Advertisement

ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಿಗೆ ಕರ್ನಾಟಕದಲ್ಲಿ ಇಲ್ಲ ಪಿಂಚಣಿ

01:17 PM Oct 05, 2020 | Suhan S |

 

Advertisement

ಕಡಬ, ಅ. 4: ದೇಶದಲ್ಲಿ ಜಾರಿಯಾದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ  ಹೋರಾಟ ನಡೆಸಿ ಜೈಲುವಾಸ ಅನುಭವಿಸಿದವರಿಗೆ ಪಿಂಚಣಿ ದೊರೆಯಬೇಕು ಎನ್ನುವ ಬೇಡಿಕೆಗೆ ರಾಜ್ಯದಲ್ಲಿ ಇನ್ನೂ  ಮನ್ನಣೆ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ  ತುರ್ತು ಪರಿಸ್ಥಿತಿ ಹೋರಾಟಗಾರರ ಅಖೀಲ ಭಾರತೀಯ ಸಂಘಟನೆಯಾದ ಲೋಕ ತಂತ್ರ ಸೇನಾನಿ ಸಂಘವು ಪ್ರಯತ್ನ ನಡೆಸುತ್ತಲೇ ಬಂದಿದೆ.

1975ರ ಜೂ. 26ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿ  ಕೊನೆಯಾದದ್ದು 1977ರ ಜು. 18ರಂದು. ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಅವಿಭಜಿತ ದ.ಕ. ಜಿಲ್ಲೆಯಿಂದಲೂ ಸಾಕಷ್ಟು ಮಂದಿ ಭಾಗವಹಿಸಿದ್ದರು. ದ.ಕ. ಜಿಲ್ಲೆಯ 181 (8 ಮಂದಿ ಮೃತಪಟ್ಟಿದ್ದಾರೆ), ಉಡುಪಿ ಜಿಲ್ಲೆಯಿಂದ ಭಾಗವಹಿಸಿದ್ದ ಸುಮಾರು 27 ಮಂದಿಯ ವಿವರವನ್ನು ಲೋಕ ತಂತ್ರ ಸೇನಾನಿ ಸಂಘವು ಸಂಗ್ರಹಿಸಿದೆ. ಇವರೆಲ್ಲ ಮೀಸಾ (ಮೈಂಟೆನೆನ್ಸ್‌ ಆಫ್‌ ಇಂಟರ್ನಲ್‌ ಸೆಕ್ಯುರಿಟಿ ಆ್ಯಕ್ಟ್) ಹಾಗೂ ಡಿಐಆರ್‌ (ಡಿಫೆನ್ಸ್‌ ಇಂಡಿಯಾ ರೂಲ್‌) ಕಾಯಿದೆಯಡಿ ಶಿಕ್ಷೆ ಅನುಭವಿಸಿದವರಾಗಿದ್ದಾರೆ. ಈ ರೀತಿ ರಾಜ್ಯದಲ್ಲಿ ಸುಮಾರು 8,500 ಮಂದಿ ಶಿಕ್ಷೆ ಅನುಭವಿಸಿದವರಿದ್ದು, ಅವರೆಲ್ಲರ ವಿವರ ಸಂಗ್ರಹಿಸಲಾಗಿದೆ.

ಈ ಹೋರಾಟವನ್ನು ಎರಡನೇ ಸ್ವಾತಂತ್ರ್ಯ ಸಂಗ್ರಾ ಮವೆಂದು ಪರಿಗಣಿಸಿ ಪಿಂಚಣಿ ಸೇರಿದಂತೆ ಹಲವು ಸೌಲಭ್ಯವನ್ನು  ಒದಗಿಸಬೇಕೆಂದು ಮನವಿ ಸಲ್ಲಿಸಿದ್ದೇವೆ. ಹೋರಾಟದಲ್ಲಿ ಪಾಲ್ಗೊಂಡವರ ಭಾವಚಿತ್ರ, ಆಧಾರ್‌ ಕಾರ್ಡ್‌, ಜೈಲುವಾಸ ಅನುಭವಿಸಿದ್ದ ಸಂದರ್ಭ ದಲ್ಲಿ ಅವರೊಂದಿಗಿದ್ದ ಇಬ್ಬರನ್ನು ಸಾಕ್ಷಿಗಳಾಗಿ ಪರಿಗಣಿಸುವುದು ಸೇರಿದಂತೆ ಸರಕಾರಕ್ಕೆ ಬೇಕಾದ ದಾಖಲೆಗಳನ್ನು ಸಂಘ ಸಂಗ್ರಹಿಸಿದೆ. ಇವರ್ಯಾರೂ ಪಿಂಚಣಿ ಆಸೆಯಿಂದ ಹೋರಾಟ ಮಾಡಿದವರಲ್ಲ. ದೇಶಕ್ಕಾಗಿ ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವಿಗಾಗಿ ಹೋರಾಡಿದವರು.  ವೃದ್ಧಾಪ್ಯದ ಈ ಸಮಯದಲ್ಲಿ ಪಿಂಚಣಿ ದೊರೆತರೆ ಅವರಿಗೆ ಅನು ಕೂಲವಾದೀತು ಎನ್ನುವ ಆಶಯದಿಂದ ಲೋಕ ತಂತ್ರ ಸೇನಾನಿ ಸಂಘ ಪ್ರಯತ್ನ ಮುಂದುವರಿಸಿದೆ ಎನ್ನುತ್ತಾರೆ ಸಂಘದ ರಾಜ್ಯ ಉಪಾಧ್ಯಕ್ಷ ನಾರಾಯಣ ಗಟ್ಟಿ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೋರಾಟ ನಡೆಸಿ ಜೈಲು ಶಿಕ್ಷೆ ಅನುಭವಿಸಿರುವವರಿಗೆ 12 ರಾಜ್ಯಗಳಲ್ಲಿ ಪಿಂಚಣಿ, ಇತರ ಸವಲತ್ತುಗಳು ಸಿಗುತ್ತಿವೆ. ಛತ್ತೀಸ್‌ಗಢ ಸರಕಾರದಿಂದ 25 ಸಾವಿರ, ಮಧ್ಯಪ್ರದೇಶದಲ್ಲಿ   25 ಸಾವಿರ, ರಾಜಸ್ಥಾನದಲ್ಲಿ 13,200, ಗುಜರಾತ್‌ನಲ್ಲಿ 12 ಸಾವಿರ, ಹರಿಯಾಣದಲ್ಲಿ 10 ಸಾವಿರ ರೂ. ಪಿಂಚಣಿಯನ್ನು ಪ್ರತಿ ತಿಂಗಳು ನೀಡಲಾಗುತ್ತಿದೆ.

