Advertisement

ಪರೀಕ್ಷೆಯಲ್ಲಿ ಭಾರತದ ಭೂಪಟದಲ್ಲಿ ಕಾಶ್ಮೀರದ ಒಂದು ಭಾಗವೇ ಇಲ್ಲ!

12:24 PM Mar 25, 2022 | Team Udayavani |

ಪುತ್ತೂರು : ಕರ್ನಾಟಕ ಪಿಯು ಶಿಕ್ಷಣ ಮಂಡಳಿಯು‌ ನಡೆಸಿದ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಭಾರತದ ಭೂಪಟದಲ್ಲಿ ಕಾಶ್ಮೀರದ ಒಂದು ಭಾಗವನ್ನೇ ಇಲ್ಲದಂತೆ ತೋರಿಸಿರುವ ನಕ್ಷೆಯನ್ನು ನೀಡಿರುವುದು ಈಗ ಚರ್ಚೆಗೊಳಗಾಗುತ್ತಿದೆ.

Advertisement

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಾರ್ಚ್ 19 ರಂದು ನಡೆದ ಇತಿಹಾಸ ವಿಷಯದ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ, ಇಲಾಖೆಯು ನೀಡಿದ ಭಾರತದ ಭೂಪಟದಲ್ಲಿ ಅರ್ಧ ಕಾಶ್ಮೀರದ ಭಾಗ ಇಲ್ಲದೆ ಇರುವುದು ಬೆಳಕಿಗೆ ಬಂದಿದೆ.

ಪ್ರಶ್ನೆ ಪತ್ರಿಕೆಯಲ್ಲಿ ಐದು ಐತಿಹಾಸಿಕ ಸ್ಥಳಗಳನ್ನು ಗುರುತಿಸಲು ಮತ್ತು ಸ್ಥಳಗಳ ಬಗ್ಗೆ ಎರಡು ವಾಕ್ಯಗಳಲ್ಲಿ ವಿವರಣೆ ಬರೆಯಲು ಸೂಚಿಸಲಾಗಿತ್ತು. ಆದರೆ ಆ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಬಿಟ್ಟು ಹೋಗಿರುವುದು ಕಂಡುಬಂದಿದೆ.

ಪೂರ್ವಸಿದ್ಧತಾ ಪ್ರಶ್ನೆ ಪತ್ರಿಕೆಗಳನ್ನು ಪಿಯು ಇತಿಹಾಸ ಉಪನ್ಯಾಸಕರ ಸಂಘದ ಮೇಲ್ವಿಚಾರಣೆಯಲ್ಲಿ ತಯಾರಿಸಲಾಗುತ್ತದೆ. ಪಿಯು ಮಂಡಳಿ ನಿರ್ದೇಶನದಂತೆ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಸಂಘಕ್ಕೆ ಪತ್ರಿಕೆ ತಯಾರಿಯ ಕೆಲಸ ನೀಡಲಾಗಿದೆ. ದಕ್ಷಿಣ ಕನ್ನಡದಲ್ಲಿ ಮಾತ್ರ ಈ ರೀತಿಯಾಗಿದ್ದು , ಇತರೆ ಜಿಲ್ಲೆಗಳಲ್ಲಿ ಪ್ರಶ್ನೆ ಪತ್ರಿಕೆಗಳಲ್ಲಿ ಕಾಶ್ಮೀರದ ಸಂಪೂರ್ಣ ನಕ್ಷೆ ಇದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next