Advertisement
ಕೋವಿಡ್ ಸೋಂಕಿನ ಒಂದು ಮತ್ತು ಎರಡನೇ ಅಲೆಯ ಆರ್ಭಟಕ್ಕೆ ದಾಂಡೇಲಿ-ಜೋಯಿಡಾದ ಪ್ರವಾಸೋದ್ಯಮ ಚಟುವಟಿಕೆ ಸೈಲೆಂಟಾಗಿ ಯಾತನೆಯನ್ನು ಅನುಭವಿಸಿತ್ತು. ದಾಂಡೇಲಿ-ಜೋಯಿಡಾದಲ್ಲಿ ಪ್ರವಾಸೋದ್ಯಮವನ್ನೇ ನಂಬಿ ಬದುಕು ಕಟ್ಟಿಕೊಂಡವರ ಬದುಕು ಮೂರಾ ಬಟ್ಟೆಯಾಗಿದೆ ಎಂಬಂತಾಗಿದೆ.
Related Articles
Advertisement
ಪ್ರವಾಸೋದ್ಯಮ ಚಟುವಟಿಕೆಗೆ ಜೀವಕಳೆ ಬರುತ್ತಿದ್ದಂತೆಯೆ ಮತ್ತೇ ಕೋವಿಡ್ ಮೂರನೆ ಅಲೆಯ ಕಾಟ ಎಂಬಂತೆ ರಾಪ್ಟಿಂಗ್, ಜಲಕ್ರೀಡೆಯನ್ನು ಸ್ಥಗಿತಗೊಳಿಸಲಾಗಿದೆ. ಪರಿಣಾಮವಾಗಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖ ಕಂಡಿದೆ. ಮತ್ತೇ ಪ್ರವಾಸೋದ್ಯಮ ಚಟುವಟಿಕೆ ಹಿನ್ನಡೆಯನ್ನು ಕಂಡುಕೊಳ್ಳಲು ಆರಂಭವಾಗಿದೆ. ಈ ಭಾಗದಲ್ಲಿ ರಾಪ್ಟಿಂಗ್, ಜಲಕ್ರೀಡೆಯೆ ಪ್ರವಾಸೋದ್ಯಮಕ್ಕೆ ಮೂಲ ಆಧಾರ. ಅದಕ್ಕಾಗಿಯೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅದೇ ಇಲ್ಲ ಅಂದ ಮೇಲೆ ಪ್ರವಾಸಿಗರು ಬರುವುದಾದರೂ ಹೇಗೆ ಎಂಬ ಚಿಂತೆ ಪ್ರವಾಸೋದ್ಯಮ ಚಟುವಟಿಕೆಯಲ್ಲಿ ತೊಡಗಿಕೊಂಡವರದ್ದಾಗಿದೆ.
ಅಂದ ಹಾಗೆ ಬೆಂಗಳೂರಿನ ವಂಡರ್ಲಾದಲ್ಲಿ ಜಲಕ್ರೀಡೆಗೆ ಅನುಮತಿಯನ್ನು ನೀಡಲಾಗಿದೆ. ಇನ್ನೂ ಮುಂದುವರಿದು ಹೇಳುವುದಾದರೇ ಶಾಲೆಗಳ ಪ್ರಾರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಈವರೇಗೆ ಈ ಭಾಗದಲ್ಲಿ ಪ್ರವಾಸೋದ್ಯಮದಿಂದ ಒಂದೆ ಒಂದು ಕೋವಿಡ್ ಸೊಂಕು ದೃಢವಾಗದಿದ್ದರೂ ಕೋವಿಡ್ ನೆಪ ಹೇಳಿ ರಾರ್ಪ್ಟಿಂಗ್, ಜಲಕ್ರೀಡೆಯನ್ನು ಪುನಾರಂಭಿಸಲು ಈವರೆಗೆ ಅವಕಾಶ ನೀಡಿಲ್ಲ.
