Advertisement
ಹೆಜಮಾಡಿ ಟೋಲ್ ಪ್ಲಾಜಾದಲ್ಲಿಗುರುವಾರ ಕೇವಲ ಒಂದು ದ್ವಾರವನ್ನು ನಗದು ಪಾವತಿಗೆ ಮೀಸಲಿಡಲಾಗಿತ್ತು. ಆ ವೇಳೆ ಟೋಲ್‌ನಲ್ಲಿ ವಾಹನಗಳ ಒತ್ತಡವೂ ಹೆಚ್ಚಾಗಿತ್ತು. ಫಾಸ್ಟ್ಯಾಗ್ ಇದ್ದರೂ ಆ ಖಾತೆಯಲ್ಲಿ ನಗದು ಇಲ್ಲವಾದಲ್ಲಿ ಅಂತಹ ವಾಹನ ಸವಾರರು ದುಪ್ಪಟ್ಟು ಪಾವತಿಸಿ ತೆರಳಬೇಕಾಗುತ್ತದೆ. ಕೆಲವರು ತಾವು ವಾಹನವನ್ನು ಹಿಂದೆಗೆದು ಖಾತೆಗೆ ಹಣ ತುಂಬಿಸಿ ಮುಂದುವರಿದರು ಅಥವಾ ನಗದು ಪಾವತಿ ಸಾಲಿನಲ್ಲಿ ತೆರಳಿದರು.
ಬಂಟ್ವಾಳ: ಗುರುವಾರ ಸಂಜೆ ಬಳಿಕ ಬ್ರಹ್ಮರಕೂಟ್ಲು ಫ್ಲಾಜಾದಲ್ಲಿ ಫಾಸ್ಟ್ಯಾಗ್ ಅಳವಡಿಸದೇ ಇರುವ ಎಲ್ಲ ವಾಹನಗಳಿಗೆ ರಿಯಾಯಿತಿ ಸಿಗುವ ಡಬಲ್ ಟಿಕೆಟ್ ಬದಲು ಸಿಂಗಲ್ ಟಿಕೆಟ್ ಮಾತ್ರ ನೀಡಲಾಗುತ್ತಿದೆ. ಬಸ್ ಸಂಚಾರ ಮೊಟಕು
ಉಳ್ಳಾಲ: ತಲಪಾಡಿ ಟೋಲ್ ಪ್ಲಾಜಾ ದಲ್ಲಿ ಗುರುವಾರ ಸಂಜೆಯಿಂದಲೇ ನಗದು ಸ್ವೀಕಾರಕ್ಕೆ ಒಂದು ಲೇನ್ ಮಾತ್ರ ಕಲ್ಪಿಸಿದ್ದ ರಿಂದ ವಾಹನಗಳ ಸರದಿ ಸಾಲು ಹೆಚ್ಚಾಗಿತ್ತು.ಮಂಗಳೂರಿನಿಂದ ತಲಪಾಡಿಗೆ ಬರುವ ಬಸ್‌ಗಳಿಗೂ ಟೋಲ್ ಕಡ್ಡಾಯವಾದ್ದರಿಂದ ಆ ಬಸ್‌ಗಳು ಗೇಟ್ ಸಮೀಪದಿಂದಲೇ ಮರಳಿದವು. ಮೇಲಿನ ತಲಪಾಡಿ ಮತ್ತು ಕೇರಳದ ಗಡಿ ಪ್ರದೇಶಕ್ಕೆ ತೆರಳುವವರು ತೊಂದರೆಗೊಳಗಾದರು.
Related Articles
ಈ ನಡುವೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಫಾಸ್ಟ್ಯಾಗ್‌ಗಾಗಿ ಅರ್ಜಿ ಸಲ್ಲಿಸಿದ ಸಾರ್ವಜನಿಕರಿದ್ದು, ತಿಂಗಳು ಕಳೆದರೂ ಅವರಿಗೆ ಫಾಸ್ಟ್ಯಾಗ್ ಲಭ್ಯವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
Advertisement