Advertisement

ಭಿನ್ನಾಭಿಪ್ರಾಯ ಬಗೆಹರಿಸದಿದ್ರೆ ಜೆಡಿಎಸ್‌ಗೆ ಭವಿಷ್ಯ ಇಲ್ಲ

11:15 PM Sep 13, 2019 | Lakshmi GovindaRaju |

ಧಾರವಾಡ: ವರಿಷ್ಠರು ಕುಳಿತು ಪಕ್ಷದಲ್ಲಿನ ಭಿನ್ನಾಭಿಪ್ರಾಯ ಬಗೆಹರಿಸದಿದ್ದರೆ ಜೆಡಿಎಸ್‌ಗೆ ಭವಿಷ್ಯವೇ ಇಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯ ಶಮನಗೊಳಿಸಲು ವರಿಷ್ಠರು ಚಿತ್ತಹರಿಸ ಬೇಕು. ಸಮ್ಮಿಶ್ರ ಸರ್ಕಾರವಿದ್ದಾಗ ಪಕ್ಷದವರಿಗೆ ಆದ್ಯತೆ ನೀಡಿಲ್ಲ ಎಂಬ ನೋವು ಇತ್ತು. ಆಗಿನ ಅತೃಪ್ತಿ ಈಗ ಸ್ಫೋಟಗೊಂಡಿದೆ. ಸದ್ಯ ಜಿ.ಟಿ. ದೇವೇಗೌಡರ ಹೇಳಿಕೆ ಗಳನ್ನು ಗಮನಿಸಿದರೆ ಅವರು ಪಕ್ಷದಲ್ಲಿ ಉಳಿಯುತ್ತಾರೆ ಎಂಬ ವಿಶ್ವಾಸವಿಲ್ಲ ಎಂದರು.

Advertisement

ಸರ್ಕಾರ ಇದ್ದಾಗ ನಮ್ಮನ್ನೆಲ್ಲ ಸರಿಯಾಗಿ ನೋಡಿಲ್ಲ ಎಂದು ಅನೇಕ ಜನ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನಗೂ ಸಾಕಷ್ಟು ನೋವಾಗಿದೆ. ಆದರೆ ನಾನು ಪಕ್ಷದ ಶಿಸ್ತು ಅಳವಡಿಸಿಕೊಂಡಿ ರುವ ಕಾರಣ ಎಲ್ಲೂ ಹೇಳಿಕೊಂಡಿಲ್ಲ. ಜಿ.ಟಿ.ಡಿ. ಎಲ್ಲಿಗೆ ಹೋಗುತ್ತಾರೆ ಎಂಬುದು ಗೊತ್ತಿಲ್ಲ. ಆದರೆ ಅವರು ಪಕ್ಷದಲ್ಲಂತೂ ಇರುವುದಿಲ್ಲ. ಅವರಿಗೆ ಮೊದಲಿನಿಂದಲೂ ಅಸಮಾಧಾನವಿತ್ತು. ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣ ಇದೆ ಎಂದು ಅವರು ಹೇಳಿದ್ದು ನನಗೂ ಸರಿ ಅನಿಸಿತ್ತು. ಅಸಮಾಧಾನಿತರ ಜೊತೆ ಪಕ್ಷದ ವರಿಷ್ಠರು ಮಾತನಾಡುವುದು ಅವರ ಧರ್ಮ. ಹೀಗಾಗಿ ಜಿಟಿಡಿ ಅವರೊಂದಿಗೂ ಮಾತನಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next