ಮಲ್ಪೆ: ತೆಂಕನಿಡಿಯೂರು ಗ್ರಾಮದಲ್ಲಿ 32 ಸಾವಿರ ಜನಸಂಖ್ಯೆ ಇದ್ದರೂ ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲದೆ ಜನರು ದೂರದ ಹೂಡೆ ಪ್ರಾಥಮಿಕ ಕೇಂದ್ರಕ್ಕೆ ಹೋಗಬೇಕಾಗಿದೆ. ಇಲ್ಲೊಂದು ಅಗತ್ಯ ಆರೋಗ್ಯ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಗ್ರಾಮಸ್ಥರು ಆಧಿಕಾರಿಗಳಲ್ಲಿ ಆಗ್ರಹ ಪಡಿಸಿದರು.
ಬುಧವಾರ ತೆಂಕನಿಡಿಯೂರು ಗ್ರಾ.ಪಂ ವತಿಯಿಂದ ತೆಂಕನಿಡಿಯೂರು ಸಮುದಾಯ ಭವನದಲ್ಲಿ ಗ್ರಾ.ಪಂ. ಅಧ್ಯಕ್ಷ ಜಯ ಕುಮಾರ್ ಬೆಳ್ಕಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ತಮ್ಮ ಬೇಡಿಕೆಯನ್ನು ಮುಂದಿಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ ಅವರು ಈ ಬಗ್ಗೆ ಜಿ.ಪಂ. ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ತೆಂಕನಿಡಿಯೂರು, ಬಡಾನಿಡಿಯೂರು ಮತ್ತು ಕೆಳಾರ್ಕಳಬೆಟ್ಟುವಿಗೆ ಪ್ರತೇÂಕ ಆರೋಗ್ಯ ಕೆಂದ್ರ ಸ್ಥಾಪನೆ ಮಾಡುವ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು ತೆಂಕನಿಡಿಯೂರಿನಲ್ಲಿ ಆದಷ್ಟು ಶೀಘ್ರದಲ್ಲಿ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದರು.
ಹೊಗೆ ರಹಿತ ಗ್ರಾಮ ಮಾಡುವ ಸರಕಾರದ ಆಶಯವೇನು ಒಳ್ಳೆಯದೇ ಆದರೆ ಒಲೆಗೆ ಸೇರುತ್ತಿದ್ದ ತೋಟದಲ್ಲಿ ಬಿದ್ದ ತೆಂಗಿನಮರದ ಸೋಗೆ ಹಾಗೂ ಇನ್ನಿತರ ಕಸವನ್ನು ಮುಂದೆ ಏನೂ ಮಾಡುವುದು. ಕಸದ ರಾಶಿ ಇನ್ನಷ್ಟು ಉಲ್ಬಣಗೊಳ್ಳುವುದಿಲ್ಲದೆ ಎಂದು ಗ್ರಾಮದ ಮಹಿಳೆಯರು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳಿಂದ ಸಮರ್ಪಕವಾದ ಉತ್ತರ ಸಿಗಲಿಲ್ಲ. ತೆಂಕನಿಡಿಯೂರು ಗ್ರಾಮದಲ್ಲಿ ಇರುವ ಸರಕಾರಿ ಜಾಗವನ್ನು ಸಾರ್ವಜನಿಕ ಉದೇªಶಕ್ಕೆ ಸಮರ್ಪಕವಾಗಿ ಬಳಸುವಲ್ಲಿ ಮತ್ತು ಕಳಪೆ ಗುಣಮಟ್ಟದ ಸ್ಯಾನಿಟರಿ ನ್ಯಾಪ್‌ಕಿನ್ ವಿತರಣೆಯಾಗಿರುವ ಬಗ್ಗೆಯೂ ನಾಗರಿಕರು ಇಲಾಖಾ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.
ತಾ.ಪಂ. ಸದಸ್ಯರಾದ ಧನಂಜಯ ಕುಂದರ್, ಶರತ್ ಕುಮಾರ್, ತೆಂಕನಿಡಿಯೂರು ಗ್ರಾ.ಪಂ. ಉಪಾಧ್ಯಕ್ಷೆ ಸುನೀತಾ ಆಚಾರ್ಯ, ಸದಸ್ಯರಾದ ಜೋÂತಿ ಶೆಟ್ಟಿ, ಕೃಷ್ಣ ಶೆಟ್ಟಿ, ಪ್ರಕಾಶ್, ಅರುಣ್ ಜತ್ತನ್ನ, ರಿಚಾರ್ಡ್ ಜೇಸುದಾಸ್, ಸರಸ್ವತಿ, ನಿರ್ಮಲ, ಲಕೀÒ$¾ರಾವ್, ಆ್ಯಗ್ನೆಲ್ ಡಿಸೋಜಾ, ಭವಾನಿ ಪೂಜಾರಿ¤, ಭೋಜರಾಜ್ ಶೆಟ್ಟಿ, ವೆಂಕಟೇಶ್ ಕುಲಾಲ್, ಲತಾ ಅಂಚನ್, ಸುನಂದ ಶೆಟ್ಟಿ, ನಾಗರಾಜ್ ಟೈಲರ್, ರವಿ ಆಚಾರ್ಯ, ಸುರೇಶ್ ನಾಯಕ್, ಸತೀಶ್ ನಾ¿ಕ್, ಗಾಯತ್ರಿ, ಗೀತಾ ಶೆಟ್ಟಿ, ಕಲ್ಪನಾ ಸುರೇಶ್, ಪ್ರಮೀಳಾ, ಮೀನಾ ಪಿಂಟೋ, ಮೆರೀಟಾ ಡಿಸೋಜಾ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.