Advertisement

ರಾಜ್ಯದಲ್ಲಿ ಜೆಡಿಎಸ್‌ಗೆ ಭವಿಷ್ಯವಿಲ್ಲ

11:01 PM Dec 14, 2019 | Lakshmi GovindaRaj |

ಜಮಖಂಡಿ: ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್‌ಗೆ ಭವಿಷ್ಯ ಇಲ್ಲದಂತಾಗಿದೆ. ಪಕ್ಷದ ಭವಿಷ್ಯ ಕರಾಳವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಆಸೆಗಾಗಿ ಪಕ್ಷ ಬದಲಿಸಲಾರೆ. ಜೆಡಿಎಸ್‌ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ನನ್ನ ರಾಜಕೀಯ ಹಿತಾಸಕ್ತಿ ಬಯಸುವವರು ಮತ್ತು ಸ್ನೇಹಿತರ ಸಲಹೆಯಂತೆ ಹೆಜ್ಜೆ ಹಾಕುತ್ತೇನೆ.

Advertisement

ಜೆಡಿಎಸ್‌ನಲ್ಲಿ ಜಿಲ್ಲಾಧ್ಯಕ್ಷರಿಗೆ ಸೂಕ್ತ ಸೌಲಭ್ಯ ನೀಡಿ, ಅವರಿಂದ ಪಕ್ಷ ಸಂಘಟನೆಗೆ ಚಾಲನೆ ನೀಡಬೇಕೆಂದು ಹೇಳಿದರೂ ದೇವೇಗೌಡ, ಕುಮಾರಸ್ವಾಮಿ ಗಮನ ಹರಿಸುತ್ತಿಲ್ಲ. ಜೆಡಿಎಸ್‌ನಲ್ಲಿ ಯಾರಿಗೂ ಜವಾಬ್ದಾರಿ ನೀಡುತ್ತಿಲ್ಲ. ಜೆಡಿಎಸ್‌ ಮುಖಂಡರು ಉತ್ತರ ಕರ್ನಾಟಕ ವನ್ನು ನಿರ್ಲಕ್ಷಿಸಿದ್ದು, ಅವರಿಗೆ ಈ ಭಾಗದಲ್ಲಿ ಪಕ್ಷ ಸಂಘಟನೆ ಬಗ್ಗೆ ಚಿಂತನೆ ಇಲ್ಲ ಎಂದರು. ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಸಹಿಸಿಕೊಳ್ಳಲು ಸಾಧ್ಯವಿಲ್ಲ.

ಪಕ್ಷಾತೀತವಾಗಿ ಹೋರಾಟ ನಡೆಸುತ್ತೇನೆ. ಎಲ್ಲ ಪಕ್ಷಗಳ ಹಣೆಬರಹ ಅಷ್ಟೇ ಆಗಿವೆ. ಪಕ್ಷ, ರಾಜಕೀಯ ಎಲ್ಲವೂ ಒಂದೇ ಆಗಿವೆ. ಎಲ್ಲಿ ದುಡ್ಡು-ಜಾತಿ ಬಲ ಹೆಚ್ಚಿರುತ್ತದೆಯೋ ಅಲ್ಲಿ ಎಲ್ಲವೂ ನಡೆಯುತ್ತದೆ. ಬಿಜೆಪಿ-ಕಾಂಗ್ರೆಸ್‌ ಪಕ್ಷಗಳಲ್ಲಿ ಹೈಕಮಾಂಡ್‌ ಆಜ್ಞೆ ಹೆಚ್ಚಾಗುತ್ತಿದೆ. ಬಿಜೆಪಿಗೆ ಉಪಚುನಾವಣೆಯಲ್ಲಿ 12 ಸ್ಥಾನಗಳು ಬಂದರೂ ಸರ್ಕಾರ ಸುಭದ್ರವಾಗಿಲ್ಲ. ಉಪಜಾತಿಗಳಿಗೆ ಡಿಸಿಎಂ ಹುದ್ದೆ ನೀಡುವ ಸ್ಥಿತಿ ಬಿಜೆಪಿಗೆ ಬಂದಿದೆ. ಉಪಮುಖ್ಯಮಂತ್ರಿ ಸ್ಥಾನಕ್ಕೆ ಸಾಂವಿಧಾನಿಕ ಬೆಲೆಯಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next