Advertisement
ಎಸೆಸೆಲ್ಸಿ, ಪಿಯುಸಿಗೆ ಒಂದೇ ಮಂಡಳಿಯಡಿ ಪರೀಕ್ಷೆ ನಡೆಸುವ ಬಗ್ಗೆ ಹಲವು ವರ್ಷಗಳ ಹಿಂದೆಯೇ ಕೇಂದ್ರ ಸರಕಾರ ಪ್ರಸ್ತಾವಿಸಿತ್ತು. ಕರ್ನಾಟಕ ಮತ್ತು ರಾಜಸ್ಥಾನ ಬಿಟ್ಟು ಉಳಿದೆಲ್ಲ ಕಡೆಗಳಲ್ಲಿ ಇದು ಕಾರ್ಯರೂಪದಲ್ಲಿದೆ. ಸಿದ್ದರಾಮಯ್ಯ ಸರಕಾರವಿದ್ದಾಗ ಈ ಬಗ್ಗೆ ಚರ್ಚೆಯಾಗಿ ಅನುದಾನ ತೆಗೆದಿಡಲಾಗಿತ್ತು. ಈಗ ಅಂಥ ಪ್ರಸ್ತಾವವಿಲ್ಲ ಎಂದಿದ್ದಾರೆ.
ಕೇಂದ್ರೀಯ ಪಠ್ಯಕ್ರಮ ಮಾದರಿಯಡಿ 9, 10, 11 ಮತ್ತು 12ನೇ ತರಗತಿಗಳನ್ನು ಒಟ್ಟಿಗೆ ನಡೆಸುವುದು ಇದರ ಉದ್ದೇಶವಾಗಿದ್ದು, ಸೀನಿಯರ್ ಸೆಕೆಂಡರಿ ಶಿಕ್ಷಣ ಎಂದು ಹೆಸರಿಸಲಾಗುತ್ತದೆ. ಈ ಮಾದರಿ ಅನುಷ್ಠಾನಗೊಂಡರೆ ಎಸೆಸೆಲ್ಸಿ, ಪಿಯುಸಿ ಪ್ರತ್ಯೇಕ ಪರೀಕ್ಷಾ ಮಂಡಳಿಗಳಡಿ ಪರೀಕ್ಷೆ ನಡೆಯುವುದಿಲ್ಲ. ಎರಡೂ ಮಂಡಳಿಗಳನ್ನು ವಿಲೀನಗೊಳಿಸಿ ಒಂದೇ ಮಂಡಳಿ ರಚಿಸಿ 10ನೇ, 12ನೇ ತರಗತಿ ಪರೀಕ್ಷೆ ಎಂಬುದಾಗಿ ನಡೆಸಲಾಗುತ್ತದೆ. ಈಗ ಪ್ರೌಢ ಶಿಕ್ಷಣ ವ್ಯಾಪ್ತಿಯಲ್ಲಿರುವ 8ನೇ ತರಗತಿ ಪ್ರಾಥಮಿಕ ಶಿಕ್ಷಣಕ್ಕೆ ಸೇರುತ್ತದೆ. ಎಸೆಸೆಲ್ಸಿ ಮತ್ತು ಪಿಯು ಪರೀಕ್ಷಾ ಮಂಡಳಿಗಳನ್ನು ವಿಲೀನಗೊಳಿಸುವ ಪ್ರಸ್ತಾವನೆ ಇದೆಯೇ ವಿನಾ ಈವರೆಗೆ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.
-ಎಸ್. ಸುರೇಶ್‌ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
Related Articles
Advertisement