Advertisement
ಮಂಗಳೂರಿನ ಪುರಭವನದಲ್ಲಿ ಮಂಗಳವಾರ ನಡೆದ ಬಾಬ್ರಿ ಮಸೀದಿ ಧ್ವಂಸ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ದ್ವಾರಕನಾಥ್ ಈ ರೀತಿ ಹೇಳಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
Related Articles
Advertisement
ಖಾಸಗಿ ಚಾನೆಲ್ ವೊಂದರ ಜತೆ ಮಾತನಾಡಿದ ಅವರು, ನಾನು ಮಂಗಳೂರಿನಲ್ಲಿ ಎಸ್ ಡಿಪಿಐ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಭಾಗವಹಿಸಿ, ಅಯೋಧ್ಯೆ ಕುರಿತು ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ ಕುರಿತು ವಿವರಿಸುತ್ತಿದ್ದೆ. ನಾನು ರಾಮನ ಹುಟ್ಟಿನ ಬಗ್ಗೆ ಏನೂ ಹೇಳಿಲ್ಲ, ನಾನೂ ಕೂಡಾ ಒಂದು ಪರಂಪರೆಯಿಂದ ಬಂದವನು, ನನ್ನದೇ ಆದ ರಾಮನ ದೃಷ್ಟಿಕೋನವಿದೆ. ಅದು ಲೋಹಿಯಾ ಅವರು ಕಂಡಂತಹ ರಾಮ. ಅಷ್ಟೇ ಅಲ್ಲ ನಾನು ಆ ವಿಚಾರ ಸಂಕಿರಣದಲ್ಲಿ ಹುಬ್ಬಳ್ಳಿಯಲ್ಲಿ ಮೌಲ್ವಿಯೊಬ್ಬರು ಗಣೇಶಪೇಟೆ ಪಾಕಿಸ್ತಾನದಂತೆ ಕಾಣಿಸುತ್ತಿದೆ ಎಂಬ ಹೇಳಿಕೆಯನ್ನು ಖಂಡಿಸಿದ್ದೆ. ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದವರು ಹಿಂದುಗಳಲ್ಲ, ಅವರದ್ದು ಕೆಡಹುವ ಧರ್ಮ. ತಾಲಿಬಾನ್ ನಲ್ಲಿ ಬುದ್ಧನ ಪ್ರತಿಮೆಯನ್ನು ಒಡೆದವರು ಕೂಡಾ ಅದೇ ಧರ್ಮದವರು ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
ದ್ವಾರಕನಾಥ್ ವಿರುದ್ಧ ಬಂಟ್ವಾಳದಲ್ಲಿ ದೂರು ದಾಖಲು:
ಮಂಗಳೂರಿನಲ್ಲಿ ಪ್ರಗತಿಪರ ಚಿಂತಕ ದ್ವಾರಕನಾಥ್ ಅವರು ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಗಣೇಶ್ ಕಲ್ಲಡ್ಕ ಅವರು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.