತದಲ್ಲಿದೆ.

ಅಂತಿಮ ಹಂತಕ್ಕೆ ಇಂಡಿಮಾರುಕಟ್ಟೆ: ಇಂಡಿ ಪಟ್ಟಣದಲ್ಲಿ ಸ್ಥಳೀಯ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಒತ್ತಾಸೆಯ ಕಾರಣ ಪುರಸಭೆಮೀನು ಮಾರಾಟಕ್ಕೆ ಆಧುನಿಕ ಮಾರುಕಟ್ಟೆನಿರ್ಮಾಣಕ್ಕೆ ನಿವೇಶನ ನೀಡಿದೆ. ಸದರಿಯೋಜನೆಯಲ್ಲಿ ಸುಮಾರು 1 ಕೋಟಿ ರೂ.ವೆಚ್ಚದಲ್ಲಿ ಮೀನು ಮಾರಾಟಕ್ಕೆ ಆಧುನಿಕ ಸೌಲಭ್ಯದಮಾರುಕಟ್ಟೆ ನಿರ್ಮಾಣಗೊಳ್ಳುತ್ತಿದೆ. ಕಳೆದ ಎರಡುವರ್ಷಗಳ ಹಿಂದೆ ಆರಂಭಗೊಂಡ ಕಾಮಗಾರಿ ಇದೀಗ ಮುಕ್ತಾಯದ ಹಂತದಲ್ಲಿದೆ.

­ವಿಜಯಪುರದಲ್ಲಿ ನಿವೇಶನಕ್ಕಾಗಿಹುಡುಕಾಟ: ಇನ್ನು ವಿಜಯಪುರ ನಗರದಲ್ಲೂ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದಿಂದ ಆಧುನಿಕ ಮೀನು ಮಾರಾಟ ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಆದರೆ ನಗರದಲ್ಲಿ ಆಯಕಟ್ಟಿನ ಸ್ಥಳದಲ್ಲಿ ನಿವೇಶನ ದೊರೆಯದ ಕಾರಣಈಸೌಲಭ್ಯ ಪಡೆಯಲುಸಾಧ್ಯವಾಗಿಲ್ಲ. ಇದರ ಮಧ್ಯೆಯೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ನಗರದಲ್ಲಿ ನಿವೇಶನ ಕೊಡಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಮೀನುಗಾರಿಕೆ ಇಲಾಖೆ ಆಧುನಿಕ ಮೀನುಮಾರಾಟಕ್ಕೆ 1 ಕೋಟಿ ರೂ. ವೆಚ್ಚದಲ್ಲಿ ‌ ಮಾರುಕಟ್ಟೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

­ಪ್ರತಿ ತಾಲೂಕಿಗೆ ಒಂದು ಮಾರುಕಟ್ಟೆ: ಇದಲ್ಲದೇ ಒಳನಾಡು ಮೀನುಗಾರಿಕೆಯಲ್ಲಿ ಪ್ರಮುಖ ಸ್ಥಾನಪಡೆದಿರುವ ‌ ವಿಜಯಪುರ ಜಿಲ್ಲೆಯಲ್ಲಿ ಮೂಲ 5 ತಾಲೂಕುಗಳು ವಿಭಜನೆಗೊಂಡು ಹೊಸದಾಗಿ 8 ತಾಲೂಕುಗಳು ಜನ್ಮ ತಳೆದಿದೆ. ಜಿಲ್ಲೆಯಬಹುತೇಕ ಎಲ್ಲ ತಾಲೂಕುಗಳಲ್ಲೂ ಮೀನುವಾರಿಕೆಸಾಮಾನ್ಯವಾಗಿದ್ದು, ಮೀನು ಪ್ರಿಯರ ಸಂಖ್ಯೆಯೂ ಹೆಚ್ಚುತ್ತಿದೆ.

ಹೀಗಾಗಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲಿ ಮೀನು ಮಾರಾಟಕ್ಕೆ ಪ್ರತ್ಯೇಕ ಮೀನು ಮಾರುಕಟ್ಟೆಸ್ಥಾಪಿಸುವ ಕುರಿತು ಮೀನುಗಾರಿಕೆ ಇಲಾಖೆ ಚಿಂತನೆ ನಡೆಸಿದೆ. ಸದರಿ ಸಮಸ್ಯೆಯನ್ನು ಮೀನುಗಾರಿಕೆ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು,ಈಯೋಜನೆಯೂ ಕೈಗೂಡಿದರೆ ಜಿಲ್ಲೆಯಲ್ಲಿ ಮೀನು ಮಾರುಕಟ್ಟೆ ಮಾದರಿ ಎನಿಸಿ,

ಅಧ್ಯಯನಕ್ಕೆ ಯೋಗ್ಯವಾಗುವ ಸಾಧ್ಯತೆ ಇದೆ. ಒಳನಾಡು ಮೀನುಗಾರಿಕೆಯಲ್ಲಿ ಈ ಬೆಳವಣಿಗೆಮೀನುಗಾರಿಕೆ ಅಭಿವೃದ್ಧಿ ವಿಷಯದಲ್ಲಿ ಆಶಾದಾಯಕಬೆಳವಣಿಗೆ. ಇತರೆ ವಿಷಯಗಳಲ್ಲೂ ಸರ್ಕಾರ, ಮೀನುಗಾರಿಕೆ ಇಲಾಖೆ ಹಾಗೂ ಮೀನುಗಾರಿಕೆ ಅಭಿವೃದ್ಧಿ ನಿಗಮ ಸೇರಿದಂತೆ ಎಲ್ಲರೂ ಸಹಕಾರ ನೀಡುವುದು ಅಗತ್ಯ. ಜಿಲ್ಲೆಯಲ್ಲಿ ಜನರ ಪ್ರತಿನಿಧಿಗಳು ರಾಜಕೀಯ ಇಚ್ಛಾಶಕ್ತಿ ಪ್ರದರ್ಶನ ಮಾಡವುದು ಇಲ್ಲಿ ಪ್ರಮುಖವಾಗಿದೆ.

ಜಿಲ್ಲೆಯಲ್ಲಿ ಬೀದಿ ಬದಿ ಮೀನುಮಾರಾಟಕ್ಕೆಕಡಿವಾಣಹಾಕಲು ಶ್ರಮಿಸಲಾಗುತ್ತಿದೆ. ಮೀನುಗಾರಿಕೆ ಅಭಿವೃದ್ಧಿ ನಿಗಮದಿಂದ ಮೀನು ಮಾರಾಟಕ್ಕೆ ಇಂಡಿಪಟ್ಟಣದಲ್ಲಿ ಆಧುನಿಕ ಸೌಲಭ್ಯಗಳ ಸಹಿತ ಮಾರುಕಟ್ಟೆ ನಿರ್ಮಾಣಕಾರ್ಯ ಪ್ರಗತಿಯಲ್ಲಿದೆ. ವಿಜಯಪುರ ನಗರದಲ್ಲಿಇದೇಯೋಜನೆ ಅನುಷ್ಠಾನಕ್ಕೆ ನಿವೇಶನಕ್ಕೆ ಶೋಧ ನಡೆದಿದೆ. ಪ್ರತಿ ತಾಲೂಕುಕೇಂದ್ರಗಳಲ್ಲಿ ಮೀನು ಮಾರಾಟಕ್ಕೆ ಪ್ರತ್ಯೇಕ ಮಾರುಕಟ್ಟೆ ತೆರೆಯಲು ಚಿಂತನೆ ಇದೆ. – ಶ್ರೀಶೈಲ ಗಂಗನಹಳ್ಳಿಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ

-ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next