Advertisement
ರಾಜ್ಯದಲ್ಲಿ ಕೊರೊನಾ ನಿರ್ವಹಣೆಗಾಗಿ ರಚಿಸ ಲಾಗಿರುವ ಪಂಚ ಸಚಿವರಲ್ಲಿ ಒಬ್ಬ ರಾಗಿ ರುವ ಹಾಸಿಗೆ ವ್ಯವಸ್ಥೆ ಹೊಣೆಗಾರಿಕೆ ವಹಿಸಿಕೊಂಡಿರುವ ಕಂದಾಯ ಸಚಿವ ಆರ್.ಅಶೋಕ್ ಅವರು “ಉದಯವಾಣಿ’ ಜತೆ ಮಾತಾಡಿದ ವಿವರ ಇಲ್ಲಿದೆ.
ನಾವು ಹೊಣೆಗಾರಿಕೆ ತೆಗೆದುಕೊಂಡ ಅನಂತರ ರಾಜ್ಯದಲ್ಲಿ 4,000 ಹಾಸಿಗೆ ಸಾಮರ್ಥ್ಯ ಹೆಚ್ಚಿಸಿದ್ದು ಅದರಲ್ಲಿ ಆಕ್ಸಿಜನ್ ಹಾಸಿಗೆ ಪ್ರಮಾಣವೇ ಹೆಚ್ಚು. ಹೀಗಾಗಿ, ಈಗ ಆಕ್ಸಿಜನ್ ಹಾಸಿಗೆಗೆ ಕೊರತೆ ಇಲ್ಲದಂತಾಗಿದೆ. -ಇದ್ದಕ್ಕಿದ್ದಂತೆ ಸಮಸ್ಯೆ ಉಂಟಾಗಲು ಕಾರಣವೇನು?
ಖಾಸಗಿ ಆಸ್ಪತ್ರೆಗಳು ಸರಕಾರದ ಸೂಚನೆಯಂತೆ ನಿಗದಿತ ಆಕ್ಸಿಜನ್ ಹಾಸಿಗೆ ಕೊಟ್ಟಿರಲಿಲ್ಲ. ಜತೆಗೆ ನಮಗೆ ಆಕ್ಸಿಜನ್ ಪೂರೈಕೆ ಪ್ರಮಾಣವೂ ಕಡಿಮೆ ಇತ್ತು. ಹೀಗಾಗಿ ತತ್‌ಕ್ಷಣವಾಗಿ ನಾವು ನಾಲ್ಕು ಸಾವಿರ ಆಕ್ಸಿಜನ್ ಕಾನ್ಸಂಟ್ರೇಟರ್ ತಂದು ಅಗತ್ಯ ಇರುವ ಕಡೆ ಪೂರೈಕೆ ಮಾಡಿದೆವು. ಆಗ ಪರಿಸ್ಥಿತಿ ಸುಧಾರಣೆಯಾಯಿತು.
Related Articles
ಹೌದು, ನಾವು ಮೊದಲು ಕೊಡಿ ಎಂದರೆ ಕೊಟ್ಟಿದ್ದೇವೆ ಎಂದು ಹೇಳಿದ್ದರು. ನಾವು ನಂಬಿ¨ªೆವು. ಆದರೆ ಪರಿಸ್ಥಿತಿ ಬಿಗಡಾಯಿಸಿ ದಾಗ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಪ್ರತೀ ಆಸ್ಪತ್ರೆಗೆ ಪಿಪಿಇ ಕಿಟ್ ಹಾಕಿಕೊಂಡು ಹೋಗಿ ರಿಯಾಲಿಟಿ ಚೆಕ್ ಮಾಡಲು ಹೇಳಿದೆವು. ನಾನೂ ಖು¨ªಾಗಿ ಭೇಟಿ ನೀಡಿದೆ. ಖಾಸಗಿ ಆಸ್ಪತ್ರೆಗಳು ಒಂದು ಸಾವಿರಕ್ಕೂ ಹೆಚ್ಚು ಸಾಮಾನ್ಯ ಹಾಸಿಗೆಗಳನ್ನು ಆಕ್ಸಿಜನ್ ಹಾಸಿಗೆಗಳಾಗಿ ಪರಿವರ್ತನೆ ಮಾಡಿಕೊಂಡು ಬಿಟ್ಟಿ ದ್ದವು. ಅದನ್ನು ನಮಗೆ ಕೊಟ್ಟಿರಲಿಲ್ಲ.
