Advertisement

PM ಮೋದಿ ಸಮನಾದ ನಾಯಕ ಕಾಂಗ್ರೆಸ್‌ನಲ್ಲಿಲ್ಲ: ಬಿಎಸ್‌ವೈ

10:31 PM Mar 16, 2024 | Team Udayavani |

ಕಲಬುರಗಿ: ಪ್ರಧಾನಿ ಮೋದಿ ಅಂಥವರು ಕಾಂಗ್ರೆಸ್‌ನಲ್ಲಿ ಯಾರಿದ್ದಾರೆ. ಅದು ಮುಳುಗುತ್ತಿರುವ ಹಡಗು. ಅದರಿಂದ ಏನೂ ಪ್ರಯೋಜನವಿಲ್ಲ. ಆದ್ದರಿಂದಲೇ ದೇಶದ ಜನರು ಮತ್ತೂಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡುವ ಸಂಕಲ್ಪ ಮಾಡಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ನಗರದ ಎನ್‌ವಿ ಮೈದಾನದಲ್ಲಿ ಶನಿವಾರ ಬಿಜೆಪಿ ಹಮ್ಮಿಕೊಂಡಿದ್ದ ಮೊತ್ತೂಮ್ಮೆ ಮೋದಿ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಕಲಬುರಗಿಯಿಂದ ಲೋಕಸಭೆ ಚುನಾವಣಾ ಪ್ರಚಾರ ಆರಂಭಿಸಿರುವುದು ನಮ್ಮೆಲ್ಲರಿಗೆ ಗೌರವ ತರುವ ಸಂಗತಿ. ಮೋದಿ ರಾಜ್ಯಕ್ಕೆ ಸಾಕಷ್ಟು ಅನುದಾನ ನೀಡಿದ್ದಾರೆ. ಈ ದೇಶದಲ್ಲಿ ಬದಲಾವಣೆ ತರುತ್ತೇವೆ. ದೇಶದಲ್ಲಿ ಬಿಜೆಪಿ ಗಾಳಿ ಬೀಸಿದಂತೆ ಕರ್ನಾಟಕದಲ್ಲೂ ಬಿಜೆಪಿ ಪರ ಗಾಳಿಯಿದೆ. ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿರಬಹುದು.

ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ನಾವು 28ಕ್ಕೆ 28 ಸ್ಥಾನಗಳನ್ನು ಗೆಲ್ಲಬೇಕಿದೆ. ಕಾಂಗ್ರೆಸ್‌ ನಾಯಕರು ಗ್ಯಾರಂಟಿ ಪ್ರಚಾರ ಮಾಡಿಕೊಂಡು ಗೆಲ್ಲುವ ಭ್ರಮೆಯಲ್ಲಿದ್ದಾರೆ. ಕನಸು ಕಾಣುವುದು ಸರಿಯಲ್ಲ. ಅವರಲ್ಲಿ ಸಮರ್ಥ ನಾಯಕತ್ವವೇ ಇಲ್ಲ ಎಂದರೆ ಗೆಲ್ಲುವ ಮಾತು ದೂರ ಎಂದರು.

ಮೋದಿ ಅಧಿಕಾರದಲ್ಲಿ ಉಗ್ರವಾದ ಮಾಯ: ಅಶೋಕ್‌
ಮೋದಿ ಪ್ರಧಾನಿ ಆದ ನಂತರ ಯಾವುದೇ ವಿಧ್ವಂಸಕ ಕೃತ್ಯ ನಡೆಯುತ್ತಿಲ್ಲ. ಭಯೋತ್ಪಾದನೆ ಚಟುವಟಿಕೆಗೆ ಕಡಿವಾಣ ಹಾಕಲಾಗಿದೆ. ಸಂಪೂರ್ಣ ಮಾಯವಾಗಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ನಗರದ ಎನ್‌ವಿ ಮೈದಾನದಲ್ಲಿ ಶನಿವಾರ ಬಿಜೆಪಿ ಹಮ್ಮಿಕೊಂಡಿದ್ದ ಮೊತ್ತೂಮ್ಮೆ ಮೋದಿ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಭಯೋತ್ಪಾದನೆಯ ಹಲವಾರು ಕೃತ್ಯಗಳು ನಡೆದಿವೆ. ಆದ್ದರಿಂದ ಭಾರತಕ್ಕೆ ಮೋದಿ ಪುನಃ ಪ್ರಧಾನಿಯಾಗಲಿ ಎನ್ನುವುದು ಜನತೆಯ ಆಶಯವಾಗಿದೆ. ಲೋಸಕಭೆ ಚುನಾವಣೆ ಮುನ್ನವೇ ಕಾಂಗ್ರೆಸ್‌ ಸೋತು ಹೋಗಿದೆ. ರಾಜ್ಯದ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಹೀಗಾಗ ಯುದ್ಧಕ್ಕೂ ಮುನ್ನವೇ ಶರಣಾಗಿದೆ. ಗ್ಯಾರಂಟಿ ಹೆಸರಿನಲ್ಲಿ ಜನರ ಶ್ರಮ, ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದರು.

Advertisement

ರಾಜ್ಯದಲ್ಲಿ ಸಿದ್ದರಾಮಯ್ಯ ಅನ್ನ ಹಾಕುತ್ತಿಲ್ಲ. ಕನ್ನ ಹಾಕುತ್ತಿದ್ದಾರೆ. ಬರ ಪರಿಹಾರ ನೀಡಿಲ್ಲ. ಏನಿಲ್ಲ.. ಏನಿಲ್ಲ …ನೀರಿಲ್ಲ ನೀರಲ್ಲ ಎನ್ನುವಂತಾಗಿದೆ. ಈಗ ಜನರಿಗೆ ನೀಡುತ್ತಿರುವ 5 ಕೆಜಿ ಅಕ್ಕಿ ಕೇಂದ್ರ ಸರಕಾರದ್ದು. ತಾವು ಕೊಡಬೇಕಿದ್ದ 5 ಕೆಜಿ ಅಕ್ಕಿ ಸಿಕ್ಕಿಲ್ಲ. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅತ್ಯುತ್ತಮ ಮಳೆಯಾಗಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕಾಲಿಡುತ್ತಿದ್ದಂತೆ ಮಳೆ ಹೋಗಿದೆ. ಬರಗಾಲ ಬಿದ್ದಿದೆ. ಇದರಿಂದ ರೈತರ, ದುಡಿಯುವ ಜನರಿಗೆ ಕಷ್ಟ ಎದುರಾಗಿದೆ. ಗ್ಯಾರಂಟಿ ಹೆಸರಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಅಭಿವೃದ್ಧಿಗೆ ಹಣ ನೀಡುತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next