Advertisement

ಎಂಟಿಬಿ ಬಿಜೆಪಿಯಿಂದ ಬೇರೆ ಕಡೆ ಹೋಗುವ ಯಾವುದೇ ಖಾತ್ರಿ ಇಲ್ಲ

09:37 PM Nov 27, 2019 | Lakshmi GovindaRaj |

ದೇವನಹಳ್ಳಿ: ಹೊಸಕೋಟೆ ಬಿಜೆಪಿ ಅಭ್ಯರ್ಥಿ ನಾಗರಾಜ್‌ ಹಲವಾರು ವರ್ಷ ಪಕ್ಷದಲ್ಲಿ ಬೆಳೆದು ಬಿಜೆಪಿಗೆ ಹೋಗಿದ್ದಾರೆ. ಮತ್ತೇ ಬಿಜೆಪಿಯಿಂದ ಬೇರೆ ಕಡೆಗೆ ಹೋಗುವರು ಎಂಬ ಯಾವುದೇ ಖಾತ್ರಿ ಇಲ್ಲ ಎಂದು ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಸಿ ಜಗನ್ನಾಥ್‌ ತಿಳಿಸಿದರು.

Advertisement

ತಾಲೂಕಿನ ಆಲೂರು ದುದ್ದನ ಹಳ್ಳಿ ಗ್ರಾಮದ ಗ್ರಾಪಂ ಸದಸ್ಯ ಬೀಸೆ ಗೌಡ ನಿವಾಸದಲ್ಲಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಿಂದ ಎಂಟಿಬಿ ನಾಗರಾಜ್‌ ಅವರಿಗೆ 4 ಬಾರಿ ಶಾಸಕ ಸ್ಥಾನದ ಟಿಕೇಟ್‌ ನೀಡಿ ಅದರಲ್ಲಿ 03 ಬಾರಿ ಶಾಸಕರಾಗಿ ಗೆಲವನ್ನು ಸಾಧಿಸಿದ್ದಾರೆ.

ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸ್ಥಾನವೂ ಸಹ ಸಿಕ್ಕಿತ್ತು. ಮೈತ್ರಿ ಸರ್ಕಾರದಲ್ಲಿ ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ರಾತ್ರೋ ರಾತ್ರಿ ಪಕ್ಷವನ್ನು ತೊರೆದು ಬೆಜೆಪಿಗೆ ಸೇರಿದ್ದರು. ಇದರಿಂದಾಗಿ ಮುಖಂಡರು ಮತ್ತು ಕಾರ್ಯಕರ್ತರ ಪಾಡೇನು ಎಂದು ವ್ಯಕ್ತ ಪಡಿಸಿದರು.

ದೇವನಹಳ್ಳಿ ಕ್ಷೇತ್ರದಲ್ಲಿ 2 ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋತಿದ್ದು, ಮುಂದೆ ಆ ರೀತಿ ಆಗದಂತೆ ಸಂಘಟನಾತ್ಮಕವಾಗಿ ಕೆಲಸ ಮಾಡಬೇಕಾಗಿದೆ ಎಂದರು. ಮಾಜಿ ಶಾಸಕ ಮುನಿ ನರಸಿಂಹಯ್ಯ ಮಾತನಾಡಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನದಟ್ಟು ಮಾಡಬೇಕು.

ಚುನಾವಣಾ ಪೂರ್ವದಲ್ಲಿ ನರೇಂದ್ರ ಮೋದಿ ಕಪ್ಪು ಹಣ ಮತ್ತು ಎಲ್ಲರ ಖಾತೆಗೆ 15 ಲಕ್ಷ ರೂ ಹಾಕುತ್ತೇನೆ ಎಂಬ ಸುಳ್ಳು ಭರವಸೆ ನೀಡಿ ಜನರನ್ನು ವಂಚಿಸಿದ್ದಾರೆ. ಪಕ್ಷದಲ್ಲಿ ಎಲ್ಲಾ ರೀತಿಯ ಸ್ಥಾನ ಮಾನ ಪಡೆದು ಅನ್ಯ ಪಕ್ಷಕ್ಕೆ ಹೋಗಿ ಉಪ ಚುನಾವಣೆ ಗೆ ಕಾರಣ ವಾಗಿರುವ ಬಿಜೆಪಿ ಅಭ್ಯರ್ಥಿಗಳಿಗೆ ಆಯಾ ಕ್ಷೇತ್ರದಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

Advertisement

ಜಿಪಂ ಸದಸ್ಯ ಕೆ.ಸಿ ಮಂಜುನಾಥ್‌ ಮಾತನಾಡಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ರಾಜಕೀಯ ಬೆಳವಣಿಗೆ ಬಗ್ಗೆ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳಬಾರದು. ಸ್ಥಳೀಯ ವಾಗಿ ಕಾರ್ಯಕರ್ತರು ಸಂಘಟಿತರಾಗಬೇಕು. ಮಾಜಿ ಮುಖ್ಯ ಮಂತ್ರಿ ಸಿದ್ಧ ರಾಮಯ್ಯ ಮತ್ತು ಮೈತ್ರಿ ಸರ್ಕಾರದಲ್ಲಿ ಜಾರ ಆಗಿದ್ದ ಯೋಜನೆಗಳನ್ನು ಮತದಾರರಿಗೆ ನೆನಪಿನ‌ಲ್ಲಿ ಉಳಿಯುವಂತೆ ಮನದಟ್ಟು ಮಾಡಬೇಕು ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನ ಕುಮಾರ್‌ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ 2020 ರ ಮಾರ್ಚ ಮತ್ತು ಏಪ್ರಿಲ್‌ ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬರಲಿದ್ದು ಕಾರ್ಯಕರ್ತರು ಈಗಿನಿಂದಲೇ ಗ್ರಾಮಗಳಲ್ಲಿರುವ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ಮಾಡಬೇಕು. ಚುನಾವಣೆಗೆ ಸ್ಪರ್ಧಿಸುವ ಸೂಕ್ತ ಅಭ್ಯರ್ಥಿಯನ್ನು ಕಾರ್ಯಕರ್ತರೇ ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈ ವೇಳೆಯಲ್ಲಿ ಜಿಪಂ ಸದಸ್ಯ ಲಕ್ಷ್ಮಿà ನಾರಾಯಣ್‌, ರಾಧಮ್ಮ, ತಾಪಂ ಅಧ್ಯಕ್ಷೆ ಚೆ„ತ್ರಾ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್‌ ಆರ್‌ ರವಿಕುಮಾರ್‌, ಕೆಪಿಸಿಸಿ ಸದಸ್ಯರಾದ ಪಟಾಲಪ್ಪ, ಎ ಚಿನ್ನಪ್ಪ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ ಅಧ್ಯಕ್ಷ ಮಾರುತಿ, ತಾಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ಸುಮಂತ್‌, ಮುಖಂಡರಾದ ಕೆವಿ ಸ್ವಾಮಿ, ನಾರಾಯಣಸ್ವಾಮಿ ಸೋಮಶೇಖರ್‌, ಶ್ರೀರಾಮಯ್ಯ, ಬೀಸೆ ಗೌಡ, ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next