Advertisement

Belagavi ರಾಜ್ಯದಲ್ಲಿ ವಿದ್ಯುತ್‌ ಕೊರತೆ ಇಲ್ಲ: ಕೆ.ಜೆ.ಜಾರ್ಜ್‌

10:44 PM Dec 11, 2023 | Team Udayavani |

ಬೆಳಗಾವಿ: ರಾಜ್ಯದಲ್ಲಿ ವಿದ್ಯುತ್‌ ಕೊರತೆ ಇಲ್ಲ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಏಳು ತಾಸುಗಳ ವಿದ್ಯುತ್‌ ನೀಡಿಕೆಗೆ ಸರಕಾರ ಬದ್ಧವಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.

Advertisement

ವಿಧಾನ ಪರಿಷತ್‌ನಲ್ಲಿ ನಿಯಮ 68ರ ಅಡಿಯಲ್ಲಿ ಬರದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಮಳೆಯ ತೀವ್ರ ಕೊರತೆಯಿಂದಾಗಿ ವಿದ್ಯುತ್‌ ಮೇಲಿನ ಬೇಡಿಕೆ 7,500 ಮೆಗಾವ್ಯಾಟ್‌ನಿಂದ 16,500 ಮೆಗಾವ್ಯಾಟ್‌ಗೆ ಹೆಚ್ಚಳವಾಯಿತು. ಮಳೆಗಾಲದಲ್ಲಿ ಉಷ್ಣ ವಿದ್ಯುತ್‌ ಸ್ಥಾವರಗಳ ವಾರ್ಷಿಕ ನಿರ್ವಹಣೆಗೆ ನೀಡಲಾಗಿದ್ದರಿಂದ ಉತ್ಪಾದನೆ ಇಲ್ಲವಾಗಿತ್ತು. ಪವನ ಹಾಗೂ ಸೌರಶಕ್ತಿ ವಿದ್ಯುತ್‌ ಉತ್ಪಾದನೆಯೂ ನಿರೀಕ್ಷಿತವಾಗಿ ಬರಲಿಲ್ಲ ಇದರಿಂದ ವಿದ್ಯುತ್‌ ಕೊರತೆ ಆಗಿತ್ತು.

ಕೃಷಿ ಪಂಪ್‌ಸೆಟ್‌ಗಳಿಗೆ ಸತತ ಐದು ತಾಸುಗಳ ವಿದ್ಯುತ್‌ ನೀಡಿಕೆಗೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದರಿಂದ, ಹೊರ ರಾಜ್ಯಗಳಿಂದ ವಿದ್ಯುತ್‌ ಖರೀದಿ ಮಾಡಲಾಗಿದೆ. ಕೂಡಗಿ ಉಷ್ಣ ವಿದ್ಯುತ್‌ ಸ್ಥಾವರಿಂದ ಕೇಂದ್ರ ಗ್ರಿಡ್‌ಗೆ ನೀಡುತ್ತಿದ್ದ 150 ಮೆಗಾವ್ಯಾಟ್‌ ವಿದ್ಯುತ್‌ ನೀಡಿಕೆಯನ್ನು ಹಿಂಪಡೆಯಲಾಗಿದ್ದು, ಈಗ ವಿದ್ಯುತ್‌ ಕೊರತೆ ಇಲ್ಲ. ಕೃಷಿ ಪಂಪ್‌ಸೆಟ್‌ಗಳಿಗೆ ಸತತ ಏಳು ತಾಸು ವಿದ್ಯುತ್‌ ನೀಡಲು ಸಿದ್ಧರಿದ್ದೇವೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next