Advertisement

ನಾಮಪತ್ರ ವಾಪಸ್ಸಾತಿಯಲ್ಲಿ ಜೆಡಿಎಸ್‌ ಪಾತ್ರವಿಲ್ಲ

11:44 PM Feb 15, 2020 | Team Udayavani |

ಚನ್ನಪಟ್ಟಣ: ತೆರವಾಗಿರುವ ವಿಧಾನಪರಿ ಷತ್‌ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಬೇ ಕೆಂದು ಕಾಂಗ್ರೆಸ್‌ ತೀರ್ಮಾನ ಮಾಡಿದೆ. ಹಾಗಾಗಿ, ಸ್ವತಂತ್ರ ಅಭ್ಯರ್ಥಿ ನಾಮಪತ್ರ ವಾಪಸ್‌ ಪಡೆದಿರಬಹುದು. ಇದರಲ್ಲಿ ಜೆಡಿಎಸ್‌ ಪಾತ್ರವೇನಿಲ್ಲ ಎಂದು ಮಾಜಿ ಸಿಎಂ ಎಚ್‌. ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

Advertisement

ತಾಲೂಕಿನ ಹುಲುವಾಡಿಯಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ವಿಧಾನ ಪರಿಷತ್‌ ಚುನಾ ವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅನಿಲ್‌ಕುಮಾರ್‌ ಅವರು ಕಣದಿಂದ ಹಿಂದೆ ಸರಿದಿರುವ ಕುರಿತು ಪ್ರತಿಕ್ರಿಯಿಸಿ, ಸಮಾನ ಮನಸ್ಕರ ಮತಗಳನ್ನು ಪಡೆಯಲು ಪ್ರಯತ್ನ ಮಾಡುತ್ತೇನೆ,

ನನಗೆ ಅವಕಾಶ ಕೊಡಿ ಎಂದು ಅನಿಲ್‌ಕುಮಾರ್‌ ಅವರು, ರೇವಣ್ಣ ಅವ ರೊಟ್ಟಿಗೆ ಮಾತನಾಡಿದ್ದರು. ಹೀಗಾಗಿ, ರೇವಣ್ಣ, ನಾಮಪತ್ರ ಸಲ್ಲಿಕೆಗೆ ಅಗತ್ಯವಿರುವ ಶಾಸಕರ ಸಹಿ ಹಾಕಿಸಿಕೊಟ್ಟಿ ದ್ದರು. ಇದೀಗ ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅಭ್ಯ ರ್ಥಿಗೆ ಹೇಳಿದ್ದಾರಂತೆ. ಹಾಗಾಗಿ, ವಾಪಸ್‌ ಪಡೆಯುತ್ತಿರಬಹುದು. ಅದಕ್ಕೂ, ನಮಗೂ ಸಂಬಂಧವಿಲ್ಲ ಎಂದರು.

ಬಿಜೆಪಿ ಅಭ್ಯರ್ಥಿಗೆ ಜೆಡಿಎಸ್‌ನಿಂದಲೂ ಮತ ಬರುತ್ತವೆ ಎಂದು ಸಚಿವರೊಬ್ಬರು ಹೇಳಿದ್ದಾರೆ. ನಮ್ಮ ಅಭ್ಯರ್ಥಿಯೇ ನಾಮಪತ್ರ ವಾಪಸ್‌ ಪಡೆದರೆ ಎಲ್ಲ ಮತಗಳೂ ಕಣದಲ್ಲಿ ಉಳಿದವರಿಗೇ ಬರುತ್ತವೆ. ಅದರಲ್ಲಿ ಹೆಚ್ಚುಗಾರಿಕೆ ಏನಿಲ್ಲ. ಎಂಎಲ್‌ಸಿ ಚುನಾವಣೆ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಬೆಂಬಲಿಸಿ ಎಂದಿದ್ದರು ಬೆಂಬಲಿಸುವುದಾಗಿ ಹೇಳಿದ್ದೆ ಅಷ್ಟೇ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next