ಕೋವಿಡ್ ಮೊದಲನೆ ಅಲೆ ಮತ್ತು ಎರಡನೆ ಅಲೆ ಮಧ್ಯೆದಲ್ಲಿ ಸುಮಾರು ಮೂರರಿಂದ ನಾಲ್ಕು ತಿಂಗಳು ದೇಶದಾದ್ಯಂತ ವಾಣಿಜ್ಯ ಚಟುವಟಿಕೆಗಳು ಗರಿಗೆದರಿತ್ತು. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಯಿಯವರೇ, ಇತ್ತೀಚೆಗೆ ನೀಡಿದ ಹೇಳಿಕೆಯ ಪ್ರಕಾರ ನಮ್ಮ ರಾಜ್ಯವು ಎರಡನೇ ಕೋವಿಡ್ ಅಲೆಯ ಅಂತಿಮ ಘಟ್ಟದಲ್ಲಿದೆ ಎಂದು ಈಗಾಗಲೇ ಹೇಳಿದ್ದಾರೆ. ಮೂರನೇ ಅಲೆಯ ಬಗ್ಗೆ ಇನ್ನೂ ಅನಿಶ್ಚಿತತೆ ಇದ್ದರೂ ಪ್ರವಾಸೋದ್ಯಮ ಚಟುವಟಿಕೆಗೆ ಮಾತ್ರವೇ ನಿರ್ಬಂಧ ಹೇರಿರುವುದು ಎಷ್ಟು ಸರಿ?. ಈಗಿರುವ ಕೊರೊನಾ ಪ್ರಕರಣಗಳ ಇಳಿಕೆಯಿದ್ದರೂ ರಾಪ್ಟಿಂಗ್, ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ನೀಡದಿರುವುದರಿಂದ ಪ್ರವಾಸೋದ್ಯಮವನ್ನೆ ನಂಬಿರುವ ದಾಂಡೇಲಿ-ಜೊಯಿಡಾ ಸುತ್ತಮುತ್ತಲಿನ ಸಾವಿರಾರು ಕುಟುಂಬಗಳಿಗೆ ಮತ್ತೇ ಸಂಕಷ್ಟ ಎದುರಾಗಿದೆ.
ರಾಜಕೀಯ ಪಕ್ಷಗಳ ಯಾತ್ರೆಗಳಿಗೆಲ್ಲ ಅವಕಾಶ ನೀಡಲಾಗುತ್ತಿರುವ ಈ ಸಂದರ್ಭದಲ್ಲಿ ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ನಡೆಸುವ ರಾಪ್ಟಿಂಗ್ ಜಲಕ್ರೀಡೆಗೆ ಕೂಡಲೆ ಅನುಮತಿಯನ್ನು ನೀಡಬೇಕೆಂಬ ಮನವಿ ಪ್ರವಾಸೋದ್ಯಮಿಗಳ ಜೊತೆ ಪ್ರವಾಸೋದ್ಯಮವನ್ನೆ ನಂಬಿರುವ ಕೂಲಿಕಾರ್ಮಿಕರದ್ದಾಗಿದೆ.
ಇನ್ನೂ ಜನತೆಯ ಮನವಿಗೆ ತಡವರಿಯದೇ ಸ್ಪಂದಿಸುವ ಜಿಲ್ಲೆಯ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ ಅವರು ಈ ಬಗ್ಗೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿ, ಶೀಘ್ರದಲ್ಲೆ ರಾಪ್ಟಿಂಗ್, ಜಲಕ್ರೀಡೆಗೆ ಅನುಮತಿ ಕೊಡಿಸಲಿದ್ದಾರೆ ಎಂಬ ವಿಶ್ವಾಸ ಪ್ರವಾಸೋದ್ಯಮ ಚಟುವಟಿಕೆಯಲ್ಲಿ ತೊಡಗಿಕೊಂಡವರದ್ದಾಗಿದೆ. ಪ್ರವಾಸೋದ್ಯಮಿಗಳು ಮತ್ತು ಈ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಟ್ಟ ನಂಬಿಕೆಯನ್ನು ಉಳಿಸುವ ಜವಾಬ್ದಾರಿ ಶಿವರಾಮ ಹೆಬ್ಬಾರ ಅವರ ಮೇಲಿದೆ.
ಇದನ್ನೂ ಓದಿ : ಸ್ಟೇಜ್ ಕ್ಯಾರೇಜ್, ಕಾಂಟ್ರಾಕ್ಟ್ ಕ್ಯಾರೇಜ್ ವಾಹನಗಳ ತೆರಿಗೆ ಪಾವತಿಗೆ ಒಂದು ತಿಂಗಳ ಕಾಲಾವಕಾಶ