Advertisement

ಬಿಜೆಪಿ ಪ್ರಣಾಳಿಕೆಯಲ್ಲಿ ಪಿಂಚಣಿ ಭರವಸೆ :  ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ  ಪ್ರಣಾಳಿಕೆಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧದ  ಹೋರಾಟಗಾರರಿಗೆ ಪಿಂಚಣಿ ನೀಡುವುದಾಗಿ ಪ್ರಕಟಿಸಿರುವುದು ಹೋರಾಟಗಾರರಲ್ಲಿ ಹೊಸ ಭರವಸೆ ಮೂಡಿಸಿತ್ತು. ಸಂಸದ ನಳಿನ್‌ಕುಮಾರ್‌ ಕಟೀಲು, ಮಂಗಳೂರಿನ ಶಾಸಕರ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸಂಘವು ಮನವಿ ಸಲ್ಲಿಸಿ ಭರವಸೆಯ ವಿಚಾರವನ್ನು ನೆನಪಿಸಿತ್ತು. ಮುಖ್ಯಮಂತ್ರಿ ಸಂಘದ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿದ್ದರು. ಆದರೆ ಇನ್ನೂ ಕಾರ್ಯಗತವಾಗಿಲ್ಲ. ಮುಖ್ಯಮಂತ್ರಿ ಪಕ್ಷದ ಪ್ರಣಾಳಿಕೆಯ ಭರವಸೆಯನ್ನು ಈಡೇರಿಸಬೇಕಿದೆ ಎನ್ನುತ್ತಾರೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೋರಾಟ ನಡೆಸಿ ಜೈಲು ಶಿಕ್ಷೆ ಅನುಭವಿಸಿರುವ ಕಡಬದ ಬಾಲಕೃಷ್ಣ ಭಟ್‌ ಮೂಜೂರುಕಟ್ಟ.

ಬಿಜೆಪಿ ತನ್ನ ಚುನಾವಣ ಪ್ರಣಾಳಿಕೆಯಲ್ಲಿ  ಪಿಂಚಣಿ ವಿಚಾರ ಉಲ್ಲೇಖೀಸಿದ್ದ  ಕಾರಣದಿಂದಾಗಿ ನಾವು ಹೆಚ್ಚಿನ ಮುತುವರ್ಜಿ ವಹಿಸಿ ಹೋರಾಟಗಾರರನ್ನು ಗುರುತಿಸಿ ಅಗತ್ಯ ಮಾಹಿತಿ ಕಲೆಹಾಕಿದ್ದೇವೆ. ದೇಶದ 12 ರಾಜ್ಯಗಳಲ್ಲಿ ಪಿಂಚಣಿ ನೀಡಲಾಗುತ್ತಿದೆ. ಮುಖ್ಯಮಂತ್ರಿಗಳು ಶೀಘ್ರವಾಗಿ ಸ್ಪಂದಿಸಿ ಬೇಡಿಕೆ ಯನ್ನು ಈಡೇರಿಸಬೇಕೆಂಬುದು ನಮ್ಮ ಆಗ್ರಹ. -ನಾರಾಯಣ ಗಟ್ಟಿ, ರಾಜ್ಯ ಉಪಾಧ್ಯಕ್ಷರು, ಲೋಕ ತಂತ್ರ ಸೇನಾನಿ ಸಂಘ

 

ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next