Advertisement
– ಖಾಸಗಿ ಆಸ್ಪತ್ರೆಗಳ ತಪ್ಪು ಲೆಕ್ಕ ತಪ್ಪಿಸಲು ಯಾವ ಕ್ರಮ ಕೈಗೊಂಡಿರಿ?ಅದನ್ನು ತಪ್ಪಿಸಿ 10 ದಿನಗಳ ಮೇಲೆ ಯಾರನ್ನೂ ಇಟ್ಟುಕೊಳ್ಳುವಂತಿಲ್ಲ ಎಂದು ನಿಯಮ ಜಾರಿ ಗೊಳಿಸಿದೆವು, ಆಗ ಸರಿ ದಾರಿಗೆ ಬಂತು. ಕಿಮ್ಸ… ಆಸ್ಪತ್ರೆಯವರು 160 ಆಕ್ಸಿಜನ್ ಹಾಸಿಗೆ ಹೆಚ್ಚುವರಿ ಕೊಟ್ಟರು. ಅಲ್ಲಿ ಐಸಿಯು ಹಾಸಿಗೆ 4 ಮಾತ್ರ ಇತ್ತು. ಒಂದೇ ದಿನದಲ್ಲಿ ಸಾಮರ್ಥ್ಯ 20 ಹೆಚ್ಚಳ ಮಾಡ ಲಾಯಿತು. ವೈದ್ಯಕೀಯ ಕಾಲೇಜುಗಳಿಗೆ ಆಕ್ಸಿ ಜನ್, ವೆಂಟಿಲೇಟರ್ ಸರಕಾರದಿಂದಲೇ ಕೊಟ್ಟೆವು. ಆಕ್ಸಿಜನ್ ಬೆಡ್ ದ್ವಿಗುಣವಾಯಿ ತು. ಆಸ್ಪತ್ರೆಗಳ ಭೇಟಿ ಅನಂತರ ಕೋವಿಡ್ ಕೇರ್ ಸೆಂಟರ್ ಮಾಡಿದ್ದು ನೆರವಾಯಿತು. – ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ಯಾಕೆ ಸವಾಲಾಯಿತು?
ಕೊರೊನಾದಿಂದ ಸಾವಿನ ಸಂಖ್ಯೆ ಜಾಸ್ತಿಯಾ ದಾಗ ಚಿತಾಗಾರಗಳ ಮುಂದೆ ಸಾಲುಗಟ್ಟಿ ನಿಲ್ಲುವಂತಾ ಯಿತು. ನಿತ್ಯ 10 ರಿಂದ 12 ಶವಗಳ ಅಂತ್ಯಕ್ರಿಯೆ ಸಾಮರ್ಥ್ಯ ಇದ್ದ ಕಡೆ 30ರವರೆಗೂ ಒತ್ತಡ ಬಿದ್ದಿತು. ಹೀಗಾಗಿ ಸಮಸ್ಯೆಯಾಯಿತು. ಎರಡು ದಿನಗಳಲ್ಲಿ ತಾವರೆಕೆರೆ ಹಾಗೂ ಗಿಡ್ಡನಹಳ್ಳಿಯಲ್ಲಿ ಚಿತಾಗಾರ ನಿರ್ಮಿಸುವ ತೀರ್ಮಾನ ಕೈಗೊಂಡು 60 ಮೃತದೇಹಗಳ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾ ಯಿತು. ರಾಜ್ಯದ ಹಲವೆಡೆ ಇದೇ ರೀತಿ ವ್ಯವಸ್ಥೆ ಮಾಡಿದ್ದರಿಂದ ಸಮಸ್ಯೆ ನಿವಾರಣೆಯಾಯಿತು. ಹಾಸಿಗೆ, ಆಕ್ಸಿಜನ್, ಚುಚ್ಚುಮದ್ದು ವಿಚಾರದಲ್ಲಿ ಸಮಸ್ಯೆ ಯಾಗಿದ್ದು ನಿಜ. ಆದರೆ ತತ್‌ಕ್ಷಣದ ನಿರ್ಧಾರ ಹಾಗೂ ಪರಿಹಾರಗಳ ಮೂಲಕ 2-3 ದಿನಗ ಳಲ್ಲಿ ಪರಿಸ್ಥಿತಿ ಸುಧಾರಣೆಯಾ ಯಿತು. ರಾಜ್ಯದಲ್ಲಿ ಇಂದು ಆಕ್ಸಿಜನ್ ಹಾಸಿಗೆ, ಐಸಿಯು ಹಾಸಿಗೆಗೆ ಸಮಸ್ಯೆ ಯಿಲ್ಲ. ಚುಚ್ಚುಮದ್ದು ಕೊರತೆಯೂ ನಿವಾರಣೆಯಾಗಿದೆ.
– ಆರ್.ಅಶೋಕ್, ಸಚಿವ