ಎಲ್ಲರಿಗೂ ಪ್ರೀತಿಯನ್ನು ಕೊಟ್ಟೆ ಆದರೆ ಎಲ್ಲರೂ ನಿನಗೆ ಹೆಚ್ಚು ನೋವನ್ನೇ ಉಣಪಡಿಸಿದರು. ಅವ್ವ ಎಂಬ ಪದಕ್ಕೆ ಅರ್ಥ ಎಂದು ಹೇಳುವುದಾದರೆ ಅದು ನನ್ನಜ್ಜಿ ಎಂದು ಹೆಮ್ಮೆಯಿಂದ ಹೇಳುತ್ತೇನೆ, ಇಂದಿಗೂ ಕೂಡ ಅವರು ಒಬ್ಬರಿಗೂ ಎದುರು ಮಾತಾಡಿಲ್ಲ, ನಾ ಕಂಡ ಅತೀ ಮುಗ್ಧ ಜೀವಿ ನನ್ನವ್ವ.
ಅವರೂ ಕಂಡ ನೋವುಗಳು ಅಷ್ಟಿಷ್ಟಲ್ಲ. ತನ್ನ ಯಜಮಾನನನ್ನು ಕಳೆದುಕೊಂಡ ನಂತರ ಮಕ್ಕಳಿಬ್ಬರು ಮನೆಯೊಂದು 2 ಬಾಗಿಲು ಆಯಿತು. ನಮ್ಮಮ್ಮ ಅವರ ಒಬ್ಬಳೇ ಮಗಳು. ನನ್ನಮ್ಮ ಅವರಿಗಾಗಿಯೇ ಅವರ ಹತ್ತಿರವೇ ಇದ್ದರೋ ಇಲ್ಲವೋ ಆದರೆ ನನ್ನವ್ವನ ಮಕ್ಕಳು ಅಜ್ಜಿ ಇರುವ ತನಕ ಅಜ್ಜಿ ಜೊತೆಯೇ ಇರಬೇಕು ಎಂಬ ಆಸೆ ಅವರದು.
ಹಾಗಾಗಿ ಅವರ ಹತ್ತಿರವೇ ಇದ್ದೇವೆ, ಒಮ್ಮೆಯೂ ಕೂಡ ಸೊಸೆಯಂದಿರಿಗೆ ಎದುರು ಮಾತನಾಡಿದವರಲ್ಲ. ಆದರೆ ಪ್ರತಿದಿನ ತಮ್ಮ ಮಾತಿನಿಂದ ಅಜ್ಜಿಗೆ ನೋವನ್ನು ನೀಡಿದರು ನನ್ನಮ್ಮ ಪ್ರತಿದಿನ ಅವರು ಇಷ್ಟು ಮುಗ್ಧ ಜೀವಿಯಾಗಿದ್ದಕ್ಕೆ ಇಷ್ಟು ಮಾತುಗಳನ್ನು ಕೇಳಿಸಿಕೊಂಡು ಸುಮ್ಮನಿರುವುದು ಎಂಬುದಾಗಿ ಹೇಳಿದರು.
ನಾನು ಅದನ್ನು ಒಮ್ಮೆ ಕೇಳಿಸಿಕೊಂಡಾಗ ತುಂಬಾ ನೋವಾಯಿತು. ಆಗಿನವರು ಅಷ್ಟು ಮುಗ್ಧರ ಎಂಬುದಾಗಿ ಅನಿಸಿತು ಅಂದೆ ಅನಿಸಿತು ಜೀವನದಲ್ಲಿ ಮುಗ್ಧತೆ ಇರಬೇಕು ಆದರೆ ನಮ್ಮನೆ ನಾವು ಕಳೆದುಕೊಳ್ಳುವಷ್ಟು ಇರಬಾರದು ಎಂದು ಯಾಕೆ ಇಂದು ಇದನ್ನು ಹೇಳುತ್ತಿದ್ದೇನೆ ಎಂದರೆ ಎಲ್ಲೆಡೆ ನಾ ಕೇಳಿರುವಂತೆ ಅತ್ತೆಯಿಂದ ಮನನೊಂದ ಗೃಹಿಣಿಯರ ಆತ್ಮಹತ್ಯೆ ಹಿಂಸೆ ಈಗೆಲ್ಲ ಆದರೆ ನಾ ಕಣ್ಣಾರೆ ನೋಡುತ್ತಿರುವ ಸತ್ಯ ಏನೆಂದರೆ ಸೊಸೆಯವರು ಕೂಡ ಹೀಗೆ ಇರುತ್ತಾರೆ ಎಂದು ನಾ ಕಂಡ ಹಾಗೆ ಇಂದಿಗೂ ಕೂಡ ಒಬ್ಬರ ಹತ್ತಿರ ಜಗಳ ಆಡಿದರಲ್ಲ.
ಅವರು ಸೊಸೆಯಂದಿರ ಭಯಕ್ಕೆ ಕೆಲವೊಮ್ಮೆ ಊಟವನ್ನು ಕೂಡ ತ್ಯಜಿಸಿದ್ದಾರೆ,ಭಯಕ್ಕೆ ನಮ್ಮ ಮನೆಗೂ ಕೂಡ ಬಂದಿದ್ದಾರೆ ನಾ ಹೇಳುತ್ತಿದ್ದೆ “ಅವ್ವ” ನೀ ಒಂದು ಬಾರಿ ತಿರುಗಿ ನಿಲ್ಲು ಎಂದು ಅವರೇ ಸುಮ್ಮನಾಗುತ್ತಾರೆ ಅಂತ ಆದರೆ ಅವ್ವ ಹೇಳುತ್ತಿದ್ದರು ನನ್ನ ಗಂಡು ಮಕ್ಕಳೆ ಅವರ ಹೆಂಡತಿಯರಿಗೆ ಯಾಕೆ ಈ ರೀತಿ ಮಾಡುತ್ತೀರಾ ಎಂದು ಒಮ್ಮೆಯೂ ಕೇಳಿಲ್ಲ ಇನ್ನು ನಾ ಹೇಗೆ ಕೇಳಲಿ ಅಂತ ಅದಕ್ಕೆ ನಂಗೆ ಅನಿಸಿತು ಅವ್ವ ನಿನ್ನಂತೆ ಯಾರು ಇಲ್ಲ…..
-ರಂಜಿತಾ ಹೆಚ್.ಕೆ.
ಹಾಸನ